12th April 2024
Share

TUMAKURU:SHAKTHIPEETA FOUNDATION

‘ಊರಿಗೊಂದು/ಬಡಾವಣೆಗೊಂದು  ಪುಸ್ತಕ/ವಿಷನ್ ಡಾಕ್ಯುಮೆಂಟ್-2047   ಕರಡು ಟೆಂಪ್ಲೇಟ್ ಬಿಡುಗಡೆ’ ಮಾಡುವ ಬಗ್ಗೆ, ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳು ಹಾಗೂ ತುಮಕೂರು ರೀಸರ್ಚ್ ಫೌಂಡೇಷನ್- 2047 ನ ಅಧ್ಯಕ್ಷರಾದ ಪ್ರೊ.ವೆಂಕಟೇಶ್ವರಲು ಎಂ. ರವರೊಂದಿಗೆ ದಿನಾಂಕ:13.11.2023 ರಂದು ಸಮಾಲೋಚನೆ ನಡೆಸಲಾಯಿತು.

ತುಮಕೂರು ಜಿಲ್ಲೆಯ ಯಾವುದಾದರೊಂದು ಕಾಲೇಜಿನಲ್ಲಿ ಅಥವಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ‘ಊರಿಗೊಂದು/ಬಡಾವಣೆಗೊಂದು  ಪುಸ್ತಕ/ವಿಷನ್ ಡಾಕ್ಯುಮೆಂಟ್-2047   ಕರಡು ಟೆಂಪ್ಲೇಟ್ ಬಿಡುಗಡೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ದೆಹಲಿ, ಜಮ್ಮು ಮತ್ತು ಮಧ್ಯಪ್ರದೇಶಗಳ ಪ್ರವಾಸದ ವಿವಿಧ ಅಧ್ಯಯನ ವರದಿ ನೀಡುವ ಬಗ್ಗೆಯೂ ಚರ್ಚೆ ನಡೆಯಿತು.ಇದೂವರೆಗಿನ ಪ್ರಗತಿ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು. ಜೊತೆಯಲ್ಲಿ TRF-2047 ಪಧಾದಿಕಾರಿಗಳಾದ ಪ್ರೊ. ಶ್ರೀಮತಿ ಮಂಗಳಗೌರಿರವರು, ಪ್ರೊ. ಪರಶುರಾಮ್ ರವರು, ಪ್ರೊ ಪರಶಿವಮೂರ್ತಿರವರು ಇದ್ದರು.

ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ರಾಜ್ಯದ ಸುಮಾರು 18 ಜಿಲ್ಲೆಗಳಿಗೂ ಹೆಚ್ಚು ವಿಧ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವದರಿಂದ ಈ ಕಾಲೇಜಿನಲ್ಲಿ ಅಥವಾ ಸಿದ್ಧಗಂಗಾ ಮಠದಲ್ಲಿ ರಾಜ್ಯದ ಬಹುತೇಕ ಗ್ರಾಮಗಳ ವಿದ್ಯಾರ್ಥಿಗಳು ಇರುವುದರಿಂz ಸಿದ್ಧಗಂಗಾ ಮಠದಲ್ಲಿ ಅಥವಾ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಈಗಾಗಲೇ ಊರಿಗೊಂದು/ಬಡಾವಣೆಗೊಂದು  ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಇಂಟರ್‍ಷಿಪ್ ಗೆ   ನೊಂದಾವಣೆ ಮಾಡಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳನ್ನು ಒಂದು ಕಡೆ ಆಹ್ವಾನಿಸಿ, ಸಂವಾz ನಡೆಸಿ ಕರಡು ಟೆಂಪ್ಲೇಟ್ ಬಿಡುಗಡೆ ಮಾಡಲು ಸಲಹೆ ನೀಡಲಾಗಿದೆ.

ಊರಿಗೊಂದು/ಬಡಾವಣೆಗೊಂದು  ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಇದೊಂದು, ಆಯಾ ವ್ಯಾಪ್ತಿಯ ಮಾಹಿತಿಗಳ  ಸಮುದ್ರ, ವಿಶಿಷ್ಠವಾದ ಕಾರ್ಯಕ್ರಮ, ಪ್ರಪಂಚ ಮೆಚ್ಚುವ ಯೋಜನೆ, ತುಮಕೂರು ಜಿಲ್ಲೆಯ ಅಥವಾ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಗ್ರಾಮದ, ಬಡಾವಣೆ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್ -2047 ಗಳನ್ನು ಏಕ ಕಾಲದಲ್ಲಿ ದೇಶದ ದೊರೆ/ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಹಾಗೂ ರಾಜ್ಯದ ದೊರೆ/ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಮೂಲಕ ಉದ್ಘಾಟನೆ ಮಾಡಿಸುವ ಚಿಂತನೆಗೆ ಶರವೇಗ ದೊರೆತಿದೆ.