2nd November 2024
Share

TUMAKURU:SHAKTHIPEETA FOUNDATION

  ಶಕ್ತಿಪೀಠ ಫೌಂಡೇಷನ್ ವತಿಯಿಂದ ಬೆಂಗಳೂರಿನಲ್ಲಿ ಬ್ರ್ಯಾಂಡ್ ಬೆಂಗಳೂರು ಮ್ಯೂಸಿಯಂ ಸ್ಥಾಪಿಸಲು ಅಧಿಕೃತವಾಗಿ ಚಾಲನೇ ನೀಡಲಾಗಿದೆ. ಸರ್ಕಾರಗಳ ಸಹಭಾಗಿತ್ವ ಇರಬಹುದು ಅಥವಾ ಇರದೇ ಇರಬಹುದು.ಮ್ಯೂಸಿಯಂ ಸ್ಥಾಪಿಸುವ ಮುನ್ನ, ಬೆಂಗಳೂರು ಬಗ್ಗೆ ಒಂದು ವಿವರವಾದ ಅಧ್ಯಯನ ನಡೆಯಬೇಕಿದೆ.

ಅಧ್ಯಯನಕ್ಕಾಗಿ   ಶಕ್ತಿಪೀಠ ಫೌಂಡೇಷನ್‍ಗೆ ಒಂದು ಸ್ವಂತ ಕಟ್ಟಡದ ಅವಶ್ಯಕತೆಯಿದೆ. ವಿಧಾನ ಸೌಧದಿಂದ ತುಮಕೂರು ರಸ್ತೆಯ ಮಾರ್ಗದಲ್ಲಿ, ಯಾವುದೇ ಮೆಟ್ರೋ ಸ್ಟೇಷನ್‍ಗೆ ಸಮೀಪ ಇರುವ ಕನಿಷ್ಟ 40 X 36 ಅಡಿಗೆ ಕಡಿಮೆ ಇರದಂತಹ ನಿವೇಶನ ಮಾರಾಟಕ್ಕೆ ಇದ್ದರೆ ಮಾಹಿತಿ ನೀಡಲು ಬಹಿರಂಗ ಮನವಿ.

ಯಾರಾದರೂ ಲೋಕಲ್ ಇನ್ವೆಸ್ಟರ್ ನಮಗೆ ಅನೂಕೂಲ ಇರುವಂತೆ ಕಟ್ಟಡ ನಿರ್ಮಾಣ ಮಾಡಿ, 2047 ರವರೆಗೂ ಲೀಸ್ ಕಂ ಬಾಡಿಗೆ ನೀಡುವುದಿದ್ದರೂ ಸ್ವಾಗತ. ದಾನಿಗಳು ಮಂದೆ ಬಂದು ಕಟ್ಟಡವನ್ನು ಅವರ ಹೆಸರಿನಲ್ಲಿ, ಅವರ ತಂದೆ ತಾಯಿ ಹೆಸರಿನಲ್ಲಿ ಅಥವಾ ಅವರ ಮಕ್ಕಳ ಹೆಸರಿನಲ್ಲಿ ದಾನ ನೀಡಿದರೂ ಖುಷಿ.

ಇದೇ ಕಟ್ಟಡದಲ್ಲಿ ನಾಲೇಡ್ಜ್ ಬ್ಯಾಂಕ್-2047, ಗೆಸ್ಟ್ ಹೌಸ್, ನನ್ನ ವಾಸ್ತವ್ಯವೂ ಇಲ್ಲೆ ಇರಲಿದೆ. ಸಂಶೋಧಕರೂ ಯಾವಾಗಲೂ ಅಧ್ಯಯನ ಪೀಠಗಳ ಕಟ್ಟಡದಲ್ಲಿಯೇ ವಾಸ ಇರಬೇಕು.

ಆಸಕ್ತರು ಕೈ ಜೋಡಿಸ ಬಹುದು.