23rd April 2024
Share

TUMAKURU:SHAKTHIPEETA FOUNDATION

  ಕೇಂದ್ರ ಸರ್ಕಾರ 2023-24 ರ ಆಯವ್ಯಯದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಮೀಸಲಿಟ್ಟಿದ್ದು ಇದೂವರೆಗೂ, ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾಗದೇ ಇರುವುದು, ಕರ್ನಾಟಕ ರಾಜ್ಯದ ಬಿಜೆಪಿ ಗೆ ಭಾರಿ ತಲೆನೋವಾಗಿದೆ.

ಹೆಸರು ಹೇಳಲು ಇಚ್ಚಿಸದ ನಾಯಕರೊಬ್ಬರ ಪ್ರಕಾರ, ಏನೇ ಸಮಸ್ಯೆ ಇದ್ದರೂ ಬಗೆಹರಸಿಕೊಂಡು, ಅಗತ್ಯವಿದ್ದಲ್ಲಿ ಷರತ್ತುಗಳನ್ನು ಹಾಕಿ ಲೋಕಸಭಾ ಚುನಾವಣೆ ವೇಳೆಗೆ ಅನುದಾನ ಬಿಡುಗಡೆ ಮಾಡಿಸಲು ಹರಸಾಹಸ ಮಾಡುತ್ತಿದ್ದೇವೆ ಎಂದು ಪರದಾಡುತ್ತಿದ್ದಾರೆ. 

ರಾಜ್ಯದ ಕಾಂಗ್ರೇಸ್ ನಾಯಕರು ಹಣ ಬಿಡುಗಡೆ ಮಾಡಿದರೆ, ನೋಡ್ದಾ ನಾವು ಗಲಾಟೆ ಮಾಡಿದ್ದಕ್ಕೆ ಹೆದರಿ, ಹಣ ಬಿಡುಗಡೆ ಮಾಡಿದರು ಎನ್ನುತ್ತಾರೆ, ಬಿಡುಗಡೆ ಆಗದಿದ್ದರೇ ಮಲತಾಯಿ ಧೋರಣೆ ಪಟ್ಟ ಕಟ್ಟುತ್ತಾರೆ. ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಾರೆ.

ಮಾಜಿ ಸಚಿವರಾದ ದಿ.ಅನಂತ್ ಕುಮಾರ್ ರವರು ಇಂಥಹ ಸಮಸ್ಯೆಯನ್ನು ಪಕ್ಷರಹಿತವಾಗಿ, ರಾಜ್ಯದ ಹಿತದೃಷ್ಠಿಯಿಂದ ನಿಭಾಯಿಸುತ್ತಿದ್ದರು, ಈಗ ಆ ರೀತಿ ನಾಯಕತ್ವಕ್ಕೆ ಕೊರತೆ ಇದೆ ಎನ್ನುತ್ತಾರೆ.

ಏನೇ ಆಗಲಿ ರಾಜ್ಯದ ಬಿಜೆಪಿ ನಾಯಕರು ದೆಹಲಿಗೆ ನಿಯೋಗಿ ಹೋಗಿ, ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸದರೇ ಒಳ್ಳೆಯ ಬೆಳವಣಿಗೆ.