ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ
TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರ ಮಧ್ಯಂತರ ವರದಿಯ ಡ್ರಾಪ್ಟ್‍ಗೆ ‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಎಂಬ ಹೆಸರಿಡಲು ಯೋಚಿಸಿದ್ದೇನೆ.
ಸುಮಾರು 60 ಪುಟಗಳ ಕರಡು ಪ್ರತಿ ಪ್ರಿಂಟಿಂಗ್‍ಗೆ ಸಿದ್ಧವಾಗಿದೆ. ಸಣ್ಣಪುಟ್ಟ ಕರೆಕ್ಷನ್ ಇದೆ. ಈ ಹಂತದಲ್ಲಿ ಹಲವಾರು ಜನರೊಂದಿಗೆ ಸಮಾಲೋಚನೆ ಮಾಡಿ, ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಅಥವಾ ಅವರ ಐಡಿಯಾಗಳು ಇದ್ದಲ್ಲಿ ಸೇರ್ಪಡೆ ಮಾಡಲು ಯೋಚಿಸಿದ್ದೇನೆ.
ಇಂಡಿಯಾ @ 100 ಅಂಗವಾಗಿ-ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿಪಾಯ ಎಂದು ಪ್ರತಿಪಾದಿಸಿದ್ದೇನೆ.
ಪುಸ್ತಕ ಅಚ್ಚು ಹಾಕಿಸುವ ಮುನ್ನ ಒಂದು ಸಮಾಲೋಚನೆ ನಡೆಸಸಿ ಪಾಯಿಂಟ್ ಟು ಪಾಯಿಂಟ್ ಚರ್ಚೆ ಮಾಡಲು ಉದ್ದೇಶಿದ್ದೇನೆ. ಆಸಕ್ತರು ಸಂಪರ್ಕಿಸಿ ತಮ್ಮ ‘ಜ್ಞಾನದಾನ’ ಮಾಡಬಹುದು.
ಕೈಪಿಡಿ ಪ್ರಿಂಟ್ ಹಾಕಿಸಲು ಯಾರಾದರೂ ದೇಣಿಗೆ ನೀಡುವುದಾದರೆ ಸ್ವಾಗತ. ನೇರವಾಗಿ ಪ್ರಿಂಟಿಂಗ್ ಪ್ರೆಸ್‍ನವರೊಂದಿಗೆ ಮಾತನಾಡಿ ಹಣ ಪಾವತಿಸಲು ಒಂದು ಅವಕಾಶವಿದೆ.
ಕರ್ನಾಟಕ ಮೇಲ್ವೀಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದೊಂದಿಗೆ ಉಚಿತವಾಗಿ ವರದಿ ನೀಡಲು ಎಂ.ಓ.ಯು ಮಾಡಿಕೊಂಡಿದ್ದೇನೆ. ಹಣದ ಅವಶ್ಯಕತೆಯಿದೆ ಆಸಕ್ತರು ‘ದಾನ’ ಮಾಡಬಹುದು.