27th July 2024
Share

TUMAKURU:SHAKTHIPEETA FOUNDATION

ಘನತ್ಯಾಜ್ಯ ವಸ್ತು ಘಟಕಗಳನ್ನು ಹೈಟೆಕ್ ಮಾದರಿಯಲ್ಲಿ ಜನಸ್ನೇಹಿ ಘಟಕಗಳಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ಒಂದು ಸ್ಟಾರ್ಟ್ ಅಪ್ ಕಂಪನಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸುಳ್ಯ ಪಟ್ಟಣ ಪಂಚಾಯಿತಿಯಲ್ಲಿ ಪ್ರಾಯೋಗಿಕ ಘಟಕ ಆರಂಭಿಸಿದ್ದಾರೆ. ಮಾಜಿ ಸಚಿವರಾದ ಶ್ರೀ ಅಂಗಾರವರು ಬೆಂಬಲಿಸಿದ್ದರಂತೆ. ಬ್ರ್ಯಾಂಡ್ ಬೆಂಗಳೂರು ಬಗ್ಗೆ ಜ್ಞಾದಾನಿಗಳನ್ನು ಹುಡುಕಾಟ ಆರಂಭಿಸಿದಾಗ ನನ್ನ ಗಮನಕ್ಕೆ ಬಂದವರು ಶ್ರೀ ಪಟ್ಟಣ ಶೆಟ್ಟಿಯವರು ಮತ್ತು ಶ್ರೀ ಪ್ರಕಾಶ್ ತಂಡದವರು.

ಇವರನ್ನು ನನಗೆ ಪರಿಚಯ ಮಾಡಿಸಿದವರು ಶ್ರೀ ಪ್ರತಾಪ್ ರವರು ಮತ್ತು ಶ್ರೀ ದರ್ಶನ್ ರವರು. ನಾನು ಇವರ ಜೊತೆ ಸುಳ್ಯ ಘಟಕಕ್ಕೆ ಹೋಗಿ ನೋಡಿದೆ. ನನ್ನ ಸ್ನೇಹಿತರಾದ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ರವಿಕುಮಾರ್ ರವರೊಂದಿಗೂ ಸಮಾಲೋಚನೆ ನಡೆಸಿದೆ.

ಮೊದಲು ತುಮಕೂರು ಘನತ್ಯಾಜ್ಯ ಘಟಕವನ್ನು ಹೈಟೆಕ್ ಮಾಡಲು ಅಧ್ಯಯನ ಮಾಡಿ ವರದಿ ನೀಡಿ, ಈ ಘಟಕದ ಸುತ್ತ ಮುತ್ತಲಿನ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಈಗಾಗಲೇ ಹಲವಾರು ತಂಡದ ಜೊತೆ ಚರ್ಚೆ ನಡೆಸಿದ್ದೇವೆ.

ನಮ್ಮ ಕನಸಿನ ಯೋಜನೆ ಮಾಡಲು ಸಾದ್ಯಾವಾಗಿಲ್ಲ, ಶ್ರೀ ಡಮರುಗ ಉಮೇಶ್ ರವರ ತಂಡದವರಿಂದ ಛೀಮಾರಿ ಹಾಕಿಸಿಕೊಂಡಿದ್ದೇ ನಮ್ಮ ಸಾಧನೆಯಾಗಿದೆ.

ಆದ್ದರಿಂದ ತುಮಕೂರು ಘಟಕ ಮತ್ತು ಉದ್ದೇಶಿತ ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ಘಟಕದ ಬಗ್ಗೆ ವರದಿ ನೀಡಿ, ವಿಶ್ವದಲ್ಲಿ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಯ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಲಾಗಿದೆ.