TUMAKURU:SHAKTHIPEETA FOUNDATION
- ವಿಶ್ವದ ಭೂಪಟದಲ್ಲಿ ಬೆಂಗಳೂರು ರಾರಾಜಿಸುತ್ತಿದೆ.
- ದೇಶದಲ್ಲಿಯೇ ತೆರಿಗೆ ಸಂಪಾದಿಸುವ ಎರಡನೇ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಬೆಂಗಳೂರು ಕಾರಣ.
- ಈ ರೀತಿ ಬ್ಲಾಸ್ಟ್ ಆಗತ್ತಾ ಹೋದರೆ, ಇದನ್ನು ರಾಜಕೀಯ ಗೊಳಿಸುತ್ತಾ ಹೋದರೆ ಮುಂದೆ ಭಾರಿ ಹೊಡೆತ ಬೀಳಲಿದೆ.
- ಬ್ರ್ಯಾಂಡ್ ಬೆಂಗಳೂರು ಹೆಸರಿಗೆ ಕಳಂಕ ಬರಲಿದೆ.
- ಮುಖ್ಯಮಂತ್ರಿಗಳು, ಬೆಂಗಳೂರು ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿಯವರು, ಗೃಹಸಚಿವರು ಮತ್ತು ವಿರೋಧ ಪಕ್ಷದ ನಾಯಕರು, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.
- ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಚುನಾಯಿತ ಜನಪ್ರತಿನಿಧಿಗಳು ಬಾಯಿಗೆ ಬೀಗ ಹಾಕಿಕೊಂಡರೆ ಬಹಳ ಒಳ್ಳೆಯದು.
- ಪೋಲೀಸ್ ಇಲಾಖೆ ನೀಡುವ ವರದಿ ಆಧಾರದಲ್ಲಿ ಮಾತ್ರ ಮಾತನಾಡುವ ಕಾನೂನು ಆಗಬೇಕಿದೆ. ರಾಜಕಾರಣಿಗಳೇ ಸರ್ಟಿಫಿಕೇಟ್ ಕೊಡುವುದಾದರೆ ಇಲಾಖೆ ಕೆಲಸ ಏನು?
- ಇಂಥಹ ವಿಷಯಗಳಲ್ಲಿ ರಾಜಕಾರಣ ಏಕೆ ?
- ಕೇಂದ್ರ ಸರ್ಕಾರವಂತೂ ತಮ್ಮ ಕೆಲಸವನ್ನು ಮಾಡಲಿದೆ. ಇಲ್ಲಿ ಮಲತಾಯಿ ಧೋರಣೆ ಆರೋಪ ಬರಬಾರದು ಅಷ್ಟೆ?