23rd December 2024
Share

TUMAKURU:SHAKTHIPEETA FOUNDATION

  1. ವಿಶ್ವದ ಭೂಪಟದಲ್ಲಿ ಬೆಂಗಳೂರು ರಾರಾಜಿಸುತ್ತಿದೆ.
  2. ದೇಶದಲ್ಲಿಯೇ ತೆರಿಗೆ ಸಂಪಾದಿಸುವ ಎರಡನೇ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಬೆಂಗಳೂರು ಕಾರಣ.
  3. ಈ ರೀತಿ ಬ್ಲಾಸ್ಟ್ ಆಗತ್ತಾ ಹೋದರೆ, ಇದನ್ನು ರಾಜಕೀಯ ಗೊಳಿಸುತ್ತಾ ಹೋದರೆ ಮುಂದೆ ಭಾರಿ ಹೊಡೆತ ಬೀಳಲಿದೆ.
  4. ಬ್ರ್ಯಾಂಡ್ ಬೆಂಗಳೂರು ಹೆಸರಿಗೆ ಕಳಂಕ ಬರಲಿದೆ.
  5. ಮುಖ್ಯಮಂತ್ರಿಗಳು, ಬೆಂಗಳೂರು ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿಯವರು, ಗೃಹಸಚಿವರು ಮತ್ತು ವಿರೋಧ ಪಕ್ಷದ ನಾಯಕರು, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.
  6. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಚುನಾಯಿತ ಜನಪ್ರತಿನಿಧಿಗಳು ಬಾಯಿಗೆ ಬೀಗ ಹಾಕಿಕೊಂಡರೆ ಬಹಳ ಒಳ್ಳೆಯದು.
  7. ಪೋಲೀಸ್ ಇಲಾಖೆ ನೀಡುವ ವರದಿ ಆಧಾರದಲ್ಲಿ ಮಾತ್ರ ಮಾತನಾಡುವ ಕಾನೂನು ಆಗಬೇಕಿದೆ. ರಾಜಕಾರಣಿಗಳೇ ಸರ್ಟಿಫಿಕೇಟ್ ಕೊಡುವುದಾದರೆ ಇಲಾಖೆ ಕೆಲಸ ಏನು?
  8. ಇಂಥಹ ವಿಷಯಗಳಲ್ಲಿ ರಾಜಕಾರಣ ಏಕೆ ?
  9. ಕೇಂದ್ರ ಸರ್ಕಾರವಂತೂ ತಮ್ಮ ಕೆಲಸವನ್ನು ಮಾಡಲಿದೆ. ಇಲ್ಲಿ ಮಲತಾಯಿ ಧೋರಣೆ ಆರೋಪ ಬರಬಾರದು ಅಷ್ಟೆ?