22nd December 2024
Share

TUMAKURU:SHAKTHIPEETA FOUNDATION

  ಅಯೋಧ್ಯೆಯ ರಾಮ ಬರೀ ಅಯೋಧ್ಯೆಗೆ, ಉತ್ತರಪ್ರದೇಶಕ್ಕೆ, ಭಾರತ ದೇಶಕ್ಕೆ, ಹಿಂದೂಗಳಿಗೆ ಸೀಮೀತವಾಗದೆ, ಇಡೀ ವಿಶ್ವದ ಸರ್ವಧರ್ಮದ ಸಮಾನ ಮನಸ್ಕರ ದೈವ ಯುಗಕ್ಕೆ ಮುನ್ನುಡಿ ಬರೆದಿದ್ದಾನೆ ಎಂದರೆ ಅತಿಶಯೋಕ್ತಿಯಲ್ಲ.

 ಕರಸೇವಕರು, ಹಿಂದೂ ವಿಶ್ವ ಪರಿಷತ್, ಆರ್.ಎಸ್.ಎಸ್. ಬಿ.ಜೆ.ಪಿ, ಪ್ರಧಾನಿಯವರಾದ ಶ್ರೀ ನರೇಂದ್ರಮೋದಿ, ಹೀಗೆ ಎಲ್ಲವನ್ನು ಬದಿಗೊತ್ತಿ ಸರ್ವಧರ್ಮಗಳಲ್ಲಿ, ಸರ್ವ ಪಕ್ಷಗಳ ಸಮಾನ ಮನಸ್ಕರು ಬಹಿರಂಗವಾಗಿ ಅಥವಾ ಒಳಗೊಳಗೆ ರಾಮ ಜಪ ಮಾಡುತ್ತಿದ್ದಾರೆ.

ಇಷ್ಟೊಂದು ಪವಾಡ, ದೈವೀಶಕ್ತಿ, ಬರೀ ಭಕ್ತರ ಮನಸ್ಸಿನ ಜೊತೆಗೆ, ಕಟುಕರ ಮನಸ್ಸನ್ನು ಬದಾಯಿಸಲಿದೆ. ನಿಜಕ್ಕೂ ಭೂ ಲೋಕ’ದಲ್ಲಿ ಒಂದು ಹೊಸ ಮನ್ವಂತರ’ ಆರಂಭವಾಗಿದೆ ಎನಿಸುವುದಿಲ್ಲವೇ?