ಆಯುಷ್ಮಾನ್ ಭಾರತ್:ಕೇಂದ್ರದ ಪಾಲೆಷ್ಟು- ರಾಜ್ಯದ ಪಾಲೆಷ್ಟು: ದಿನೇಶ್


TUMAKURU:SHAKTHIPEETA FOUNDATION
ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರ ವಾದ ನಿಜಕ್ಕೂ ಮೆಚ್ಚವಂತದ್ದು. ಫೆಡರಲ್ ಸಿಸ್ಟಂನಲ್ಲಿ, ಈ ರೀತಿ ಅರ್ಥಗರ್ಭಿತ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಘರ್ಷಣೆ ಮತ್ತು ಜನಸಾಮಾನ್ಯರಿಗೆ ಕೇಂದ್ರದ ಪಾಲೆಷ್ಟು- ರಾಜ್ಯದ ಪಾಲೆಷ್ಟು, ಎಂಬ ಬಗ್ಗೆ ಜಾಗೃತಿ ಮೂಡಿಸುವುದು ಒಳ್ಳೆಯ ಬೆಳವಣಿಗೆ.
ಆಯುಷ್ಮಾನ್ ಭಾರತ್ ಇನ್ನೂ ಪರಿಪೂರ್ಣವಾಗಿಲ್ಲ, ಮಾಜಿ ಪ್ರಧಾನಿ ಕೀರ್ತಿಶೇಷ ಅಟಲ್ ಬಿಹಾರಿ ವಾಜಿಪೇಯಿರವರ ಕನಸಿನಂತೆ, ರಾಜ್ಯದಲ್ಲಿ ಎಲ್ಲರಿಗೂ, ಎಲ್ಲಾ ವಿಧವಾದ ಕಾಯಿಲೆಗಳಿಗೂ ಉಚಿತ ವೈಧ್ಯಕೀಯ ಸೌಲಭ್ಯ ನೀಡುವಂತಾಗ ಬೇಕು.
ಕೇಂದ್ರ ಸರ್ಕಾರದ ಯೋಜನೆಗಳು, ರಾಜ್ಯ ಸರ್ಕಾರದ ಯೋಜನೆಗಳು, ಆರೋಗ್ಯ ಇನ್ ಸೂರೆನ್ಸ್ ಯೋಜನೆಗಳು ಎಲ್ಲವನ್ನೂ ಅಧ್ಯಯನ ಮಾಡಿ, ಒಂದು ಅತ್ಯುತ್ತಮವಾದ ಯೋಜನೆ ರೂಪಿಸುವತ್ತ ಗಮನ ಸೆಳೆಯುವರೇ ಕಾದು ನೋಡಬೇಕು.