28th March 2024
Share

TUMAKURU:SHAKTHIPEETA FOUNDATION

ನಾನು ತುಮಕೂರು ನಿಮ್ಜ್ ಬಗ್ಗೆ ಬರೆಯಲು ಆರಂಭಿಸಿದೆ. ನನಗೆ ಕೆಲವರು ಸಲಹೆ ನೀಡಿದ್ದು. ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದ ಕನಸು, ಆರಂಭವಾದ ದಿನದಿಂದ 2047 ರವರೆಗೆ ಹೇಗೆ ಇರಬೇಕು ಎಂಬ ಬಗ್ಗೆ. ಒಂದು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ. ಇದು ದೇಶದ ಬೃಹತ್ ಕೈಗಾರಿಕಾ ಪ್ರದೇಶಗಳಿಗೆ ಮಾದರಿಯಾಗಲಿ ಸಾರ್. ಜೊತೆಗೆ ಒಂದು ಮಾನಿಟರಿಂಗ್ ಸೆಲ್ ಸ್ಥಾಪಿಸಿ’ ನಿರಂತರವಾಗಿ ಪಾಲೋ ಅಫ್ ಮಾಡಲು ಯೋಜನೆ ರೂಪಿಸಿ ಎನ್ನುವುದಾಗಿದೆ.

ಇದೊಂದು ಅತ್ಯುತ್ತಮವಾದ ಸಲಹೆ, ಯೋಜನೆಗಳನ್ನು ಹೇಳುವುದರ ಜೊತೆಗೆ ಒಂದು ಬೆಸ್ಟ್ ಪ್ರಾಕ್ಟೀಸಸ್ ಇದ್ದರೆ ಚೆನ್ನಾ. ಈ ಬಗ್ಗೆ ನಾನು ವಸಂತನರಸಾಪುರದಲ್ಲಿಯೇ  ಶಕ್ತಿಪೀಠ ಡಾಟಾ ಪಾರ್ಕ್ ಸ್ಥಾಪಿಸಿ, ಈ ಕೈಗಾರಿಕಾ ಪ್ರದೇಶದ ಅಧ್ಯಯನ, ರಾಜ್ಯದ ನಿರುದ್ಯೋಗಿಗಳ, ಕುಶಲ ಕರ್ಮಿಗಳ, ಆರ್ಟಿಸಾನ್ ಮ್ಯೂಸಿಯಂ ಮತ್ತು ತುಮಕೂರು ಜಿಲ್ಲೆಯ ಅಭಿವೃದ್ಧಿ ಡಾಟಾ ಪಾರ್ಕ್ ಸ್ಥಾಪಿಸಲು ಯೋಚಿಸಿದ್ದೇನೆ.

ಇದು ನನ್ನ ಜೀವನದ ಕನಸಿನ ಯೋಜನೆಯೂ ಆಗಿದೆ. ಕಳೆದ ಹಲವಾರು ವರ್ಷಗಳ ಹಿಂದೆ ತುಮಕೂರು ಜಿಲ್ಲೆ ನಿರುದ್ಯೋಗ ರಹಿತ ಜಿಲ್ಲೆ ಆಗ ಬೇಕು ಎಂಬ ನನ್ನ ಪತ್ರಿಕಾ ಹೇಳಿಕೆಯನ್ನು, ನನ್ನ ಒಬ್ಬ ಸ್ನೇಹಿತ ಪ್ರತಿ ವರ್ಷವೂ ನನಗೆ ಕಳುಹಿಸುತ್ತಾ ಜ್ಞಾಪಿಸುತ್ತಿರುವುದು, ನಿಜಕ್ಕೂ ನನಗೆ ಪ್ರೇರಣೆ ಆಗಿದೆ. 

ತುಮಕೂರು ಜಿಲ್ಲಾ ಸಿಂಗಲ್‍ವಿಂಡೋ  ಸಮಿತಿಯಲ್ಲಿ ದಿನಾಂಕ:18.11.2020 ರಂದು  ನಡೆದ 137 ನೇ ಮೀಟಿಂಗ್ ನಲ್ಲಿಯೇ ಶಕ್ತಿಪೀಠ ಡಾಟಾ ಪಾರ್ಕ್ ಗೆ ಅನುಮೋದನೆ ನೀಡಿದೆ ಎಂದು ತಿಳಿಸಲು ಇಚ್ಚಿಸುತ್ತೇನೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿಯೂ ಖಾಸಗಿ ಡಾಟಾ ಪಾರ್ಕ್ ಬಗ್ಗೆ ಪಾಲಿಸಿ ಮಾಡಲಾಗಿದೆ. ಈ ಕಡತಗಳ ಅನುಸರಣೆಯನ್ನು ನಾನು ಮಾಡಿದ್ದೇನೆ. ಕೆಲವು ಸಲ ನವಿಲು ರೆಕ್ಕೆ ಕುಣಿಸಿದರೆ ಕೆಂಬಕ್ಕಿ ಪುಕ್ಕ ತರಕೊಂಡಂತೆ ಎಂಬ ಗಾದೆಯಂತೆ, ಜೀವನದಲ್ಲಿ ಹಲವಾರು ಕನಸುಗಳು ಕನಸಾಗಿಯೇ ಉಳಿದು ಕೊಳ್ಳುತ್ತದೆ.

ಶಕ್ತಿಪೀಠ ಫೌಂಡೇಷನ್ ವತಿಯಿಂದ, ಬಾಡಿಗೆ ಆಧಾರಿತ/ ಗುತ್ತಿಗೆ ಆದಾರಿತ/ ಸ್ವಂತವಾಗಿ ಈ ಕೆಳಕಂಡ ಯೋಜನೆಗಳನ್ನು 2025 ರೊಳಗೆ ಲೋಕಾರ್ಪಣೆ ಮಾಡಲು ಗುರಿ ಹೊಂದಲಾಗಿದೆ. ಕನಿಷ್ಠ ಸೌಲಭ್ಯಗಳ ಮೂಲಭೂತ ಸೌಕರ್ಯಗಳಿಗಾಗಿ ಭರದ ಸಿದ್ಧತೆ ನಡೆದಿದೆ. ಒಂದೊಂದು ಯೋಜನೆಗೂ ಒಂದೊಂದು ವಿಷನ್ ಗ್ರೂಪ್/ಪ್ರಷರ್ ಗ್ರೂಪ್ ಶ್ರಮಿಸುತ್ತಿದೆ.

  1. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ ಕುಂದರನಹಳ್ಳಿಯಲ್ಲಿ ಹೆಚ್.ಎ.ಎಲ್ ಮ್ಯೂಸಿಯಂ/ ಸಂಸದರ ಆದರ್ಶ ಗ್ರಾಮ ಯೋಜನೆ ಅಧ್ಯಯನ ಪೀಠ. (ಜಮೀನು ಕ್ರಯ, ಮಂಜೂರಾತಿ ಅಥವಾ ಹಾಲಿ ಇರುವ ಕಟ್ಟಡದಲ್ಲಿ ಆರಂಭಿಸಲು ಚಿಂತನೆ ನಡೆಯುತ್ತಿದೆ)
  2. ತುಮಕೂರು ನಗರದಲ್ಲಿ ಶಕ್ತಿಪೀಠ ಮ್ಯೂಸಿಯಂ.(ಕಟ್ಟಡ ನಿರ್ಮಾಣವಾಗುತ್ತಿದೆ).
  3. ವಸಂತನರಸಾ ಪುರದಲ್ಲಿ ಶಕ್ತಿಪೀಠ ಡಾಟಾ ಪಾರ್ಕ್.(ಕಟ್ಟಡ ಆರಂಭಿಸಬೇಕಿದೆ).
  4. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕಿನ ಬಗ್ಗನಡು ಕಾವಲ್‍ನಲ್ಲಿ   ಶಕ್ತಿಪೀಠ ಕ್ಯಾಂಪಸ್.(ಕಟ್ಟಡದ ಕಾಮಗಾರಿ ಕುಂಠಿತವಾಗಿದೆ)
  5. ಬೆಂಗಳೂರಿನಲ್ಲಿ ಶಕ್ತಿಪೀಠ ನಾಲೇಡ್ಜ್ ಬ್ಯಾಂಕ್-2047 ಗೆಸ್ಟ್ ಹೌಸ್.(ಕಾರ್ಯ  ಆರಂಭವಾಗಿದೆ.)
  6. ದೆಹಲಿಯಲ್ಲಿ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಗೆಸ್ಟ್ ಹೌಸ್.(ತಾತ್ಕಾಲಿಕವಾಗಿ ಜಿ.ಎಸ್.ಬಸವರಾಜ್ ರವರ ನಿವಾಸದಲ್ಲಿಯೇ ಆರಂಭಿಸುವ ಆಲೋಚನೆ ಇದೆ.)
  7. ಶಕ್ತಿಪೀಠ ನಾಲೇಡ್ಜ್ ಬ್ಯಾಂಕ್-2047 ಜನ ಜಾಗೃತಿಗಾಗಿ ಹೈಟೆಕ್ ಮೊಬೈಲ್ ವಾಹನ/ಕಚೇರಿ.(ಇನ್ನೂ ಕನಸಾಗಿಯೇ ಇದೆ)

ವಸಂತ ನರಸಾಪುರದ ಕೈಗಾರಿಕಾ ಪ್ರದೇಶದ ಉಧ್ಯಮಿಗಳ ಮತ್ತು ಭೂ ಸಂತ್ರಸ್ಥರ ಜೊತೆ ಸಮಾಲೋಚನೆ ಆರಂಭಿಸಲಾಗಿದೆ. ಆಸಕ್ತರು ಕರೆ ಮಾಡಬಹುದು.