21st January 2025
Share

‘ಚೊಂಬು V/S ಅಕ್ಷಯ ಪಾತ್ರೆ’ ವಿವಾದಗಳ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಲದ ವಿವರಗಳಿಗಾಗಿ  ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ಕೋರಲಾಗಿದೆ.

ಕೇಂದ್ರ ಸರ್ಕಾರದ ಸಾಲದ ಮಾಹಿತಿ.

ಪ್ರಧಾನ ಮಂತ್ರಿಯವರ ಕಚೇರಿ ಮತ್ತು ಫೈನಾನ್ಸ್ ಮಂತ್ರಿಯವರ ಕಚೇರಿ.

  1. ಕೇಂದ್ರ ಸರ್ಕಾರ   1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಿದ್ದಾರೆ. ಸಾಲದ ಹಣವನ್ನು  ಯಾವ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ.
  2. ಕೇಂದ್ರ ಸರ್ಕಾರ   1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಅಸಲು ತೀರಿಸಿದ್ದಾರೆ.
  3. ಕೇಂದ್ರ ಸರ್ಕಾರ   1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಬಡ್ಡಿ ತೀರಿಸಿದ್ದಾರೆ.
  4. ಕೇಂದ್ರ ಸರ್ಕಾರ   1947 ರಿಂದ ಇದೂವರೆಗೂ ಯಾವ, ಯಾವ ಪ್ರಧಾನ ಮಂತ್ರಿಯವರ ಅವಧಿಯಲ್ಲಿನ ಎಷ್ಟೆಷ್ಟು ಸಾಲದ ಅಸಲು ಮತ್ತು ಬಡ್ಡಿ ಬಾಕಿ ಉಳಿಸಿಕೊಂಡಿದ್ದಾರೆ
  5. ಕೇಂದ್ರ ಸರ್ಕಾರ ಇನ್ನೂ ಎಷ್ಟು ಸಾಲ ಮಾಡಬಹುದು. 

ಕರ್ನಾಟಕ ರಾಜ್ಯ ಸರ್ಕಾರದ ಸಾಲದ ಮಾಹಿತಿ.

ಮುಖ್ಯ ಮಂತ್ರಿಯವರ ಕಚೇರಿ ಮತ್ತು ಫೈನಾನ್ಸ್ ಇಲಾಖೆ ಕಚೇರಿ.

  1. ಕರ್ನಾಟಕ ರಾಜ್ಯ ಸರ್ಕಾರ   1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲ ಮಾಡಿದ್ದಾರೆ. ಸಾಲದ ಹಣವನ್ನು  ಯಾವ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ.
  2. ಕರ್ನಾಟಕ ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಅಸಲು ತೀರಿಸಿದ್ದಾರೆ.
  3. ಕರ್ನಾಟಕ ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿ ಎಷ್ಟೆಷ್ಟು ಸಾಲದ ಬಡ್ಡಿ ತೀರಿಸಿದ್ದಾರೆ.
  4. ಕರ್ನಾಟಕ ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಯಾವ, ಯಾವ ಮುಖ್ಯ ಮಂತ್ರಿಯವರ ಅವಧಿಯಲ್ಲಿನ ಎಷ್ಟೆಷ್ಟು ಸಾಲದ ಅಸಲು ಮತ್ತು ಬಡ್ಡಿ ಬಾಕಿ ಉಳಿಸಿಕೊಂಡಿದ್ದಾರೆ
  5. ಕರ್ನಾಟಕ ರಾಜ್ಯ ಸರ್ಕಾರ ಇನ್ನೂ ಎಷ್ಟು ಸಾಲ ಮಾಡಬಹುದು.