25th December 2024
Share

TUMAKURU:SHAKTHIPEETA FOUNDATION

  ತುಮಕೂರಿನ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಒಂದು ಪ್ರಸ್ತಾವನೆಯನ್ನು ನನ್ನ ಬಳಿ ಚರ್ಚೆ ಮಾಡಿ, ಸುಮಾರು 10 ವರ್ಷಗಳಾಗಿರಬಹುದು. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಚಳುವಳಿ ಆರಂಭವಾಯಿತು.

ಜಿ.ಎಸ್.ಬಸವರಾಜ್ ರವರು ಮತ್ತು ನಾನು ದೆಹಲಿಗೆ ಹೋದಾಗಲೆಲ್ಲಾ ಬಹುತೇಕ ರೈಲ್ವೆ ಬೋರ್ಡ್‍ಗೆ ಹೋಗಿ ಚರ್ಚೆ ಮಾಡಬೇಕು. ಇಲ್ಲವಾದಲ್ಲಿ ಬಿಡಪ್ಪ ನಿಮಗೆ ನಮ್ಮ ಯೋಜನೆಗೆ ನಿಮಗೆ ಬಿಡುವಿಲ್ಲಾ ಎಂಬ ಟೀಕೆ ಗ್ಯಾರಂಟಿ.

ಒಂದೆರಡು ಭಾರಿ ಶ್ರೀ ಟಿ.ಆರ್.ರಘೋತ್ತಮರಾವ್ ರವರನ್ನು ದೆಹಲಿಗೆ ಕರೆದುಕೊಂಡು ಹೋದೆವು. ಅಂತೂ ಇಂತೂ ಯೋಜನೆಗೆ ಚಾಲನೆ ದೊರಕಿತು.

ಬೆಂಗಳೂರು ಸುತ್ತ-ಮುತ್ತ ಈ ರೈಲ್ವೇ ಯೋಜನೆ ಎಷ್ಟು ಜನ ಲೋಕಸಭಾ ಸದಸ್ಯರ ವ್ಯಾಪ್ತಿಗೆ ಬರಲಿದೆ. ಎಷ್ಟು ಜನ ಶಾಸಕರ ವ್ಯಾಪ್ತಿಗೆ ಬರಲಿದೆ, ಇವರೆಲ್ಲರೂ ಸೇರಿ ಜಾರಿಗೆ ಶ್ರಮಿಸುವುದು ಒಳ್ಳೆಯದಲ್ಲವೇ?

ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ಜೊತೆ ಆಗಿನ ರೈಲ್ವೆ ಸಚಿವರಾದ ಶ್ರೀ ಸುರೇಶ್ ಪ್ರಭುರವgವರಿಗೆ ದೆಹಲಿಗೆ ನಿಯೋಗ ಹೋಗಿ ಮನವಿ ಸಲ್ಲಿಸಿದ್ದೆವು.

ಇತಿಹಾಸವನ್ನು ಶ್ರೀ ಟಿ.ಆರ್.ರಘೋತ್ತಮರಾವ್ ರವರಿಂದಲೇ ಬರೆಸುತ್ತೇನೆ. ಒಂದು ಯೋಜನೆ ಇತಿಹಾಸ ಹೇಗೆ ಆರಂಭವಾಗತ್ತದೆ ಗಮನಿಸುವಿರಿ.