16th September 2024
Share

TUMAKURU:SHAKTHIPEETA FOUNDATION

ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಜನಜಾಗೃತಿ ಆರಂಭಿಸಿರುವ, ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು ಹಾಗೂ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿ ವಿಚಾರದಲ್ಲಿ, ಎಲ್ಲಾ ವಿಚಾರಗಳಲ್ಲೂ ನಂಬರ್-1 ಸ್ಥಾನ ಪಡೆಯಲು, ನಿರಂತರವಾಗಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನಜಾಗೃತಿಗಾಗಿ ಶ್ರಮಿಸಲು, ಇಂಡಿಯಾ @ 100 ಸ್ವಾತಂತ್ರ್ಯ ಸೇನೆ ( ) ಸ್ಥಾಪನೆಗೆ ಸಿದ್ಧತೆ ನಡೆದಿದೆ. ತುಮಕೂರಿನಲ್ಲಿ ಕೇಂದ್ರ ಕಚೇರಿ ತೆರೆಯುವ ಆಲೋಚನೆ ಇದೆ.

2023 ರ ಕರ್ನಾಟಕ ರಾಜ್ಯ ವಿಧಾನಸಭೆಗೆ, 224 ವಿಧಾನಸಭಾ ಕ್ಷೇತ್ರಗಳ 5951 ಗ್ರಾಮಪಂಚಾಯಿತಿಗಳು, 315 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 58282 ಬೂತ್ ಗಳು ಹಾಗೂ ಹೆಚ್ಚುವರಿ 263 ಬೂತ್ ಗಳು ಸೇರಿದಂತೆ, 58545 ಬೂತ್‍ಗಳ ವ್ಯಾಪ್ತಿಯಲ್ಲೂ ಉಚಿತವಾಗಿ ಸದಸ್ಯತ್ವ ನೀಡಲು ಚಿಂತನೆ ನಡೆದಿದೆ.

2023 ರ ಕರ್ನಾಟಕ ರಾಜ್ಯ ವಿಧಾನಸಭೆಗೆ, 224 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 2615 ಜನರು ವಿವಿಧ ಪಕ್ಷಗಳ ವತಿಯಿಂದ ಹಾಗೂ ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದಾರೆ. ಇವರೆಲ್ಲರ ಮಾರ್ಗದರ್ಶನ, ಸಲಹೆ ಪಡೆದು ಐ.ಎಸ್,ಎಸ್ ನ ರೂಪುರೇಷೆ ನಿರ್ಧರಿಸಲಾಗುವುದು.

ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಜನ ಅಭ್ಯರ್ಥಿಗಳಿಂದ ಆರಂಭಿಸಿ 24 ಜನ ಅಭ್ಯರ್ಥಿಗಳ ವರೆಗೂ ಸ್ಪರ್ಧಿಸಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ, ಆರಂಭದಲ್ಲಿ ಈ ಅಭ್ಯರ್ಥಿಗಳೇ ವಿಷನ್ ಗ್ರೂಪ್ ತಂಡದಲ್ಲಿ ಕಾರ್ಯನಿರ್ವಹಿಸಲು ಮನವಿ ಮಾಡಲಾಗುವುದು. ಇನ್ನೂ ಯಾರು, ಯಾರನ್ನು ವಿಷನ್ ಗ್ರೂಪ್‍ಗೆ ಸೇರ್ಪಡೆ ಮಾಡಬಹುದು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ 2023 ರ ಕರ್ನಾಟಕ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಲು ಆಸಕ್ತಿ ಇರುವವರು ಸಂಪರ್ಕಿಸಲು ಮನವಿ ಮಾಡಲಾಗಿದೆ.