19th April 2024
Share

TUMAKURU:SHAKTHIPEETA FOUNDATION

ಇಂಡಿಯಾ @ 100 ಸ್ವಾತಂತ್ರ್ಯ ಸೇನೆ (ISS) ಯಿಂದ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ವಿನೂತನ ಪ್ರಯೋಗಕ್ಕೆ ದಿನಾಂಕ:01.05.2023 ರಿಂದ ಚಾಲನೆ ನೀಡಲಾಗಿದೆ.

2047 ರ ವೇಳೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಯಾವ ರೀತಿ ಅಭಿವೃದ್ಧಿ ಹೊಂದ ಬೇಕು ಎಂಬ ಬಗ್ಗೆ, ಆಸಕ್ತ ವ್ಯಕ್ತಿ, ಕುಟುಂಬ, ವಿವಿಧ ವರ್ಗದ ಸಂಘ ಸಂಸ್ಥೆ, ರಾಜಕೀಯ ಪಕ್ಷಗಳಿಂದ ಅಭಿವೃದ್ಧಿ ಯೋಜನೆಗಳ ಪರಿಕಲ್ಪನೆ ಬಿಕ್ಷೆ ಸಂಗ್ರಹ ಮಾಡಲಾಗುತ್ತಿದೆ.

ದಿನಾಂಕ:14.05.2023 ರಿಂದ ಅವುಗಳ ಅನುಷ್ಠಾನಕ್ಕೆ ಸಂಭಂಧಿಸಿದವರ ಗಮನ ಸೆಳೆಯಲು ತುಮಕೂರು @ 100 ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು.

ದಿನಾಂಕ:01.05.2023 ರಿಂದ 09.05.2023 ರವರೆಗೆ ಒಂದು ವಾರಗಳ ಕಾಲ ತುಮಕೂರು @ 100 ಜನ ಜಾಗೃತಿ ಆಂದೋಲನ’ ನಡೆಯಲಿದೆ. ಯಾರು ಬೇಕಾದರೂ ತಮ್ಮ ಅಭಿವೃದ್ಧಿ ಯೋಜನೆಗಳೊಂದಿಗೆ ಸಂಪರ್ಕಿಸಬಹುದು ಅಥವಾ ಕರೆ ಮಾಡಿದರೆ, ಖುದ್ಧಾಗಿ ನಾನೇ ಬಂದು ಸಂಗ್ರಹಿಸುತ್ತೇನೆ.

ಹೆಸರುಗಳನ್ನು ರಹಸ್ಯವಾಗಿ ಇಡಲು ಬಯಸಿದರೆ ರಹಸ್ಯವಾಗಿ ಇಡಲಾಗುವುದು, ಬಹಿರಂಗಗೊಳಿಸಲು, ಇಚ್ಚಿಸಿದರೆ ತಮ್ಮ ಫೋಟೋ ಸಹಿತ ಪಾರದರ್ಶಕವಾಗಿ ಪ್ರಕಟಿಸಲಾಗುವುದು.

ಪ್ರತಿಯೊಂದು ಜಿಐಎಸ್ ಆಧಾರಿತ ಡಿಜಿಟಲ್ ಮೂಲಕ ಮುಂದಿನ 25 ವರ್ಷಗಳ ವರೆಗೆ ನಿರಂತರವಾಗಿ ಸಾಗಲಿದೆ. ಇಂಡಿಯಾ @ 100 ಗೆ ಪೂರಕವಾಗಿ ಫೈಲಟ್ ಯೋಜನೆಯಾಗಿ, ಪ್ರಾಯೋಗಿಕವಾಗಿ ಅನುಷ್ಠಾನದ ಹೋರಾಟ ಮುನ್ನಡೆಯಲಿದೆ.

ಮೊಟ್ಟಮೊದಲನೆಯದಾಗಿ, ಈ ಕೆಳಕಂಡ 15 ಅಂಶಗಳನ್ನು ನೀಡಿರುವವರು ಇನ್ನೂ ಹೆಸರು ಬಹಿರಂಗ ಪಡಿಸಲು ಹೇಳಿಲ್ಲ, ನಂತರ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅವರು ನೀಡಿರುವ ಯೋಜನೆಗಳ ಪಟ್ಟಿ ಹೀಗಿದೆ.

ಕಾನೂನು ಮಿತಿಯಲ್ಲಿ ನಾಗರೀಕ ಸೇವೆಗಳ   ಪುನಶ್ಚೇತನ-ಅನುಷ್ಠಾನದ ಭರವಸೆ

01.ಪ್ರತಿವಾರ್ಡ್/ಜನವಸತಿ ಪ್ರದೇಶದಲ್ಲಿ ಜನಸ್ಪಂದನ” ಕೇಂದ್ರಗಳ ಸ್ಥಾಪನೆ

02.ಪ್ರತಿವಾರ್ಡ್/ಜನವಸತಿ ಕೇಂದ್ರದಲ್ಲಿ ನಮ್ಮ ಕ್ಲಿನಿಕ್” ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತುರ್ತು ಸೇವಾ ವಾಹನಗಳ ಲಭ್ಯತೆ- ಸ್ಥಳೀಯ ನಾಗರೀಕರ ಮೇಲ್ವಿಚಾರಣೆ.

03.ಉದ್ಯಾನ ವನಗಳ ಉನ್ನತೀಕರಣ-ಸೂಕ್ತ ನಿರ್ವಹಣೆಗೆ ಪರಿಸರ ಮಿತ್ರ’ ಸಮಿತಿಯ ರಚನೆ

04.ನಗರದಲ್ಲಿ ತುರ್ತು ಸಮಯಗಳಲ್ಲಿ ಸ್ಪಂದಿಸಲು 24*7 ನಿರಂತರ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಬಲಪಡಿಸುವುದು-ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು.

05.ಮೂಲಭೂತ ನಾಗರೀಕ ಸೌಲಬ್ಯಗಳ ಗುಣಾತ್ಮಕ ಪೂರೈಕೆಗೆ ನಿವಾಸಿಗಳ ಮೇಲ್ವಿಚಾರಣಾ ತಂಡಗಳ ರಚನೆ,ಸಾಮಾಜಿಕ ಜವಾಬ್ದಾರಿ ಹಂಚಿಕೆ.

06.ನಗರದಲ್ಲಿ ವಿಭಾಗಶಃ ಪ್ರತ್ಯೇಕ ತರಕಾರಿ-ಹೂವು ಹಣ್ಣಿನ ,ಮಾರುಕಟ್ಟೆಗಳ ರಚನೆಗೆ ಸೂಕ್ತ ವ್ಯವಸ್ಥೆ vendor Zone’ಗಳ ರಚನೆಗೆ ಅಗತ್ಯ ಕ್ರಮ.

07.ಮಾಂಸ ಮಾರಾಟ ಮತ್ತು ತ್ಯಾಜ್ಯಗಳ ಸೂಕ್ತ ವಿಲೇವಾರಿ ಪ್ರತ್ಯೇಕ ಮಾರಾಟ ಸ್ಥಳಗಳನ್ನು  ರೂಪಿಸುವುದು. ತ್ಯಾಜ್ಯ ನಿರ್ವಹಣೆಗೆ ಮಾರಾಟಗಾರರ ಸಮಿತಿ ರಚನೆ.

08.ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲೂ ಪೋಲಿಸ್-ಆರಕ್ಷಕ ಠಾಣೆ ವಿಸ್ತರಣೆ.

09.ಮಳೇಗಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರ-ವಸತಿ ಪ್ರದೇಶ ರಕ್ಷಣೆಗೆ ಸೂಕ್ತ ವ್ಯವಸ್ಥೆ, ಪ್ರವಾಹ ಕಾಲುವೆಗಳ ಅತಿಕ್ರಮಣ ತೆರವಿಗೆ ಕ್ರಮ.

10.ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತರುವ ಯೋಜನೆಗಳ ಅನುಷ್ಠಾನದ ಸಮಸ್ಯೆಗಳ ಪರಿಹಾರಕ್ಕೆ-ಫಲಾನುಭವಿಗಳಿಗೆ ಮಾರ್ಗದರ್ಶನಕ್ಕೆ ಸಲಹಾ ಸಮಿತಿ’ (ಮೀಡಿಯೇಷನ್ ಸೆಂಟರ್) ಸ್ಥಾಪನೆ.

11. ಸುಗಮ ಸಂಪರ್ಕ ಸಂಚಾರಕ್ಕೆ ಸಂಘಟಿತ ನಗರ ಸಾರಿಗೆ ವ್ಯವಸ್ಥೆ ವಿಸ್ತರಣೆ.

12. ನಾಗರೀಕ ಸೇವೆಗಳನ್ನು ಉತ್ತಮಪಡಿಸಲು ವಸತಿ ವಾಣಿಜ್ಯ ಪ್ರದೇಶಗಳ ವ್ಯಾಪಾರ ಸಮೀಕ್ಷೆ-ಸೇರ್ಪಡೆ ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ.

13. ಅಸಹಾಯಕರಿಗೆ – ಬಡವರಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು -ಫಲಾನುಭವಿಗಳನ್ನು ಗುರುತಿಸಿ ಒದಗಿಸಲು ಸಹಾಯ ಕೇಂದ್ರದ ರಚನೆ.

14. ಜನರನ್ನು ಆರ್ಥಿಕವಾಗಿ ಬಲಪಡಿಸಲು ಅನುಷ್ಠಾನದಲ್ಲಿರುವ ಶಿಕ್ಷಣ-ತರಬೇತಿ-ಕೌಶಲ್ಯ ಅಭಿವೃದ್ಧಿ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಸೂಕ್ತ ಸಹಲಾ ಕೇಂದ್ರದ ರಚನೆ.

15.ಸಾಂಸ್ಕøತಿಕ-ಪಾರಂಪರಿಕ ಸ್ಮಾರಕಗಳ ರಚನೆಗೆ, ಅಭಿವೃದ್ಧಿಗೆ ಅಗತ್ಯ ನೆರವು. ಪವಿತ್ರ ವನಗಳ ರಚನೆ, ಜಲಮೂಲ-ಕಲ್ಯಾಣಿಗಳ ಪುನಶ್ಚೇತನಕ್ಕೆ ಕ್ರಮ.

ತಾವೂ ಸಲಹೆ ನೀಡಿ, ಮೌನವಾಗಿದ್ದು ಟೀಕೆ ಟಿಪ್ಪಣೆ ಮಾಡುವುದು ಒಳ್ಳೆಯದಲ್ಲ.