16th September 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಪಂಚವಟಿ ಗಿಡ ಹಾಕಿ ಒಂದು ವರ್ಷ ಆಗುತ್ತಾ ಬಂದಿತು. ಉಳಿದಿರುವ ಜಾಗದಲ್ಲಿ 545 ಗಿಡ ಹಾಕಿ ವಿದ್ಯಾರ್ಥಿಗಳಿಗೆ ಗಿಡಗಳ ಪರಿಚಯ ಮಾಡುವ ನಮ್ಮ ಕನಸು ನನೆಗುದಿಗೆ ಬಿದ್ದಿದೆ.

ಇಂದು ಗುಲ್ಭರ್ಗ ಜಿಲ್ಲೆಯ ಶ್ರೀ ಶೇಖಪ್ಪನವರು, ಬೀದರ್ ಜಿಲ್ಲೆಯ ಶ್ರೀ ಸಂತೋಷ್ ರವರೊಂದಿಗೆ ಪಂಚವಟಿ ಗಿಡಗಳ ಬಳಿ ಸುತ್ತಾಡಲಾಯಿತು. ನಾನು ಇಲ್ಲಿ 545 ಗಿಡಗಳನ್ನು ಹಾಕಲೇ ಬೇಕು ಎಂಬ ಹಸಿರು ಪ್ರತಿಜ್ಞೆ ಮಾಡಿದೆ.

ಶೇಖಪ್ಪನವರಿಗೆ ಹೇಳಿದ ಮಾತು, ಸಾರ್ ಇಲ್ಲಿ ಗಿಡಹಾಕಿ ಬೆಳೆಸಲು ಅಸೋಶೀಯೇಷನ್ ನಿಂದ ಹೊಣೆಗಾರಿಕೆಯನ್ನು ನನಗೆ ಕೊಡಿಸಿ ಅಥವಾ ನೀವೂ ಪಡೆಯಿರಿ. ‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಕರಡು ವರದಿಯಲ್ಲಿನ 545 ಅಧ್ಯಯನ ಪೀಠಗಳಿಗೆ ಒಂದೊಂದು ಗಿಡದಂತೆ 545 ಗಿಡ ಹಾಕಿ ಬೆಳೆಸೋಣ.

ಸಕಾರಾತ್ಮಕವಾಗಿ ಸ್ಪಂಧಿಸಿದ ಶ್ರೀ ಸಂತೋಷ್ ರವರು ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆರವರು ನಮ್ಮ ಊರಿನವರು, ಈಗಾಗಲೇ ಪಿಜೆಸಿಗೆ ಅವರ ಸ್ನೇಹಿತರ ಮನೆಗೆ ಬಂದು ಹೋಗಿದ್ದಾರೆ. ಅವರನ್ನು ಕರೆಯೋಣ ಎಂದರು.ಬೀದರ್ ಜಿಲ್ಲೆಯವರು ಪಿಜೆಸಿಯಲ್ಲಿ ಸುಮಾರು 15 ಜನ ಇದ್ದೇವೆ ಎಂದರು.

ಅಗತ್ಯವಿರುವ ಗಿಡಗಳ ಸಂಗ್ರಹಣೆ ನನಗೆ ಬಿಡಿ, ಒಬ್ಬ ವಿದ್ಯಾರ್ಥಿಗೆ ಒಂದು ಜಾತಿಯಂತೆ 545 ಜಾತಿಯ ಗಿಡಗಳನ್ನು ಹಾಕಲು ಸಿದ್ಧತೆ ನಡೆಸಿ ಎಂಬ ಮಾತಿಗೆ ಶೇಖಪ್ಪನವರು ನನಗೆ 15 ದಿನ ಅವಕಾಶ ನೀಡಿ, ಅನುಮತಿ ಪಡೆಯುತ್ತೇನೆ ಎಂದು ಖಚಿತವಾಗಿ ಹೇಳಿದ್ದಾರೆ.

ಕಾದು ನೋಡೋಣ ?