24th April 2024
Share

TUMKURU: SHAKTHIPEETA FOUNDATION

ಭಾರತ ದೇಶ ಶೇ 70 ರಷ್ಟು ಕೃಷಿಕರ ದೇಶ ಎನ್ನುತ್ತಾರೆ. ನಿಖರವಾದ ದಾಖಲೆಗಳಿಲ್ಲವಂತೆ? ಜ್ಞಾನದಾನಿಗಳು ಜ್ಞಾನ ದಾನ ಮಾಡಬಹುದು.

ನೋಟ್ ಬ್ಯಾನ್ ಮಾಡಿದ ದೇಶ ನಮ್ಮದು. ಜಿ.ಎಸ್.ಟಿ. ಜಾರಿ ಮಾಡಿದ ದೇಶ ನಮ್ಮದು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ದೇಶ ನಮ್ಮದು, ಖಾಸಗಿ ಬಸ್‍ಗಳ ರಾಷ್ಟ್ರೀಕರಣ ಮಾಡಿದ ದೇಶ ನಮ್ಮದು. ಇನ್ನೂ ಇತ್ಯಾದಿ…

ಆದರೇ ರೈತರ ಜಮೀನಿಗೆ ರಸ್ತೆ/ದಾರಿ ಮಾಡಲು ಕಾನೂನು ರೂಪಿಸಿಲ್ಲ. ಯಾವೊದೋ ಕಾಲದಲ್ಲಿ 8.25 ಅಡಿ ಕಾಲು ದಾರಿ ಅಥವಾ 20 ಅಡಿ ಅಗಲದ ಬಂಡಿದಾರಿಯನ್ನು ವಿಲೇಜ್ ನಕ್ಷೆಯಲ್ಲಿ ಮಾಡಿದ್ದಾರಂತೆ. ಇದು ಪಕ್ಕಾ ಇಲ್ಲವಂತೆ.

ದೇಶದ ಪ್ರತಿಯೊಬ್ಬ ರೈತರ ಜಮೀನಿಗೂ ಪಕ್ಕಾ 12 ರಿಂದ 20 ಅಡಿ ದಾರಿ/ರಸ್ತೆ ಇರಲೇ ಬೇಕು. 5 ರಿಂದ 10 ಗುಂಟೆ ಜಮೀನು ಇದ್ದರೂ, ಆ ಜಮೀನಿಗೆ ಟ್ರಾಕ್ಟರ್ ಎಲ್ಲಾ ಕಾಲದಲ್ಲೂ ಹೋಗುವಂತಿರ ಬೇಕು. ಇದರಿಂದ ರೈತರಿಗೆ ಬಹಳಷ್ಟು ಅನೂಕೂಲವಾಗಲಿದೆ. ಜೊತೆಗೆ ನಮ್ಮ ಜಮೀನಿಗೆ ದಾರಿ ಇದೆ ಎಂಬ ಸಮಾದಾನವಿದೆ. ರೈತರ ಆದಾಯ ಹೆಚ್ಚಲಿದೆ. ದೇಶದ ಜಿಡಿಪಿ ತಾನಾಗಿಯೇ ಹೆಚ್ಚಲಿದೆ.

ಇದು ಜೇನುಗೂಡಿಗೆ ಕೈಹಾಕಿದ ಹಾಗೆ, ಮೀಸಲಾತಿ ಎಷ್ಟು ಗೊಂದಲವೋ, ಅಷ್ಟೆ ಗೊಂದಲ ರೈತರ ಜಮೀನಿನ ದಾರಿ ಸಮಸ್ಯೆಯೂ ಜಟಿಲವಾಗಿದೆ. ದೇಶದ ಹಿತದೃಷ್ಠಿಯಿಂದ ಇದಕ್ಕೊಂದು ಕಠಿಣವಾದ ಕಾನೂನು ಜಾರಿಯಾಗಲೇ ಬೇಕು.

ಹೈಸ್ಪೀಡ್ ಬುಲ್ಲೆಟ್ ಟ್ರೈನು ಬೇಕು, ಹೈಪರ್ ಲೂಪ್ ಸಾರಿಗೆ ವ್ಯವಸ್ಥೆನೂ ಬೇಕು, ಮೆಟ್ರೋ, ವಿಮಾನÉಲ್ಲವೂ ಆಧುನೀರಣವಾಗ ಬೇಕು. ಅದೇ ರೀತಿ ರೈತರ ಜಮೀನಿಗೂ ದಾರಿ ಬೇಕೆ ಬೇಕು?

ರಾಜ್ಯದ ಯಾವ ಪಕ್ಷ ಪ್ರತಿಯೊಬ್ಬ ರೈತರಜಮೀನಿಗೊಂದು ರಸ್ತೆ/ದಾರಿ ?. ಅಂಶÀವನ್ನು   ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಿದೆ. ಕಾದು ನೋಡೋಣ. ನಾನಂತು ನವಕರ್ನಾಟಕ ವಿಷನ್ ಡಾಕ್ಯುಮೆಂಟ್- 2047 ರಲ್ಲಿ ಅಂಶವನ್ನು ಸೇರ್ಪಡೆ ಮಾಡಿದ್ದೇನೆ. ತಮ್ಮಗಳ ಅಭಿಪ್ರಾಯ, ಸಲಹೆ ನೀಡಬಹುದು.

ನಮ್ಮ ಗ್ರಾಮ ನಮ್ಮ ರಸ್ತೆ, ನಮ್ಮ ಹೊಲ ನಮ್ಮ ದಾರಿ ಹೀಗೆ ಆನೇಕ ಯೋಜನೆಗಳ ಸಾಧಕ-ಭಾದಕಗಳ ಬಗ್ಗೆ ಚರ್ಚೆಯಾಗಲಿ.