26th April 2024
Share

TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿನ ತುಮಕೂರು ಇಂಡಸ್ಟ್ರಿಯಲ್ ನೋಡ್ ಅನ್ನು ¥ಲ್ಯೂಷನ್ ಫ್ರಿ- ತುಮಕೂರು ಇಂಡಸ್ಟ್ರಿಯಲ್ ನೋಡ್ ಮಾಡಲು ಶಕ್ತಿಪೀಠ ಫೌಂಡೇಷನ್ ದೃಢ ನಿರ್ಧಾರ ಕೈಗೊಂಡಿದೆ.
ಈ ಹಿನ್ನಲೆಯಲ್ಲಿ ಈಗಾಗಲೇ ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಆಗಿ£ ಕೆಐಎಡಿಬಿ ಡೆವಲಪ್ ಮೆಂಟ್ ಆಫೀಸರ್ ಆಗಿದ್ದ ಶ್ರೀ ಸುನಿಲ್ ರವರು, ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿಯಾಗಿದ್ದ ಶ್ರೀ ಡಾ.ರಮೇಶ್ ರವರು ಒಂದು ಯೋಜನೆಯನ್ನು ರೂಪಿಸಲು ನಿರ್ಣಯ ಕೈ ಕೊಳ್ಳಲಾಗಿತ್ತು.
ಈ ಹಿನ್ನಲೆಯಲ್ಲಿ ಸುಮಾರು 12500 ಎಕರೆಗಿಂತಲೂ ಹೆಚ್ಚು ಕೈಗಾರಿಕಾ ಪ್ರದೇಶದಲ್ಲಿ ಹಸಿರು- ತುಮಕೂರು ಇಂಡಸ್ಟ್ರಿಯಲ್ ನೋಡ್ ನಿರ್ಮಾಣ ಮಾಡಲು, ಅರಣ್ಯ ಇಲಾಖೆ ಏನೇನು ಕ್ರಮ ಕೈಗೊಳ್ಳ ಬಹುದು. ಇಲ್ಲಿ ಇರುವ ಅರಣ್ಯದ ವಿಸ್ತೀರ್ಣ ಎಷ್ಟು, ದೇಶದ ಎಲ್ಲೆಲ್ಲಿ ಅರಣ್ಯ ಪ್ರದೇಶದಲ್ಲಿ ಯಾವ ಯಾವ ಥೀಮ್ ಪಾರ್ಕ್ ಮಾಡಲಾಗಿದೆ. ಇದೊಂದು ಒಳ್ಳೆಯ ‘ಕಾಡುÀ ಪ್ರವಾಸೋಧ್ಯಮ’ ಕೇಂದ್ರವಾಗಿ ನಿರ್ಮಾಣ ಬಹುದಾ? ಎಂಬ ಬಗ್ಗೆ ಅಧ್ಯಯನ ಆರಂಭಿಸಲಾಯಿತು.
ತುಮಕೂರು ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿ ಶ್ರೀಮತಿ ಅನುಪಮರವರು ತಮ್ಮದೇ ಆದ ಕನಸನ್ನು ಹೊಂದಿದ್ದಾರೆ. ಅಂತರ ರಾಷ್ಟ್ರೀಯ ಮಟ್ಟದ ಬೆಸ್ಟ್ ಪ್ರಾಕ್ಟಿಸಸ್ ಯೋಜನೆಯಾಗಿ ರೂಪಿಸಲು, ಒಂದು ಪರಿಕಲ್ಪನಾ ವರದಿಯನ್ನು ಸಿದ್ಧಪಡಿಸಲು ಆರಂಭಿಸಿದ್ದಾರೆ. ಪರಿಸರ ಪ್ರೇಮಿಗಳು ಸೂಕ್ತ ಸಲಹೆ ನೀಡಿದರೆ ಚೆನ್ನ.


ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿ ಶ್ರೀಮತಿ ಅನುಪಮರವರು, ಶ್ರೀ ರಂಗಸ್ವಾಮಿರವರು, ಶ್ರೀ ಪ್ರಕಾಶ್ ರವರು ಜೊತೆಯಲ್ಲಿ ಇದ್ದರು