29th March 2024
Share

ತುಮಕೂರು ಇಂಡಸ್ಟಿಯಲ್ ನೋಡ್:ವಿಷನ್2047

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಕನಸು ಕಂಡ ಹಲವಾರು ಯೋಜನೆಗಳ ಪೈಕಿ ವಿಜ್ಞಾನ ಗುಡ್ಡ ಮತ್ತು ಆರ್ಟಿಸಾನ್ ಹಬ್ ಎರಡು ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದರೆ ತಪ್ಪಾಗಲಾರದು.

ಶ್ರೀ ಟಿ.ಆರ್.ರಘೋತ್ತಮರಾವ್ ಅವರ ಪ್ರಕಾರ ತುಮಕೂರು ಇಂಡಸ್ಟ್ರಿಯಲ್ ನೋಡ್ ಅನ್ನು, ದೇಶದಲ್ಲಿಯೇ ಅತ್ಯುತ್ತಮವಾದ ಬೆಸ್ಟ್ ಪ್ರಾಕ್ಟೀಸ್ ಯೋಜನೆಯಾಗಿ ಮಾಡಬೇಕಂತೆ. ನನಗೂ ಸಹ ನಾನು ಕನಸು ಕಂಡ ನಿಮ್ಜ್ ತುಮಕೂರಿನಲ್ಲಿ ತಲೆ ಎತ್ತಿರುವುದು ನಿಜಕ್ಕೂ ಸಂತಸ ತಂದಿದೆ.

ಶ್ರೀ ಜಿ.ಎಸ್.ಬಸವರಾಜ್ ರವರು ಎಷ್ಟೇ ಕಷ್ಟವಾಗಲಿ, ಇಲ್ಲಿ ತುಮಕೂರು ಏರ್‍ಪೋರ್ಟ್/ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್-2 ನಿರ್ಮಾಣ ಮಾಡ ಬೇಕು ಎಂಬ ಕನಸಿಗೆ ಬೀಜ ಬಿತ್ತಿದ್ದಾರೆ.

ಈ ಪ್ರದೇಶದಲ್ಲಿ ತಲೆ ಎತ್ತುವ ಶಕ್ತಿಪೀಠ ಡಾಟಾ ಪಾರ್ಕ್‍ನಲ್ಲಿ, ಒಂದು ಆರ್ಟಿಸಾನ್ ಮ್ಯೂಸಿಯಂ ಮಾಡುವ ಬಗ್ಗೆ ಕೆಐಡಿಬಿ ಡೆವಲಪ್ ಮೆಂಟ್ ಆಫೀಸರ್ ಶ್ರೀ ಲಕ್ಷ್ಮೀಶ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಜೊತೆಗೆ ಈ ಕೈಗಾರಿಕಾ ಪ್ರದೇಶದಲ್ಲಿ ಸಿದ್ಧಪಡಿಸುವ, ಪ್ರತಿಯೊಂದು ಉತ್ಪನ್ನಗಳ ಮ್ಯೂಸಿಯಂ ಸಹ ಇರುವುದು ಅಗತ್ಯವಾಗಿದೆ. ಪ್ರತಿಯೊಂದು ಅಡಿ ಜಮೀನು ಮತ್ತು ಘಟಕಗಳÀ ಡಿಜಿಟಲ್ ಡಾಟಾ ಬೇಸ್ ಸಂಗ್ರಹಿಸಿ, ಅನಾಲೀಸಿಸ್ ಮಾಡುವ ಚಿಂತನೆ ಇದೆ.

ಶಕ್ತಿಪೀಠ ಡಾಟಾ ಪಾರ್ಕ್‍ನಲ್ಲಿ ಇನ್‍ವೆಸ್ಟ್ ಕರ್ನಾಟಕ/ತುಮಕೂರು ಮ್ಯೂಸಿಯಂ ಜೊತೆಗೆ, ಇವೆಲ್ಲಾ ಕನಸುಗಳ ಕಚೇರಿಯಂತೆ ಕಾರ್ಯ ನಿರ್ವಹಿಸಲು ಆಲೋಚನೆ ಇದೆ.

ವಿನೂತನ ಐಡಿಯಾ ಗಳೊಂದಿಗೆ ಆಸಕ್ತರ ಸೂಕ್ತ ಸಲಹೆ ಪಡೆದು, ತುಮಕೂರು ಇಂಡಸ್ಟಿಯಲ್ ನೋಡ್ ವಿಷನ್-2047 ಸಿದ್ಧಪಡಿಸುವುದು ಅಗತ್ಯವಾಗಿದೆ. ವಸಂತನರಸಾಪುರದ ಕೈಗಾರಿಕಾ ಅಸೋಶಿಸಿಯೇಷನ್ ನ ಕಾರ್ಯದರ್ಶಿ ಶ್ರೀ ಹರೀಶ್ ರವರು ಮುಂದಿನ ಸಭೆಯಲ್ಲಿ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.ಪ್ರತಿಯೋಬ್ಬರ ಸಲಹೆಗಳನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.

ಶ್ರೀ ಟಿ.ಆರ್.ರಘೋತ್ತಮರಾವ್ ರವರು ಇದೂವರೆಗೂ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಇಂಡಸ್ಟಿಯಲ್ ನೋಡ್ ವ್ಯಾಪ್ತಿಯಲ್ಲಿ ಪ್ರಯತ್ನಿಸಿರುವ ಯೋಜನೆಗಳ  ಒಂದು ಪಟ್ಟಿ ಮಾಡುತ್ತಿದ್ದಾರೆ.

ಕೆ.ಆರ್.ಸೋಹನ್ ರವರು ತುಮಕೂರು ಇಂಡಸ್ಟಿಯಲ್ ನೋಡ್:ವಿಷನ್-2047 ಪಟ್ಟಿ ಸಿದ್ಧಪಡಿಸುತ್ತಿದ್ದಾರೆ,  ನಿಮ್ಮ ಐಡಿಯಾ?

  1. ತುಮಕೂರು ಇಂಡಸ್ಟಿಯಲ್ ನೋಡ್ ನಾಲೇಡ್ಜ್ ಬ್ಯಾಂಕ್-2047
  2. ತುಮಕೂರು ಇಂಡಸ್ಟಿಯಲ್ ನೋಡ್ ಮ್ಯೂಸಿಯಂ.
  3. ತುಮಕೂರು ಇಂಡಸ್ಟಿಯಲ್ ನೋಡ್ ವಿಷನ್-2047 ನ ವಿಷನ್ ಗ್ರೂಪ್  ಮತ್ತು ಪ್ರಷರ್ ಗ್ರೂಪ್.
  4. ತುಮಕೂರು ಏರ್ ಪೋರ್ಟ್.
  5. ವಸಂತ ನರಸಾಪುರದವರೆಗೆ ಮೆಟ್ರೋ.
  6. ವಸಂತ ನರಸಾಪುರದವರೆಗೆ ಸಬ್ ಅರ್ಬನ್ ರೈಲು.
  7. ವಸಂತ ನರಸಾಪುರದವರೆಗೆ ಸಿಟಿ ಬಸ್ ಸೇವೆ.
  8. ವಸಂತ ನರಸಾಪುರದಲ್ಲಿ ಹೈಟೆಕ್ ಸಿಟಿ ಬಸ್ ನಿಲ್ಧಾಣ.
  9. ಉದ್ದೇಶಿತ ವಸಂತ ನರಸಾಪುರದ ರೈಲ್ವೆ ಸ್ಟೇಷನ್ ನಿಂದ ಮಿನಿ ಬಸ್ ಸರ್ವಿಸ್.
  10. ಅಂತರರಾಷ್ಟ್ರೀಯ ಗುಣಮಟ್ಟದ ಲಾಜಿಸ್ಟಿಕ್ ಹಬ್.
  11. ಅಂತರರಾಷ್ಟ್ರೀಯ ಗುಣಮಟ್ಟದ ಬಹುಪಯೋಗಿ ಸಭಾಂಗಣ ಮತ್ತು ಮೈದಾನ.
  12. ತುಮಕೂರು ಇಂಡಸ್ಟಿಯಲ್ ನೋಡ್ ನಲ್ಲಿ ನಿರಂತರ ಗುಣಮಟ್ಟದ ವಿದ್ಯುತ್.
  13. ತುಮಕೂರು ಇಂಡಸ್ಟಿಯಲ್ ನೋಡ್ ಗೆ ಶಾಶ್ವತ ನದಿ ನೀರು.
  14. ತುಮಕೂರು ಇಂಡಸ್ಟಿಯಲ್ ನೋಡ್ ನಲ್ಲಿ ಹೈಟೆಕ್ ಘನತ್ಯಾಜ್ಯ ವಸ್ತು ಘಟಕ.
  15. ಉಧ್ಯಮಿಗಳ ಮೇಲೆ ಆರ್ಥಿಕ ದಬ್ಬಾಳಿಕೆ ತಡೆಗಟ್ಟುವುದು.
  16. ತುಮಕೂರು ಇಂಡಸ್ಟಿಯಲ್ ನೋಡ್ ಬೆಸ್ಟ್ ಪ್ರಾಕ್ಟಿಸಸ್ ಪರಿಕಲ್ಪನೆ.
  17. ಹಸಿರು – ತುಮಕೂರು ಇಂಡಸ್ಟಿಯಲ್ ನೋಡ್.
  18. ಪಲ್ಯೂಷನ್ ಫ್ರೀ – ತುಮಕೂರು ಇಂಡಸ್ಟಿಯಲ್ ನೋಡ್.
  19. ತುಮಕೂರು ಇಂಡಸ್ಟಿಯಲ್ ನೋಡ್ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ – ವಿವಿಧ ಥೀಮ್ ಪಾರ್ಕ್.
  20. ಜಪಾನೀಸ್ ವಿಲೇಜ್.
  21. ಮೆಷಿನ್ ಟೂಲ್ ಪಾರ್ಕ್.
  22. ಪವರ್ ಗ್ರಿಡ್.
  23. ಪ್ರೈಟ್ ವಿಲೇಜ್.
  24. ಆರ್ಟಿಸಾನ್ ಮ್ಯೂಸಿಯಂ.
  25. ಇಎಸ್‍ಐ ಆಸ್ಪತ್ರೆ.
  26. ಸಿ.ಎ ನಿವೇಶನಗಳ ಸಮರ್ಪಕ ಬಳಕೆ.
  27. ಪೋಲೀಸ್ ಸೇಷನ್ ವ್ಯವಸ್ಥೆ.
  28. ಹೆಲ್ತ್ ವಿಲೇಜ್.
  29. ನೂತನ  ರಿಂಗ್ ರೋಡ್ ಅಕ್ಕ ಪಕ್ಕ ಇರುವ ಸರ್ಕಾರಿ ಜಮೀನನಲ್ಲಿ ಲೋಕಲ್ ಇನ್ವೆಸ್ಟ್ ಮೆಂಟ್  ಹಬ್.
  30. ನೂತನ ಎಕ್ಸ್‍ಪ್ರೆಸ್ ವೇ ಅಕ್ಕ-ಪಕ್ಕ ವಿನೂತನ ಯೋಜನೆಗಳು.
  31. ತುಮಕೂರು ಸ್ಮಾರ್ಟ್ ಸಿಟಿ, ತುಮಕೂರು ಇಂಡಸ್ಟ್ರಿಯಲ್ ನೋಡ್ ಮತ್ತು ಇವೆರಡರ ಮಧ್ಯೆ ನಿರ್ಮಾಣವಾಗುತ್ತಿರುವ ಸಿಟಿ ಸೇರಿದಂತೆ ತ್ರಿವಳಿ ನಗರಗಳ ಸಮಗ್ರ ಅಭಿವೃದ್ಧಿ ಯೋಜನೆ.
  32. ತುಮಕೂರು, ಬೆಂಗಳೂರಿನ ಅನಧಿಕೃತ ಉಪನಗರ ಎಂದು ಘೋಶಿಸಿರುವ ಮುಖ್ಯ ಮಂತ್ರಿಗಳ ಮುಂದುವರೆದ ಅÀಧಿಕೃತ ಯೋಜನೆಗಳು.
  33. ತುಮಕೂರು ಇಂಡಸ್ಟಿಯಲ್ ನೋಡ್ ಸುತ್ತ-ಮುತ್ತ ಒಂದು ಕೀಮೀ ವರೆಗೆ ಸ್ಮಾರ್ಟ್ ವಿಲೇಜ್.
  34. ಸಿ.ಎಸ್.ಆರ್ ಫಂಡ್ ಮತ್ತು ದಾನಿಗಳ ಅನುದಾನ ಬಳಕೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ.
  35. ತುಮಕೂರು ಇಂಡಸ್ಟಿಯಲ್ ನೋಡ್ ನಲ್ಲಿ ಅಂತರ್ಜಲ ಹೆಚ್ಚಿಸಲು ವ್ಯಾಪಕ ಯೋಜನೆ.
  36. ತುಮಕೂರು ಇಂಡಸ್ಟಿಯಲ್ ನೋಡ್ ಸುತ್ತ-ಮುತ್ತಲಿನ ಜನತೆಯ ಆರೋಗ್ಯ ಅಧ್ಯಯನ.
  37. ತುಮಕೂರು ಇಂಡಸ್ಟಿಯಲ್ ನೋಡ್ ಸುತ್ತ-ಮುತ್ತಲಿನ ಪ್ರಾಣಿಗಳ ಆರೋಗ್ಯ ಅಧ್ಯಯನ.
  38. ತುಮಕೂರು ಇಂಡಸ್ಟಿಯಲ್ ನೋಡ್ ಮತ್ತು ಸುತ್ತ-ಮುತ್ತಲಿನ ಬಯೋಡೈವರ್ಸಿಟಿ  ಅಧ್ಯಯನ.
  39. ತುಮಕೂರು ಇಂಡಸ್ಟಿಯಲ್ ನೋಡ್ ಸುತ್ತ-ಮುತ್ತಲಿನ ಜನತೆಯ ಆರ್ಥಿಕ ಸ್ಥಿತಿ ಅಧ್ಯಯನ.
  40. ತುಮಕೂರು ಇಂಡಸ್ಟಿಯಲ್ ನೋಡ್ ಗೆ ಅಗತ್ಯವಿರುವ ಸ್ಕಿಲ್ ವರ್ಕರ್ಸ್ ಡಾಟಾ ಬ್ಯಾಂಕ್.
  41. ಹೈವೆಯಲ್ಲಿರುವ ಪ್ರಮುಖ ಧ್ವಾರಗಳಲ್ಲಿ ಇರುವ ನ್ಯೂನತೆ ಸರಿಪಡಿಸುವುದು.
  42. ಮೂಲಭೂತ ಸೌಕರ್ಯಗಳ ಮಾನಿಟರಿಂಗ್
  43. ತುಮಕೂರು ಇಂಡಸ್ಟಿಯಲ್ ನೋಡ್ ನಲ್ಲಿರುವ ಘಟಕಗಳÀ್ಮತ್ತು ನಿವೇಶನಗಳ RANKING.
  44. ಭೂ ಸಂತ್ರಸ್ಥರ ಸ್ಥಿತಿಗತಿ ಅಧ್ಯಯನ.
  45. ಸ್ಥಳೀಯ ನಿರುದ್ಯೋಗಿಗಳ ಅಭಿಪ್ರಾಯ.
  46. ತುಮಕೂರು ಇಂಡಸ್ಟಿಯಲ್ ನೋಡ್ ನಲ್ಲಿನ ಕ್ಯಾಂಟಿನ್ ಮತ್ತು ಹೋಟೆಲ್ ಗಳ ಗುಣಮಟ್ಟ ಮತ್ತು ಅಗತ್ಯ.
  47. ಸಾರ್ವಜನಿಕ ಶೌಚಾಯಲಗಳ ಗುಣಮಟ್ಟ ಮತ್ತು ಅಗತ್ಯ.
  48. ಕಾರ್ಮಿಕರ ಮಕ್ಕಳ ವಿದ್ಯಾಬ್ಯಾಸ ವ್ಯವಸ್ಥೆ.
  49. ತುಮಕೂರು ಇಂಡಸ್ಟಿಯಲ್ ನೋಡ್ ನ ಮಾರ್ಗದರ್ಶಿ ಸೂತ್ರದಂತೆ ಅನುಷ್ಠಾನದ ಅಧ್ಯಯನ.
  50. ರಾ ಮೆಟಿರಿಯಲ್  ಬ್ಯಾಂಕ್.
  51. ಉತ್ಪನ್ನಗಳ ಬ್ಯಾಂಕ್.
  52. ಬ್ಯಾಂಕಿಂಗ್  ಸೇವೆ.
  53. ತುಮಕೂರು ಇಂಡಸ್ಟಿಯಲ್ ನೋಡ್ ಗೆ ಅಗತ್ಯವಿರುವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯ  ವಿಸ್ತರಣಾ ಘಟಕ.
  54. ತುಮಕೂರು ಇಂಡಸ್ಟಿಯಲ್ ನೋಡ್ ನ ವಸತಿ ಸಮುಚ್ಚಾಯದ ಅಧ್ಯಯನ.
  55. ತುಮಕೂರು ಇಂಡಸ್ಟಿಯಲ್ ನೋಡ್ ನ ಎಲ್ಲಾ ರಸ್ತೆಗಳ ಬದಿ ಕುಳಿತು ಕೊಳ್ಳಲು ನ್ಯಾಚುರಲ್ ಬೆಂಚು ಕಲ್ಲುಗಳು.