21st November 2024
Share

TUMAKURU:SHAKTHIPEETA FOUNDATION

18 ನೇ ಲೋಕಸಭಾ ಚುನಾವಣೆ ಪಲಿತಾಂಶದ ದಿವಸ ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್ ಆರಂಬಿಸಲು ಉದ್ದೇಶಿಸಲಾಗಿದೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರನ್ನು ಉದ್ಘಾಟನೆ ಮಾಡಲು ಮತ್ತು ತುಮಕೂರು ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರನ್ನು ಅಧ್ಯಕ್ಷತೆ ವಹಿಸಲು ಆಹ್ವಾನಿಸಲಾಗುವುದು.

ತುಮಕೂರು ಲೋಕಸಭಾ ಸದಸ್ಯರ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೂ ಆಹ್ವಾನ ನೀಡಲಾಗುವುದು.

ಈ ಹಿನ್ನಲೆಯಲ್ಲಿ 1947 ರಿಂದ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಮಂಜೂರಾಗಿರುವ ಅನುದಾನಗಳ ಮಾಹಿತಿ ಸಂಗ್ರಹಿಸಲು, ಈ ಕೆಳಕಂಡವರಿಗೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಪತ್ರ ಬರೆಯಲಾಗುವುದು.

ಕೇಳಲು ಉದ್ದೇಶಿರುವ ಮಾಹಿತಿ

  1. 1947 ರಿಂದ ಕೇಂದ್ರ ಸರ್ಕಾರದಿಂದ ತಮ್ಮ ಇಲಾಖೆಗೆ ಅಥವಾ ತಮ್ಮ ರಾಜ್ಯ, ಜಿಲ್ಲಾ ವ್ಯಾಪ್ತಿಗೆ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಯೋಜನೆಗಳ ಮಾಹಿತಿ.
  2. ಕೇಂದ್ರ ಸರ್ಕಾರದಲ್ಲಿ ತಮ್ಮ ಇಲಾಖೆಗೆ ಅಥವಾ ತಮ್ಮ ರಾಜ್ಯ, ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ನನೆಗುದಿಗೆ ಬಿದ್ದಿರುವ ಯೋಜನೆಗಳ ಮಾಹಿತಿ.
  3. ಕೇಂದ್ರ ಸರ್ಕಾರದಲ್ಲಿ ತಮ್ಮ ಇಲಾಖೆಗೆ ಅಥವಾ ತಮ್ಮ ರಾಜ್ಯ, ಜಿಲ್ಲಾ ವ್ಯಾಪ್ತಿಗೆ ಮಂಜೂರಾಗಿರುವ ಯೋಜನೆಗಳಿಗೆ ಬಿಡುಗಡೆಯಾಗ ಬೇಕಾಗಿರುವ ಅನುದಾನದ ಮಾಹಿತಿ. ಸಲ್ಲಿಸಿರುವ ಯುಸಿ ಮಾಹಿತಿ.
  4. ಕೇಂದ್ರ ಸರ್ಕಾರದಲ್ಲಿ ತಮ್ಮ ಇಲಾಖೆಯಿಂದ ಅಥವಾ ತಮ್ಮ ರಾಜ್ಯ, ಜಿಲ್ಲಾ ವ್ಯಾಪ್ತಿಯಿಂದ ಸಲ್ಲಿಸಿರುವ ಹೊಸ ಪ್ರಸ್ತಾವನೆಗಳ ಮಾಹಿತಿ
  5. ಇದೂವರೆಗೂ 15 ಹಣಕಾಸು ಆಯೋಗದಿಂದ ಶೀಪಾರಸ್ಸು ಮಾಡಿರುವ ಅನುದಾನದ ಪ್ರಕಾರ ಬಿಡುಗಡೆಯಾಗಿರುವ ಅನುದಾನ ಮತ್ತು ಮಲತಾಯಿ ಧೋರಣೆ ಮಾಡಿರುವ ಅನುದಾನದ ಮಾಹಿತಿ.
  6. ಕೇಂದ್ರ ಸರ್ಕಾರ ತಮ್ಮ ಇಲಾಖೆಗೆ ಅಥವಾ ತಮ್ಮ ರಾಜ್ಯ, ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ಮಲತಾಯಿ ಧೋರಣೆ ಅನುಸರಿಸಿರುವ ಯೋಜನೆಗಳ ಮಾಹಿತಿ.

ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಅರ್ಜಿ ಸಲ್ಲಿಸುವ ಕಚೇರಿಗಳು.

  1. ರಾಜ್ಯಪಾಲರ ಕಚೇರಿ.
  2. ಮುಖ್ಯಮಂತ್ರಿಯವರ ಕಚೇರಿ.
  3. ಉಪ ಮುಖ್ಯಮಂತ್ರಿಯವರ ಕಚೇರಿ.
  4. ವಿರೋಧ ಪಕ್ಷದ ನಾಯಕರ ಕಚೇರಿ.
  5. ರಾಜ್ಯದ ಎಲ್ಲಾ ಸಚಿವರ ಕಚೇರಿ.
  6. ದೆಹಲಿ ವಿಶೇಷ ಪ್ರತಿನಿಧಿಯವರ ಕಚೇರಿ.
  7. ಮುಖ್ಯ ಕಾರ್ಯದರ್ಶಿಯವರ ಕಚೇರಿ.
  8. ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಕಚೇರಿ.
  9. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಪರಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯವರ ಕಚೇರಿ.
  10. ರಾಜ್ಯ ಸರ್ಕಾರದ ಎಲ್ಲಾ ಮಾಹಿತಿಹಕ್ಕು ಅಧಿನಿಯಮದ ಪ್ರಾಧಿಕಾರಗಳು.
  11. ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು.
  12. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರು ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಓ ರವರ ಕಚೇರಿ
  13. ರಾಜ್ಯ ಸರ್ಕಾರದ ನಿಗಮ, ಬೋರ್ಡ್, ಕಾಪೋರೇಷನ್‍ಗಳು.
  14. ದೆಹಲಿಯಲ್ಲಿರುವ ರೆಸಿಡೆಂಟ್ ಕಮೀಷನರ್ ಕಚೇರಿ.

 ಆಸಕ್ತರು ಸಲಹೆ ನೀಡಬಹುದು.