TUMAKURU:SHAKTHIPEETA FOUNDATION
ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿರುವ ಇರುವ ಟ್ರೀ ಪಾರ್ಕ್‍ನಲ್ಲಿ , ತುಮಕೂರಿನ ಶಕ್ತಿಪೀಠ ಫೌಂಡೇಷನ್, ಪಂಚವಟಿ ಗಿಡಹಾಕುವ ಪ್ರಸ್ತಾವವನ್ನು, ತುಮಕೂರು ಜಿಲ್ಲೆಯವರು ಹಾಗೂ ಪಿಜೆಸಿ ನಿವಾಸಿಗಳಾದ ಶ್ರೀ ಸಿದ್ಧಗಂಗಪ್ಪನವರು ಮತ್ತು ಎಂಪ್ರೆಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಪಿಜೆಸಿ ನಿವಾಸಿಗಳಾದ ಶ್ರೀ ವಿಶ್ವನಾಥ್ ರವರೊಂದಿಗೆ 2022 ರ ಅಕ್ಟೋಬರ್ ತಿಂಗಳು ಪ್ರಸ್ತಾಪ ಮಾಡಲಾಗಿತ್ತು.
ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆಜಿ ಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ, ಬಗ್ಗನಡು ಕಾವಲ್‍ನಲ್ಲಿ ಇರುವ ನಮ್ಮ ಶಕ್ತಿಪೀಠ ಕ್ಯಾಂಪಸ್ ನಿಂದ 5 ಗಿಡಗಳನ್ನು ನನ್ನ ಸಹೋದರ ಶ್ರೀ ರಾಜೇಶ್‍ರವರ ಕಾರಿನಲ್ಲಿ ತರಿಸಲಾಯಿತು.
ತುಮಕೂರಿನ ಆರ್.ಎಫ್.ಓ ರವರಾದ ಶ್ರೀಮತಿ ಪವಿತ್ರವರಿಗೆ 5 ಗಿಡಗಳನ್ನು ಕೊಡಲು ಮನವಿ ಮಾಡಿದ ಹಿನ್ನಲೆಯಲ್ಲಿ, 5 ಗಿಡಗಳನ್ನು ಕೊರಟಗೆರೆ ತಾಲ್ಲೋಕಿನ ಕಟ್ಟೆಬಾರಿಯ ಶ್ರೀ ಗುರುಸಿದ್ದರಾಧ್ಯರು ಸಂಗ್ರಹಿಸಿ, ತಂದು ನಮ್ಮ ತುಮಕೂರಿನ ಮನೆಯ ಬಳಿ ಇಟ್ಟರು.
ಗಿಡ ತಂದಾಗ ಪಿಜೆಸಿ ಮಾಲ್ ಬಳಿ ಇರಿಸುವಾಗ ಸಹಕರಿಸಿದವರು ಶ್ರೀ ಸುಬ್ರಮಣ್ಯರವರು ಹಾಗೂ ಶೇಖಪ್ಪನವರ ತಂಡ.
ಶ್ರೀ ಗುರುಸಿದ್ದರಾಧ್ಯರು ಬೆಂಗಳೂರಿಗೆ ಬಂದು ಎಲ್ಲಿ ಪಂಚವಟಿ ಹಾಕಬೇಕು ಎಂಬ ಸ್ಥಳ ನಿಗದಿ ಮಾಡಿದರು. ಆದರೇ ಗುಂಡಿ ತೆಗೆಯುವವರು ಸ್ಥಳ ಬದಲಾಯಿಸಿದರು. ಗುಂಡಿ ತೆಗೆಸಿದವರು ಶ್ರೀ ವಿಶ್ವನಾಥ್ ರವರು ಮತ್ತು ಶ್ರೀ ಸಿದ್ದಲಿಂಗಪ್ಪನವರ ತಂಡದವರು.
ದಿನಾಂಕ:22.10.2022 ರಂದು ಗಿಡಹಾಕಿದಾಗ ಇದ್ದವರು.
ಗಿಡಹಾಕಿದ ಒಂದು ವಾರದ ಫೋಟೋ.
ದಿನಾಂಕ:30.03.2023 ರಂದು ರಾಮನವಮಿ ದಿವಸ ಪೂಜೆಯ ಫೋಟೋ.
ದಿನಾಂಕ:24.10.2023 ರಂದು ವಿಜಯ ದಶಮಿ ದಿವಸ ಪೂಜೆಯ ಫೋಟೋಗಳು. ಪಂಚವಟಿ 1 ನೇ ವಾರ್ಷಿಕೋತ್ವವ ದಿನ ಎಂದರೆ ತಪ್ಪಾಗಲಾರದು. ವಿಜಯಪುರದ ತಂಡದ ಒಬ್ಬ ಮಹಿಳೆ, ಈ ಗಿಡಹಾಕಿದ ಪುಣ್ಯಾತ್ಮರಿಗೆ ದೇವರು ಒಳ್ಳೆಯದು ಮಾಡಲಿ ಎಂದಾಗ ಆದ ತೃಪ್ತಿಗೆ ಬೆಲೆ ಕಟ್ಟಲಾಗದು.
ಪಂಚವಟಿ ಗಿಡಗಳು: ಅರಳಿ, ಅತ್ತಿ, ಬೇವು, ಬಿಲ್ವಪತ್ರೆ ಮತ್ತು ಬನ್ನಿ ಗಿಡ, ಈ ಐದು ಗಿಡಗಳನ್ನು ಒಟ್ಟಿಗೆ ಒಂದೇ ಗುಂಡಿಯಲ್ಲಿ ಹಾಕಲಾಗಿದೆ.
ಹೆಚ್ಚಿನ ವಿವರಗಳಿಗೆ ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಪಂಚವಟಿಗಳ ಬಗ್ಗೆ ಗೂಗಲ್ ನಲ್ಲಿ ನೋಡಬಹುದು.