27th July 2024
Share

ಬ್ರ್ಯಾಂಡ್ ಬೆಂಗಳೂರು: ಬುದ್ಧ ಜ್ಯೋತಿ ಬಡಾವಣೆ; ನನ್ನ ಸ್ವತ್ತುನನ್ನ ದಾಖಲೆ: ಒಂದು ಕೇಸ್ ಸ್ಟಡಿ

TUMAKURU:SHAKTHIPEETA FOUNDATION

  ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ಬ್ರ್ಯಾಂಡ್ ಬೆಂಗಳೂರು’ ಮಾಡಲು ಹೆಜ್ಜೆ ಇಟ್ಟಿರುವುದು, ಒಳ್ಳೆಯ ಬೆಳವಣಿಗೆ. ಟೀಕೆ ಮಾಡುವವರು ಟೀಕಿಸುವುದನ್ನು ಬಿಟ್ಟು ಯಾವ ರೀತಿ ಮಾಡಬೇಕು ಎಂಬ ಸಲಹೆ ನೀಡುವುದು ಸೂಕ್ತವಾಗಿದೆ.

  ಬೆಂಗಳೂರಿ£ಲ್ಲಿ ನಿವೇಶನ ಅಥವಾ ಮನೆಕೊಳ್ಳುವವರಿಗೆ ನೆಮ್ಮದಿ’ ಇಲ್ಲದಂತಾಗಿದೆ. ಹಲವಾರು ಸಮಸ್ಯೆಗಳು ಎದುರಾಗಲಿವೆ. ಅವರ ನೆಮ್ಮದಿಗೆ ಒಂದು ಪರಿಹಾರ ಕೊಂಡುಕೊಳ್ಳಲು ಒಂದು ಕೇಸ್ ಸ್ಟಡಿಯನ್ನು ಆರಂಭಿಸಲಾಗಿದೆ. ಇದಕ್ಕೊಂದು ಪರಿಹಾರವನ್ನು ವಿಷನ್ ಡಾಕ್ಯುಮೆಂಟ್-2047 ರಲ್ಲಿ ಸೇರಿಸ ಬೇಕಿದೆ.

ಶಕ್ತಿಪೀಠ ಫೌಂಡೇಷನ್, ಬೆಂಗಳೂರಿನಲ್ಲಿ  ಬ್ರ್ಯಾಂಡ್ ಬೆಂಗಳೂರು ಅಧ್ಯಯನ ಪೀಠ ಆರಂಭಿಸಲು, ಚಿಂತನೆ ನಡೆಸಿದೆ. ಒಬ್ಬರು ಲೋಕಲ್ ಇನ್ವೆಸ್ಟರ್ ಬಂಡವಾಳ ಹೂಡಿಕೆ’ ಮಾಡಲು ವಿಶೇಷ ಆಸಕ್ತಿ ವಹಿಸಿದ್ದಾರೆ.ಅವರು ನಮಗೆ ಬೇಕಾದ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಟ್ಟರೆ, 2047 ರವರೆಗೆ, ಲೋಕೋಪಯೋಗಿ ಇಲಾಖೆ ನಿಗಧಿ ಪಡಿಸುವ ದರ’ ದಲ್ಲಿ ಬಾಡಿಗೆ ನೀಡಲು ಒಪ್ಪಂದ ಮಾಡಿಕೊಳ್ಳಲಾಗುವುದು. ನಮಗೆ ಸೂಕ್ತವಾಗಿರುವ ನಿವೇಶನ/ಮನೆ ಹುಡುಕಾಟ ಆರಂಭವಾಗಿದೆ.

ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ಉತ್ತರ ತಾಲ್ಲೋಕಿನ,ದಾಸಾನುಪುರ-2 ಹೋಬಳಿಯ, ಮಾದವಾÀರ ನಗರಸಭೆ ವ್ಯಾಪ್ತಿಯ, ಚಿಕ್ಕಬಿದರೆಕಲ್ಲು ಗ್ರಾಮದ ಒಂದು ಕಟ್ಟಡದ ಕೇಸ್ ಸ್ಟಡಿ ಆರಂಭವಾಗಿದೆ. ಒಂದು ನಿವೇಶನ/ಮನೆ ಕೊಂಡುಕೊಳ್ಳಬೇಕಾದರೆ ಗಮನಿಸಬೇಕಾದ ಅಂಶಗಳ ಬಗ್ಗೆ ‘ನನ್ನ ಸ್ವತ್ತು- ನನ್ನ ದಾಖಲೆ ಮಾಹಿತಿ’ ಯ ಅಗತ್ಯವಾಗಿದೆ.

ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್, ಬೆಂಗಳೂರಿನ ಪ್ರೀತಿ ಕ್ಯಾಡ್ ಕನ್ಸ್‍ಲ್ಟೇಷನ್, ಬೆಂಗಳೂರಿನ ಆದ್ಯಾಪ್ರಜ್ಞಾ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಮತ್ತು ಕೆನರಾ ಬ್ಯಾಂಕ್ ಮೂಲಕ ಕೆಳಕಂಡ ಮಾಹಿತಿಗಳ ಸಂಗ್ರಹ ಮಾಡುತ್ತಿದೆ.

  1. ಕಾನೂನು: ನಾನು ಕೊಂಡುಕೊಳ್ಳುವ ನಿವೇಶನ/ಮನೆಗೆ 1947 ರಿಂದ ಈವರೆಗಿನ ದಾಖಲೆಗಳು ಯಾವ ರೀತಿ ಇವೆ?
  2. ಜಿಐಎಸ್: ನಾನು ಕೊಂಡುಕೊಳ್ಳುವ ನಿವೇಶನ/ಮನೆ ಸರಿಯಾಗಿ ಅದೇ ನಿವೇಶನದಲ್ಲಿ ಇದೆಯೇ?
  3. ಸಿವಿಲ್ ಇಂಜಿನಿಯರಿಂಗ್: ನಾನು ಕೊಂಡುಕೊಳ್ಳುವ ನಿವೇಶನ/ಮನೆಯ ಸೆಟ್ ಬ್ಯಾಕ್ ನಿಯಮ, ಮಣ್ಣಿನ ಪರೀಕ್ಷೆ, ಕಟ್ಟಡದ ಮಾದರಿ. ನಕ್ಷೆ ಪ್ರಕಾರ ಇದೆಯೇ?
  4. ವಾಸ್ತು; ನಾನು ಕೊಂಡುಕೊಳ್ಳುವ ನಿವೇಶನ/ಮನೆಗೆ ವಾಸ್ತು ಯಾವ ರೀತಿ ಇದೆ.
  5. ಆಯ: ನಾನು ಕೊಂಡುಕೊಳ್ಳುವ ನಿವೇಶನ/ಮನೆ ಆಯದ ಪ್ರಕಾರ ಇದೆಯೇ?
  6. ಬ್ಯಾಂಕ್ ಸಾಲ: ನಾನು ಕೊಂಡುಕೊಳ್ಳುವ ನಿವೇಶನ/ಮನೆಗೆ ಬ್ಯಾಂಕ್ ಸಾಲ ದೊರೆಯುತ್ತದೆಯೇ?
  7. ಪ್ಲಡ್ : ನಾನು ಕೊಂಡುಕೊಳ್ಳುವ ಮನೆ/ನಿವೇಶನದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದೇ?
  8. ಕರಾಬು: ನಾನು ಕೊಂಡುಕೊಳ್ಳುವ ಮನೆ/ನಿವೇಶನದಲ್ಲಿ ಯಾವುದಾರು ಕರಾಬು ಇದೆಯೇ?
  9. ನೆರೆಹೊರೆ: ನಾನು ಕೊಂಡುಕೊಳ್ಳುವ ಮನೆ/ನಿವೇಶನದ ಅಕ್ಕ-ಪಕ್ಕದ ಪರಿಸರದ ಮಾಹಿತಿ, ಸಾರಿಗೆ ವ್ಯವಸ್ಥೆ, ಘನತ್ಯಾಜ್ಯ ವಸ್ತು ಕಾಟ, ಜೀವಿಸಲು ಯೋಗ್ಯವಾಗಿ ಇದೆಯೇ?

  ಈಗಾಗಲೇ ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಪ್ಪನವರು, ಶ್ರೀ ನಾಗರಾಜ್ ರವರು, ಬಾಗಲಕೋಟೆ ಜಿಲ್ಲೆಯ ಶ್ರೀ ವೀರಣ್ಣನವರು, ಶ್ರೀ ಹೊಸಮನಿಯವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಈ ಅಧ್ಯಯನ ವರದಿಯನ್ನು ತುಮಕೂರು ರೀಸರ್ಚ್ ಫೌಂಡೇಷನ್-2047 ಕ್ಕೆ ಜ್ಞಾನದಾನ ಮಾಡಲಿದ್ದಾರೆ.

ಮೇಲ್ಕಂಡ ಗ್ರಾಮದ ಬಗ್ಗೆ/ ಅಧ್ಯಯನ ವರದಿಯ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ಸಂಪರ್ಕಿಸಲು ಮನವಿ.