12th September 2024
Share

TUMAKURU:SHAKTHIPEETA FOUNDATION

    ಕರ್ನಾಟಕ ವಿಧಾನ ಪರಿಷತ್ ಸದಸ್ಯರುಗಳಾದ  ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿರವರು ಮತ್ತು ಶ್ರೀ ರವಿಕುಮಾರ್ ರವರೊಂದಿಗೆ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ರ ಬಗ್ಗೆ ದಿನಾಂಕ:15.11.2023 ರಂದು ಶಾಸಕರ ಭವನದಲ್ಲಿ ಸಮಾಲೋಚನೆ ನಡೆಸಲಾಯಿತು.

ತಮಕೂರು ವಿಶ್ವ ವಿದ್ಯಾನಿಲಯ ಫೈಲಟ್ ಯೋಜನೆಗೆ ಸಿದ್ಧತೆ ನಡೆಸಿದ್ದು, ಇದೇ ಮಾದರಿಯಲ್ಲಿ, ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲೂ ಜಾರಿಗೊಳಿಸಲು, ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಪಾಲರ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಲು ಚಿಂತನೆ ನಡೆಸಲಾಯಿತು.

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೂ ದೇಶಾದ್ಯಂತ ಇದೇ ಮಾದರಿ ಅನುಸರಿಸಲು ಮತ್ತು ತುಮಕೂರು ಜಿಲ್ಲೆಯ ಫೈಲಟ್ ಯೋಜನೆಯ ಅಂಗವಾಗಿ, ಜಿಲ್ಲೆಯ ಸುಮಾರು 3000 ಕ್ಕೂ ಹೆಚ್ಚು ಗ್ರಾಮಗಳು ಮತ್ತು ಬಡಾವಣೆಗಳ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್-2047 ಗಳನ್ನು ಏಕಕಾಲದಲ್ಲಿ ಉದ್ಘಾಟನೆ ಮಾಡಲು ಸಹಕರಿಸಲು ಮತ್ತು ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನ ಮಂಜೂರು ಮಾಡಲು, ಮನವಿ ಸಲ್ಲಿಸಲು ಚಿಂತನೆ ನಡೆಸಲಾಯಿತು.

ದೆಹಲಿಯಲ್ಲಿ ಕರ್ನಾಟಕ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳ ಹಾಸ್ಟೆಲ್ ಗೆ ಜಮೀನು ಮಂಜೂರು ಮಾಡಿಸಲು ದೆಹಲಿಯ ಸರ್ಕಾರಕ್ಕೆ, ರಾಜ್ಯ ಸರ್ಕಾರದಿಂದ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವರು ಮತ್ತು ದೆಹಲಿ ಸರ್ಕಾರದ ಲೆಪ್ಪಿನೆಂಟ್ ರವರ ಬಳಿ ನಿಯೋಗ ಹೋಗಲು ಚರ್ಚಿಸಲಾಯಿತು.

‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಗಳನ್ನು ನೀಡಿ, ಕರಡು ಪ್ರತಿಯಲ್ಲಿನ ಅಂಶಗಳಿಗೆ ಸಹಕರಿಸಲು ಮನವಿ ಮಾಡಲಾಯಿತು.

ಎಲ್ಲಾ ಪಕ್ಷಗಳ ವಿಧಾನ ಪರಿಷತ್ ಸದಸ್ಯರುಗಳ ವಿಶೇóಷ ಸಹಕಾರ ಪಡೆಯಲು ಶ್ರಮಿಸಲಾಗುವುದು. ಚಿಂತಕರ ಛಾವಡಿ ವಿಧಾನ ಪರಿಷತ್, ಆದರೇ ಇತ್ತೀಚೆಗೆ ‘ಹಣವಂತರ ಕ್ಲಬ್’ ಆಗಿ ಮಾರ್ಪಾಟು ಆಗಿದ್ದರೂ, ಎಲ್ಲಾ ಪಕ್ಷಗಳಲ್ಲೂ ಜ್ಞಾನಿಗಳೂ ಇದ್ದಾರೆ. ಅವರೆಲ್ಲರ ಸಹಕಾರ ಅಗತ್ಯವಾಗಿದೆ.

ಮಾಜಿ ಸಚಿವರು ಆಗಿರುವ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿರವರು ಅವರ ಕಚೇರಿ ಸಿಬ್ಬಂಧಿಗೆ, ಅವರ ಕನಸಿನ ಯೋಜನೆಗಳನ್ನು ವಿಷನ್ ಡಾಕ್ಯುಮೆಂಟ್-2047 ಕ್ಕೆ, ಡಿಜಿಟಲ್ ದಾಖಲೆ ಮಾಡಿಸಲು ನಿರ್ದೇಶನ ನೀಡಿದರು.  ಶ್ರೀ ರವಿಕುಮಾರ್ ರವರು ತುಮಕೂರು ವಿಶ್ವವಿದ್ಯಾನಿಲಯ ಕೈಗೊಂಡಿರುವ ಯೋಜನೆಗಳ ಬಗ್ಗೆ, ಪಿಪಿಟಿ ಪ್ರದರ್ಶನ ಮಾಡಲು ತಿಳಿಸಿದರು.