TUMAKURU:SHAKTHIPEETA FOUNDATION
ಶಕ್ತಿಪೀಠ ಫೌಂಡೇಷನ್ ವಿಶ್ವದ 108 ಶಕ್ತಿಪೀಠಗಳ ಸಂಶೋಧನೆ ಮತ್ತು ಶಕ್ತಿಪೀಠ ಕ್ಯಾಂಪಸ್ ಆರಂಬಿಸಿದೆ.
ಜೊತೆಗೆ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸು 2047 ಕ್ಕೆ ಭಾರತ ವಿಶ್ವ ಗುರು ಮತ್ತು ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಘೋಷಣೆ, ಕರ್ನಾಟಕ ರಾಜ್ಯ ಏಷ್ಯಾದಲ್ಲಿಯೇ ನಂಬರ್ ಆಗಬೇಕಂತೆ, ಬೆಂಗಳೂರು ಬ್ರ್ಯಾಂಡ್ ಬೆಂಗಳೂರು ಆಗಬೇಕು ಎಂಬ ಪರಿಕಲ್ಪನೆ ಉಪಮುಖ್ಯ ಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರದ್ದು. ಇವರ ಹೇಳಿಕೆ ಮತ್ತು ಅನುಷ್ಠಾನ ವಿಶ್ಲೇಷಣೆಯನ್ನು ಶಕ್ತಿಪೀಠ ಫೌಂಡೇಷನ್ ಆರಂಭಿಸಿದೆ.
ಈ ಹಿನ್ನಲೆಯಲ್ಲಿ ಹಾಗೂ ಜಾತಿ ಗಣತಿ ಚಾಲ್ತಿಯಲ್ಲಿರುವ ಸಮಯದಲ್ಲಿ ಸರ್ವಧರ್ಮಗಳ, ಜಾತಿ/ಉಪಜಾತಿಗಳ ಸಂಸ್ಕøತಿ ಅರಿವು ಅಗತ್ಯವಲ್ಲವೇ?
ದಿನಾಂಕ:19.11.2023 ರಂದು ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪಿಜೆಸಿ ನಿವಾಸಿಗಳು, ಆಚರಿಸಿದ ಚಟ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ವಾಕ್ ಮಾಡುವಾಗ ಆಸಕ್ತರ ಜೊತೆ ಸಮಾಲೋಚನೆ ನಡೆಸಲಾಯಿತು.
ಶೀಘ್ರದಲ್ಲಿ ರೂಪುರೇಷೆ ನಿರ್ಧರಿಸಲಾಗುವುದು. ಈ ಚಟ್ ಪೂಜೆಯ ವಿವರವಾದ ವರದಿಗಳೊಂದಿಗೆ ದೇಶದ ಎಲ್ಲಾ ರಾಜ್ಯಗಳ ಕಲೆ, ಸಂಸ್ಕøತಿ ಮಾಹಿತಿ ಸಂಗ್ರಹ ಕಾರ್ಯ ಆರಂಭವಾಗಲಿದೆ. ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಮತ್ತು ತುಮಕೂರಿನ ಕರ್ನಾಟಕ ಹೆರಿಟೇಜ್ ಹಬ್ ಸಂಸ್ಥೆಯ ಹಾಗೂ ಆಸಕ್ತ ವಿಶ್ವ ವಿದ್ಯಾನಿಲಯಗಳ, ಸಂಘ ಸಂಸ್ಥೆಗಳ ಸಹಭಾಗಿತ್ವ ಪಡೆಯುವ ಆಲೋಚನೆಯೂ ಇದೆ.
ಆಸಕ್ತರು ಸಂಪರ್ಕಿಸಲು ಮನವಿ.