27th July 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದಿಂದ 1947 ರಿಂದ ಇಲ್ಲಿಯವರೆಗೂ 76 ವರ್ಷ ಮಂಜೂರಾಗಿರುವ ಅನುದಾನದ ಮಾಹಿತಿಗಳನ್ನು, ಪ್ರತಿ ವರ್ಷ ಯಾವ ಇಲಾಖೆಯಡಿ ಎಷ್ಟು ಹಣ, ಯಾವ ಯೋಜನೆಗೆ ಬಿಡುಗಡೆ ಆಗಿದೆ, ಎಲ್ಲಿ ಖರ್ಚಾಗಿದೆ, ಎಂಬ ಬಗ್ಗೆ ವರ್ಷವಾರು ಕ್ಯೂ.ಆರ್.ಕೋಡ್ ಸ್ಕ್ಯಾನ್ ಮಾಡಿದರೆ ಮನಿ ಟ್ರ್ಯಾಂಕಿಂಗ್ ಸಿಸ್ಟಂ ಕಣ್ಣ ಮುಂದೆ ಬರುವಂತಹ ಮಾದರಿಯಲ್ಲಿ ಡಾಟಾ ಸಂಗ್ರಹ ಮಾಡಿದರೆ ಮಾತ್ರ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಮಾತನಾಡಬಹುದು.

  ಯಾವುದೇ ನಿಖರವಾದ ಅಂಕಿಅಂಶಗಳ ಮಾಹಿತಿ ಇಲ್ಲದೆ, ಕೇವಲ ರಾಜಕೀಯಕ್ಕಾಗಿ ಟೀಕೆ ಟಿಪ್ಪಣೆ ಮಾಡÀಬಾರದು. ಹೌದು ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರಲು ಶ್ರಮಿಸುವುದು ನಮ್ಮ ಎಂ.ಪಿ ಗಳ ಆಧ್ಯಕರ್ತವ್ಯವಾಗಿದೆ.

  ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ಅನುದಾನದ ಬಗ್ಗೆ ಮಾತ್ರ ಮೃದು ಧೋರಣೆ ಬರಬಾರದು. ಪಕ್ಷಾತೀತವಾಗಿ ಎಲ್ಲರೂ ಪ್ರಸ್ತಾವನೆ ಸಹಿತ ದ್ವನಿಯೆತ್ತಬೇಕು.

 ಅಧಿಕಾರಿಗಳು ಈ ಮಾಹಿತಿಯನ್ನು ಚುನಾಯಿತ ಜನಪ್ರತಿನಿಧಿಗಳಿಗೆ ನೀಡಬೇಕು. ಖಂಡಿತಾ ನಿಡುತ್ತಿಲ್ಲಾ,  ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇರುವ ರಾಜ್ಯ ಮಟ್ಟದ ದಿಶಾ  ಸಮಿತಿಯ ಸಭೆಯನ್ನೇ ಮಾಡದ, ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಯಾವ ಆಧಾರದ ಮೇಲೆ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಮಾತನಾಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಇರುವ, ದಿಶಾ ಸಮಿತಿಯಲ್ಲಿ, ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಅನುದಾನದ ಇಂಡೆಕ್ಸ್ ಇಲ್ಲದೆ ಚರ್ಚೆ ಮಾಡುವುದು ಕಾಟಚಾರವಾಗಿದೆ.

  ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ, ಪ್ರತಿಯೊಂದು ಯೋಜನೆಯ ಯುಟಿಲೈಷನ್ ಸರ್ಟಿಫಿಕೇಟ್ ಬಗ್ಗೆ ಚರ್ಚೆ ನಡೆಸದೆ ಇದ್ದಲ್ಲಿ, ಸಂಸದರುಗಳಿಗೂ ಅನುದಾನದ ಮಾಹಿತಿ ಇರುವುದಿಲ್ಲ.

ಈ ಹಿನ್ನಲೆಯಲ್ಲಿ ಪ್ರತಿ ವರ್ಷದ ಅನುದಾನದ ಮಾಹಿತಿ ಸಂಗ್ರಹಿಸುವುದು, ಪಾರದರ್ಶಕವಾಗಿ ಪ್ರಕಟಿಸುವುದು, ರಾಜ್ಯ ಸರ್ಕಾರದ ಆಧ್ಯ ಕರ್ತವ್ಯ. ವಿರೋಧ ಪಕ್ಷಗಳು ಈ ಬಗ್ಗೆ ಒತ್ತಾಯ ಮಾಡುವುದು ಸೂಕ್ತವಾಗಿದೆ.

ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್ ನ ಪ್ರಮುಖ ಉದ್ದೇಶ ಇದೆ ಆಗಿದೆ. ಉನ್ನತ ಮಟ್ಟದಲ್ಲಿ ರೂಪು ರೇಷೆಗಳ ಚರ್ಚೆ ಆರಂಭವಾಗಿದೆ.