24th April 2024
Share

TUMAKURU:SHAKTHIPEETA FOUNDATION

ಚಿಕ್ಕ ಮಂಗಳೂರು ಜಿಲ್ಲೆಯ, ಶೃಂಗೇರಿ ಶ್ರೀ ಶಾರಾದಾ ದೇವಿ ಮಾತಾ ಸನ್ನಿದಿಯಲ್ಲಿ ದಿನಾಂಕ:04.04.2023 ರಂದು ಇಂಡಿಯಾ @ 100 ಅಂಗವಾಗಿ ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿರುವ ನಾಲೇಡ್ಜ್ ಬ್ಯಾಂಕ್ ಗೆ ಜ್ಞಾನಿಗಳ ಅಮೂಲ್ಯವಾದ ಜ್ಞಾನದಾನಆಂದೋಲನ ಕೈಗೊಳ್ಳಲು ಯೋಜನೆ ರೂಪಿಸಲು ತಾಯಿ ಶಾರಾದಾ ದೇವಿಯ ಆಶಿರ್ವಾದ ಪಡೆಯಲಾಯಿತು.

ಶೃಂಗೇರಿ ಗುರುಗಳ ಜೊತೆಯೂ ವಿಶ್ವದ 108 ಶಕ್ತಿಪೀಠಗಳ ಅಧ್ಯಯನದ ಬಗ್ಗೆ ಸಮಾಲೋಚನೆ ನಡೆಸಲಾಯಿತು.

 ಶಾರದಾ ದೇವಿ ಕ್ಷೇತ್ರ ಒಂದು ಶಕ್ತಿಪೀಠವೋ ಅಥವಾ ಅಲ್ಲವೋ ಎಂಬ ಬಗ್ಗೆ ಅಧ್ಯಯನ ಆರಂಭಿಸಲಾಯಿತು.

ಜೊತೆಯಲ್ಲಿ ಶ್ರೀ ವೇದಾನಂದಮೂರ್ತಿರವರು, ಶ್ರೀ ಬಸವರಾಜ್ ರವರು, ಶ್ರೀ ಸುದರ್ಶನ್ ರವರು ಇದ್ದರು.  

ಅಲ್ಲಿಂದ ಬಂದ ತಕ್ಷಣ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ಟಿ.ಆರ್ ರಘೊತ್ತಮರಾವ್ ರವರ ಜೊತೆಯಲ್ಲಿ ದೆಹಲಿಗೆ ಹೋಗಿ, ಬಂದ ನಂತರ ತುಮಕೂರು ನಗರ ಮತ್ತು ತುಮಕೂರು ಜಿಲ್ಲಾಧ್ಯಾಂತ  ಪ್ರವಾಸ ಕೈಗೊಳ್ಳಲಾಗಿದೆ.

ದಿನಾಂಕ:10.04.2023 ರಿಂದ 10.05.2023 ರವರೆಗೆ  ಒಂದು ತಿಂಗಳುಗಳ ಕಾಲ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲು ಯೋಚಿಸಲಾಗಿದೆ. ತುಮಕೂರು ನಗರದ 35 ವಾರ್ಡ್‍ಗಳಲ್ಲೂ ಸಂಚರಿಸಿ ಜ್ಞಾನ ದಾನಿಗಳ ಡಿಜಿಟಲ್ ಡಾಟಾ ಸಂಗ್ರಹ ಮಾಡಲಾಗುವುದು. ಆಸಕ್ತರು ಸಂಪರ್ಕಿಸ ಬಹುದು.

ವರ್ಕ್ ಪ್ರಂ ಹೋಂ ಮಾದರಿಯಲ್ಲಿ ಜ್ಞಾನ ದಾನಿಗಳ ಡಿಜಿಟಲ್ ಡಾಟಾ ರಾಜ್ಯದ ಯಾವುದೇ ಮೂಲೆಯ, ಯಾವುದೇ ಧರ್ಮದ ಸ್ಕಿಲ್ ಕೆಲಸಗಾರರು ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸಲು ಮನವಿ, ಕನಿಷ್ಠ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮೂರು ಬಾಷೆಗಳ ಜ್ಞಾನವಿರ ಬೇಕು. ಸೋಶಿಯಲ್ ಮೀಡಿಯಾ ಮತ್ತು ವೆಬ್ ಸೈಟ್ ನಿರ್ವಹಣೆ ಮಾಡಲು ಬಂದರೆ ಸಾಕು, ವಿದ್ಯಾರ್ಹತೆಯ ಮಾನದಂಡವಿಲ್ಲ. ಮಾನವೀಯತೆ ಇರಬೇಕು.