21st December 2024
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ರೈಲ್ವೇ ಬೋರ್ಡ್ ಅಧ್ಯಕ್ಷರಾದ ಶ್ರೀ ಅನಿಲ್ ಕುಮಾರ್ ಲಾಹೊತಿ ರವರನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಭೇಟಿಯಾಗಿ ರಾಜ್ಯದ ವಿವಿಧ ರೈಲ್ವೇ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದರು.

ಶ್ರೀ ಸುರೇಶ್ ಪ್ರಭುರವರು ರೈಲ್ವೇ ಸಚಿವರಾಗಿದ್ದಾಗ, ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರೊಂದಿಗೆ ಭೇಟಿ ಮಾಡಿ, ಬೆಂಗಳೂರು ಸುತ್ತ ರೈಲ್ವೇ ಕಾರಿಡಾರ್ ಸಾಧ್ಯಾತಾ ವರದಿ ಸಿದ್ಧಪಡಿಸಲು ಮನವಿ ಸಲ್ಲಿಸಲಾಗಿತ್ತು.

ಈ ಪರಿಕಲ್ಪನೆಯನ್ನು ಶ್ರೀ ಟಿ.ಆರ್.ರಘೋತ್ತಮರಾವ್ ರವರು ನೀಡಿದ್ದರು. ಶ್ರೀ ಡಿ.ಕೆ.ಶಿವಕುಮಾರ್ ರವರು ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಬಗ್ಗೆ ಖಚಿತ ಪಡಿಸಿಕೊಂಡು, ಈ ಯೋಜನೆ ಅನುಷ್ಠಾನ ಮಾಡುವುದು ಸೂಕ್ತವಾಗಿರುವ ಹಿನ್ನಲೆಯಲ್ಲಿ ಮತ್ತೆ ಮನವಿ ಸಲ್ಲಿಸಲಾಗಿದೆ.

ಈ ಯೋಜನೆ ಬಗ್ಗೆ ಶ್ರಮಿಸುತ್ತಿರುವ ಜ್ಞಾನಿಗಳು ಒಟ್ಟಾಗಿ ಶ್ರಮಿಸಬೇಕಿದೆ.ಅಧ್ಯಯನ ಮಾಹಿತಿಗಳಿದ್ದಲ್ಲಿ ಹಂಚಿಕೊಳ್ಳಲು ಬಹಿರಂಗ ಮನವಿ.

ಕೇಂದ್ರ ಸರ್ಕಾರದ ಗತಿಶಕ್ತಿ ಯೋಜನೆಯ ಪಟ್ಟಿಗೆ ಸೇರ್ಪಡೆ ಮಾಡಲು ಸೂಕ್ತವಾಗಿರುವ ಯೋಜನೆಯಾಗಿದೆ. ಮೂಲಭೂತ ಸೌಕರ್ಯ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ವಿಶೇಷ ಗಮನ ಹರಿಸಬೇಕಿದೆ.

ಜೊತೆಯಲ್ಲಿ ಶ್ರೀ ಮುಳೀಧರ್ ನಾಯಕ್ ರವರು ಇದ್ದಾರೆ.