21st January 2025
Share

TUMAKURU:SHAKTHIPEETA FOUNDATION

ನಾನೊಬ್ಬ 2047 ಕ್ಕೆ ಕರ್ನಾಟಕ ರಾಜ್ಯ ಹೀಗೆಯೇ ಅಭಿವೃದ್ಧಿ ಹೊಂದಿರಬೇಕು ಎಂಬ ಕನಸುಗಾರ.

ನಾನೊಬ್ಬ ಕರ್ನಾಟಕ ರಾಜ್ಯ, ಕೇಂದ್ರ ಸರ್ಕಾರದಿಂದ ಅತಿ ಹೆಚ್ಚಿಗೆ ಅನುದಾನ ಪಡೆದ ರಾಜ್ಯವಾಗಬೇಕು  ಎಂಬ ಕನಸುಗಾರ.

ನನಗೆ ನನ್ನ ಅಭಿವೃದ್ಧಿ ಹೋರಾಟದಲ್ಲಿ, ಕಳೆದ 35 ವರ್ಷಗಳಿಂದ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬೆಂಬಲ ವ್ಯಕ್ತಪಡಿಸುತ್ತಿರುವವರು ಸಾವಿರಾರು ಜನರು.

ನಾನೊಬ್ಬ ಅಭಿವೃದ್ಧಿ ಹೋರಾಟದಲ್ಲಿ ಸಾಧಕ ಎಂಬ ತೃÀಪ್ತಿ ನನಗಿದೆ.

ಶೀಘ್ರದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ 33 ವರ್ಷಗಳ ಸುಧೀರ್ಘ ಅವಧಿಯ, ತುಮಕೂರು ಲೋಕಸಬಾ ಕ್ಷೇತ್ರದ ವ್ಯಾಪ್ತಿಯ, ವಿವಿಧ ಯೋಜನೆಗಳ ಅಭಿವೃದ್ಧಿ ಬೇಟೆಯ ಅಭಿವೃದ್ಧಿ ಮ್ಯೂಸಿಯಂ ಆರಂಭವಾಗಲಿದೆ. ಅಭಿವೃದ್ಧಿ ತಜ್ಞ ಶ್ರೀ ಟಿ.ಆರ್.ರಘೋತ್ತಮರಾವ್ ಮ್ಯೂಸಿಯಂ ಹೇಗಿರಬೇಕು ಎಂಬ ಬಗ್ಗೆ ದಾಖಲಿಸುತ್ತಿದ್ದಾರೆ.

ನಾನು ಜನಜಾಗೃತಿಗಾಗಿ ಸಭೆ, ಸಮಾರಂಭ, ಕಾರ್ಯಾಗಾರ, ಉಪನ್ಯಾಸ, ಸಂವಾದಗಳಿಗೆ ಭಾಗವಹಿಸಿದ್ದಾಗ, ನಿಮ್ಮ ಪರಿಕಲ್ಪನೆಗಳ ಒಂದು ಕೈಪಿಡಿ ಮಾಡಿ ಎಂಬ ಸಲಹೆ ವ್ಯಾಪಕವಾಗಿತ್ತು.

ನಂಬರ್ ಒನ್ ಕರ್ನಾಟಕಜ್ಞಾನದಾನ ಮಾಡಿ ಎಂಬ ಸುಮಾರು 40 ಪುಟಗಳ ಕಿರುಹೊತ್ತಿಗೆ ಕರಡು ಪ್ರತಿ ಬಿಡುಗಡೆ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಬೆಂಗಳೂರಿನಲ್ಲಿ ಮಾನ್ಯ ಶ್ರೀ ಸಿದ್ಧರಾಮಯ್ಯನವರು, ಮುಖ್ಯಮಂತ್ರಿಯವರು ಹಾಗೂ ಅಧ್ಯಕ್ಷರು, ರಾಜ್ಯ ಮಟ್ಟದ ದಿಶಾ ಸಮಿತಿ, ಕರ್ನಾಟಕ, ಇವರಿಂದ ಬಿಡುಗಡೆ ಮಾಡಿಸಬೇಕು ಎಂಬ ಆಸೆ ನನ್ನದಾಗಿದೆ. ಈಗಾಗಲೇ ಮನವಿ ಮಾಡಿದ್ದೇನೆ.

 ದೆಹಲಿಯಲ್ಲಿ  ಶ್ರೀಮತಿ ನಿರ್ಮಲಾಸೀತಾರಂ ರವರು, ಮಾನ್ಯ ಹಣಕಾಸು ಸಚಿವರು ಕೇಂದ್ರ ಸರ್ಕಾರ, ಇವರಿಂದ ಬಿಡುಗಡೆ ಮಾಡಿಸಬೇಕು ಎಂಬ ಆಸೆ ನನ್ನದಾಗಿದೆ. ಇನ್ನೂ ಮನವಿ ಮಾಡಬೇಕಿದೆ.

‘ಅಧ್ಯಯನ ಪೀಠಕ್ಕೊಬ್ಬ ಪರಿಣಿತ’ ಎಂಬ ಘೋಷಣೆಯೊಂದಿಗೆ, ಸುಮಾರು ‘545 ಜನ ಪರಿಣಿತರೊಂದಿಗೆ’  ಚರ್ಚೆ ಮಾಡಿ, ನಂತರ ಅಂತಿಮ ವರದಿ’ ಯನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದೇನೆ.

ಕೂಲಿ ಮಾಡುವವರಿಂದ ಆರಂಭಿಸಿ- ಈ ದೇಶದ ರಾಷ್ಟ್ರಪತಿಯೂ  ಒಬ್ಬ ಪರಿಣಿತರು ಎಂಬ ಭಾವನೆ ನನ್ನದಾಗಿದೆ.

ಮುಜುಗರ ಬೇಡ, ನಾನೂ ಒಬ್ಬ ರೈತ, ಆ 545 ಜನರಲ್ಲಿ ತಾವೂ ಒಬ್ಬರಾಗಬಹುದು, ಕರೆ ಮಾಡಿ ಅಥವಾ ವಾಟ್ಸ್‍ಅಪ್ ಮೂಲಕ ಉಚಿತವಾಗಿ ನೊಂದಾಯಿಸಿ ಕೊಳ್ಳಿ.

ಕೇಳಿದವರಿಗೆ ಮಾತ್ರ ಡಿಜಿಟಲ್ ಕಿರುಹೊತ್ತಿಗೆ ಸೋಶಿಯಲ್ ಮೀಡಿಯಾ ಮೂಲಕ ಉಚಿತವಾಗಿ ತಲುಪಲಿದೆ