TUMAKURU:SHAKTHIPEETA FOUNDATION
ಸನ್ಮಾನ್ಯ ಉಪಮುಖ್ಯ ಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ‘ಬ್ರ್ಯಾಂಡ್ ಬೆಂಗಳೂರು’ ಘೋಷಣೆ ಮಾಡಿದ್ದಾರೆ, ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಕೃಷ್ಣರವರ ‘ಐಟಿ-ಬಿಟಿ’ ಪರಿಕಲ್ಪನೆಯಿಂದ ಇಂದು ಬೆಂಗಳೂರು ವಿಶ್ವದ ಗಮನ ಸೆಳೆದಿದೆ.
ಬೆಂಗಳೂರು ಜನ್ಮ ತಾಳಿದ ಇತಿಹಾಸದಿಂದ, ಕೀರ್ತಿಶೇಷ ಕೆಂಪೇಗೌಡರಿಗಿಂತ ಮೊದಲಿನಿಂದ, ಇಲ್ಲಿಯವರೆಗೂ ಸಾಕಷ್ಟು ಜನ ಬೆಂಗಳೂರು ಅಭಿವೃದ್ಧಿಗಾಗಿ ಶ್ರಮಿಸಿದ್ದಾರಂತೆ. ಆರಂಭದಿಂದ ಶ್ರಮಿಸಿರುವವÀರ ಎಲ್ಲಾ ಮಾಹಿತಿಗಳನ್ನು ಒಂದೆಡೆ ಕ್ರೋಡೀಕರಿಸಿ, ಇಂಡಿಯಾ @ 100 ಅಂಗವಾಗಿ, ‘ಬೆಂಗಳೂರು-2047’ ಹೇಗಿರಬೇಕು ಎಂಬ ಕನಸಿನ ‘ಬೆಂಗಳೂರು ಮ್ಯೂಸಿಯಂ’ ಅನ್ನು ‘ಬ್ರ್ಯಾಂಡ್ ಬೆಂಗಳೂರು’ ಘೋಷಣೆ ಅಡಿಯಲ್ಲಿ ಆರಂಭಿಸಲು ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಮನವಿ ಮಾಡಲಾಗಿದೆ.
ಶ್ರೀ ಎಸ್.ಎಂ. ಕೃಷ್ಣರವರು ಕೈಗೊಂಡ ‘ಐಟಿ-ಬಿಟಿ’ ಬಗ್ಗೆ ಬರೆಯಬೇಕು ಎಂದು ಆರಂಭಿಸಿದ ನನಗೆ, ಹಲವಾರು ಜನ ಸ್ನೇಹಿತರು ಹೇಳಿದ ಮಾತು, ಬೆಂಗಳೂರು ರೀಸರ್ಚ್ ಫೌಂಡೇಷನ್ ಸ್ಥಾಪಿಸಿ, ಸಂಪೂರ್ಣ ಇತಿಹಾಸ ಒಂದೇ ಕಡೆ ದೊರಕಿಸುವಂತೆ ಮಾಡಲು ಶ್ರಮಿಸಿ ಎಂಬುದಾಗಿದೆ.
ಅದೇ ವೇಳೆ ಶಿವಕುಮಾರ್ ರವರ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆ, ವಿಶ್ವದ ಗಮನ ಸೆಳೆಯ ಬೇಕಾದರೆ ‘ಬೆಂಗಳೂರು ಮ್ಯೂಸಿಯಂ’ ಅಡಿಪಾಯವಾಗಲಿದೆ. ಈ ಹಿನ್ನಲೆಯಲ್ಲಿ ‘ಬೆಂಗಳೂರು ಪಬ್ಲಿಕ್ ಟಾಸ್ಕ್ ಪೋರ್ಸ್’ ರಚಿಸಿಕೊಂಡು, ಸದಾ ಎಚ್ಚರಿಸುವಂತ ಸಂಘಟನೆಗಳು ಬೇಕಾಗಿದೆ.
ಆದ್ದರಿಂದ ಬೆಂಗಳೂರು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ವ್ಯಕ್ತಿ, ಕುಟುಂಬ, ಸಂಘ ಸಂಸ್ಥೆಗಳು, ಸಂಶೋಧಕರು, ಇತಿಹಾಸಕಾರರ ಬಗ್ಗೆ ತಮಗೆ ಜ್ಞಾನವಿದ್ದಲ್ಲಿ ‘ಜ್ಞಾನದಾನ’ ಮಾಡಲು ಬಹಿರಂಗ ಮನವಿ ಮಾಡಲಾಗಿದೆ.
ಕೇಂದ್ರ ಸರ್ಕಾರದಿಂದ, ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು ಕಾರ್ಯತಂತ್ರಗಳ ಅಧ್ಯಯನ ಮಾಡುತ್ತಿರುವ ಹಿನ್ನಲೆಯಲ್ಲಿ, ಇದು ಒಂದು ಮಹತ್ವದ ಹೆಜ್ಜೆಯಾಗಿದೆ.
‘0’ ಇಂದ ಆರಂಭಿಸುತ್ತಿದ್ದೇನೆ. ನಾನು ದಿನಾಂಕ:05.10.2022 ರಂದು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಶಕ್ತಿಪೀಠ ಫೌಂಡೇಷನ್ ಗೆಸ್ಟ್ ಹೌಸ್ ಆರಂಭಿಸಿ, ಆವರಣದಲ್ಲಿ ಪಿಜೆಸಿ ನಿವಾಸಿಗಳ ಸಹಕಾರದಿಂದ ‘ಪಂಚವಟಿ’ ಗಿಡ ಹಾಕಿಸಿ, ಮೌನವಾಗಿ ‘ಬೆಂಗಳೂರು- 2047’ ಅಧ್ಯಯನ ಆರಂಭಿಸಿದ ನನಗೆ, ‘ಪಂಚವಟಿ’ ಗಿಡಗಳಿಗೆ ಒಂದು ವರ್ಷ ತುಂಬುವ ವೇಳೆಗೆ ಒಂದು ಸ್ಪಷ್ಠ ನಿರ್ಧಾರಕ್ಕೆ ಬರಲಾಗುವುದು. ಪಂಚವಟಿ ಗಿಡಗಳ ವಾರ್ಷಿಕೋತ್ಸವದ ವೇಳೆಗೆ, ಒಂದು ಸ್ಪಷ್ಟ ಚಿತ್ರಣದೊಂದಿಗೆ ಡಿಜಿಟಲ್ ಜನಾಂದೋಲನ ಆರಂಭಿಸಲಾಗುವುದು. ಇದೊಂದು ಮೌನ ಕ್ರಾಂತಿಯಾಗಲಿದೆ.
ಡಿಕೆಶಿ ಬ್ರ್ಯಾಂಡ್ ಬೆಂಗಳೂರು ನಿಜಕ್ಕೂ ಆನೆ ಬಲ ತಂದಿದೆ. ಅಭಿವೃದ್ಧಿ ಆಂದೋಲನದ 35 ವರ್ಷಗಳ ನನ್ನ ಅನುಭವ ನನಗೆ ಸಾಕಷ್ಟು ಧೈರ್ಯ ತುಂಬಿದೆ.
ನಿಮ್ಮ ಐಡಿಯಾ ಪ್ಲೀಸ್.