27th July 2024
Share

TUMAKURU:SHAKTHIPEETA FOUNDATION

ಪಂಚವಟಿ ಗಿಡಗಳು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಭಾರಿ ಸದ್ಧು ಮಾಡುತ್ತಿವೆ. ಪ್ರತಿ ನಿತ್ಯ ಪೂಜೆ, ಪ್ರದಕ್ಷಿಣೆ ಹಾಕುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ದಿನಾಂಕ:27.10.2023 ರಂದು ಬೆಳಿಗ್ಗೆ ಜಿಮ್ ಮಾಡುವಾಗ ಶ್ರೀ ನಾಗರಾಜ್ ರವರು, ಶ್ರೀ ಪ್ರಶಾಂತ್ ರವರು, ಶ್ರೀ ಉಮೇಶ್ ರವರು ಮುಂತಾದವರ ತಂಡ ಪಂಚವಟಿ ಸುತ್ತ ಕಲ್ಲು ಕಟ್ಟೆ ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದರು.

ಸುತ್ತ ಪ್ರದಕ್ಷಿಣೆ ಹಾಕಲು ಆಕ್ಯುಪ್ರೆಷರ್ ಪಾರ್ಕ್ ಮಾದರಿಯಲ್ಲಿ ನಿರ್ಮಾಣ ಮಾಡಿದರೆ, ಪ್ರದಕ್ಷಿಣೆ ಮತ್ತು ಆಕ್ಯುಪ್ರೆಷರ್ ಎರಡು ಅನೂಕೂಲಗಳ ಬಗ್ಗೆ ಚರ್ಚೆ ನಡೆಯಿತು.

ತಕ್ಷಣ ಎಲ್ಲಾ ಟೀಮ್ ಪಂಚವಟಿ ಗಿಡಗಳ ಬಳಿ ಹೋದಾಗ ಇಬ್ಬರು ನಾರಿಶಕ್ತಿ ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಹಾಕುತ್ತಿದ್ದರೂ, ಸಮತಟ್ಟಾದ ಜಾಗವಿಲ್ಲದೆ ಅವರು ಪ್ರದಕ್ಷಿಣೆ ಹಾಕುವ ರೀತಿ ಗಮನಿಸಿದ ತಂಡ ಇದಕ್ಕೊಂದು ಮುಕ್ತಿ ಕಾಣಿಸಲು ಸಮಾಲೋಚನೆ ನಡೆಸಿದರು. ನಾನೂ ಸಹ ಪ್ರತಿ ನಿತ್ಯ ಪ್ರದಕ್ಷಿಣೆ ಹಾಕಲು ಆರಂಭಿಸಿದ್ಧೆನೆ.

  1. ಮಳೆ ಬಂದಾಗ ನೀರು ನಿಲ್ಲದಂತೆ ಎತ್ತರ ಮಾಡುವುದು.
  2. ಸುತ್ತಲೂ ಪ್ರದಕ್ಷಿಣೆ ಹಾಕಲು ಆಕ್ಯುಪ್ರೆಷರ್ ಪಾರ್ಕ್ ಮಾದರಿಯಲ್ಲಿ ನಿರ್ಮಾಣ ಮಾಡುವುದು.
  3. ಸುತ್ತಲೂ ಕಲ್ಲು ಕಟ್ಟೆ ನಿರ್ಮಾಣ ಮಾಡುವುದು.
  4. ಇದರ ಜೊತೆಗೆ ಗಿಡಗಳಿಗೆ ದೀಕ್ಷೆ ಮಾಡಿಸುವುದು.
  5. ಪ್ರತಿ ದಿವಸ ಸೂರ್ಯ ಉದಯ ಹಾಗೂ ಸೂರ್ಯ ಮುಳುಗುವ ಸಮಯ ಅಗ್ನಿಹೋತ್ರ ಹೋಮ ಮಾಡುವುದು ಬಹಳ ಒಳ್ಳೆಯದು. ಸುಮಾರು ಒಂದು ಕೀಮಿ ಗಿಂತಲೂ ಹೆಚ್ಚು ವ್ಯಾಪ್ತಿಗೆ ಅನೂಕೂಲವಾಗಲಿದೆ.
  6. ಯೂ ಟ್ಯೂಬ್ ನಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಹಾಕಿದ, ಅಣುಬಾಂಬ್ ಅಧ್ಯಯನ ವರದಿ ಗಮನಿಸಿದರೆ ಅಗ್ನಿಹೋತ್ರದ ಹೋಮದ ಮಹತ್ವದ  ಮಾಹಿತಿ ದೊರೆಯಲಿದೆ.
  7. ಇದೊಂದು ಸರ್ವಧರ್ಮಗಳ ಪವಿತ್ರ ಸ್ಥಳ ಆಗಲಿದೆ.
  8. ನೇಚರ್ ಈಸ್ ಗಾಡ್ ಪದಕ್ಕೆ ಅರ್ಥ ಬರಲಿದೆ.