21st November 2024
Share

TUMAKURU:SHAKTHIPEETA FOUNDATION

  ಸಾಂಸ್ಕøತಿಕ ನಾಯಕ ಬಸವಣ್ಣನವರ ಜಯಂತಿ ದಿವಸ ದಿನಾಂಕ:10.05.2024 ರಂದು, ತುಮಕೂರಿನ ಶಕ್ತಿಭವನದಲ್ಲಿ ಸೆಂಟರ್ ಆಫ್ ಎಕ್ಸ್ಲೆನ್ಸ್ ಕ್ಯಾಪ್ಚರಿಂಗ್ ಗೌವ್ರ್ನಮೆಂಟ್ ಆಫ್ ಇಂಡಿಯಾ ಫಂಡ್ಸ್ ಸ್ಥಾಪಿಸುವ ಬಗ್ಗೆ ಸಂಶೋಧನೆ, ಅಧ್ಯಯನ ಮತ್ತು ಕಡತಗಳ ಅನುಸರಣೆ ಮಾಡಲು ಶುಭ ಆರಂಭಮಾಡಲಾಗುವುದು, ಎಂದು ತಿಳಿಸಲು ಹರ್ಷಿಸುತ್ತೇನೆ.

1947 ರಿಂದ ಪ್ರತಿವರ್ಷ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಮಂಜೂರಾಗಿರುವ ಅನುದಾನಗಳ ಪಕ್ಕಾ ಮಾಹಿತಿಯನ್ನು, ಒಂದೇ ರೂಪ್ ನಡಿ ಸಂಗ್ರಹಿಸುವ ಮತ್ತು ಮುಂದಿನ 2047 ರವರೆಗೆ ಪ್ರತಿವರ್ಷ, ಯಾವ ಯೋಜನೆಗಳಿಗೆ ಅನುದಾನತರಲು, ನಮ್ಮ ರಾಜ್ಯದ ಲೋಕಸಭಾ ಸದಸ್ಯರು ಯಾವ ರೀತಿ ಶ್ರಮಿಸಲಿದ್ದಾರೆ ಎಂಬ ನಿಖರವಾದ ಮಾಹಿತಿಯೂ ಇಲ್ಲಿ ಲಭ್ಯವಾಗಲಿದೆ.

ಕಾಂಗ್ರೆಸ್ ಪಕ್ಷ  ಕೇಂದ್ರ ಸರ್ಕಾರದಲ್ಲಿ ಅನುದಾನ ತಾರತಮ್ಯದ ಬಗ್ಗೆ ಅಬ್ಬರಿಸುತ್ತಿದೆ.  ವಿರೋಧ ಪಕ್ಷಗಳು, ಈ ಆರೋಪದ ಬಗ್ಗೆ ಅಂಕಿ ಅಂಶಗಳ ಸಹಿತ ಪ್ರತಿಪಾದನೆ ಮಾಡುವಲ್ಲಿ ಹಿಂದೆ ಬಿದ್ದಿದೆ. ಕಾರಣ ಅವರ ಬಳಿ ನಿಖರವಾದ ದಾಖಲೆಗಳು ಖಂಡಿತಾ ಇಲ್ಲ ಭಾವನೆ ಜನರದ್ದಾಗಿದೆ. ಇದರ ಹೊಡೆತದ ಫಲ ಅವರಿಗೆ ಅನುಭವವಾಗಿಲ್ಲ.

ಕಾಂಗ್ರೆಸ್ ಪಕ್ಷದ ಬಳಿಯೂ 76 ವರ್ಷಗಳ ನಿಖರವಾದ ಅನುದಾನದ ಮಾಹಿತಿಯೂ ಇಲ್ಲ. ಆದರೂ ಅವರು ಜನರ ಮುಂದೆ ಗ್ರಾಮೀಣ ಭಾಷೆಯಲ್ಲಿ ಹೇಳುವದಾದರೆ, ತಲೆ ಮೇಲೆ ಹೊಡೆದ ಹಾಗೆ’ ಹೇಳುತ್ತಿದ್ದಾರೆ.

ಕೆಳಕಂಡ ಕಚೇರಿಗಳಲ್ಲಿ ಪಕ್ಕಾ ಮಾಹಿತಿ ಸಂಗ್ರಹಿಸಿದ್ದರೆ, ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ನೀಡಲು ಪತ್ರ ಬರೆಯಲಾಗಿದೆ. ಈ ಕಚೇರಿಗಳ ಅಧಿಕಾರಿಗಳನ್ನು ಮೌಖಿಕವಾಗಿ ಕೇಳಿದಾಗ ಅವರುಗಳು, ಹೇಳುವದನ್ನು ‘ಕೇಳಿದರೆ ನಗು ಬರುತ್ತೆ’.

  1. ಮುಖ್ಯ ಮಂತ್ರಿಯವರು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
  2. ವಿರೋಧ ಪಕ್ಷದ ನಾಯಕರು.ವಿಧಾನಸಭೆ, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
  3. ವಿರೋಧ ಪಕ್ಷದ ನಾಯಕರು.ವಿಧಾನ ಪರಿಷತ್ ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
  4. ಶ್ರೀ.ಟಿ.ಬಿ.ಜಯಚಂದ್ರರವರು.ದೆಹಲಿ ವಿಶೇಷ ಪ್ರತಿನಿಧಿ, ಕರ್ನಾಟಕ ಸರ್ಕಾರ,  ವಿಧಾನಸೌಧ, ಬೆಂಗಳೂರು.
  5. ಶ್ರೀ.ಪ್ರಕಾಶ್ ಹುಕ್ಕೇರಿರವರು.ದೆಹಲಿ ವಿಶೇಷ ಪ್ರತಿನಿಧಿ, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.
  6. ಶ್ರೀ.ಪ್ರಕಾಶ್ ಹುಕ್ಕೇರಿರವರು.ದೆಹಲಿ ವಿಶೇಷ ಪ್ರತಿನಿಧಿ, ಕರ್ನಾಟಕ ಸರ್ಕಾರ,  ವಿಧಾನಸೌಧ, ಬೆಂಗಳೂರು.
  7. ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ದಿಶಾ ಸಮಿತಿ ಹಾಗೂ ಯೋಜನಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ. ಬಹುಮಹಡಿಗಳ ಕಟ್ಟಡ, ಬೆಂಗಳೂರು.
  8. ಅಪರ ಮುಖ್ಯ ಕಾರ್ಯದರ್ಶಿ.ಆರ್ಥಿಕ ಇಲಾಖೆ.ಕರ್ನಾಟಕ ಸರ್ಕಾರ,  ವಿಧಾನಸೌಧ, ಬೆಂಗಳೂರು.
  9. ಮುಖ್ಯ ಕಾರ್ಯದರ್ಶಿ.ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.

ಈ ಪತ್ರದ ಉದ್ದೇಶವೇ  ಸೆಂಟರ್ ಆಫ್ ಎಕ್ಸ್ಲೆನ್ಸ್ ಕ್ಯಾಪ್ಚರಿಂಗ್ ಗೌವ್ರ್ನಮೆಂಟ್ ಆಫ್ ಇಂಡಿಯಾ ಫಂಡ್ಸ್ ಸ್ಥಾಪನೆಗೆ ಅಡಿಪಾಯ’ ವಾಗಲಿದೆ.