27th December 2024
Share

TUMAKURU:SHAKTHIPEETA FOUNDATION

  ವಿರೋಧ ಪಕ್ಷಗಳ ಕೆಲಸ ಇದು.ಗಾಳಿಯಲ್ಲಿ ಗುಂಡು ಹಾರಿಸಿದ ಹಾಗೆ ಇರಬಾರದು. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 20 ವರ್ಷದ ಅನುದಾನದ ಮೊತ್ತದ ಪಟ್ಟಿಯನ್ನು ಮಾಧ್ಯಮಗಳ ಮುಂದೆ ಇಟ್ಟು ಜಾಡಿಸುವ ವಿರೋಧ ಪಕ್ಷದ ನಾಯಕರಾದ ಶ್ರೀ ಅಶೋಕ್ ರವರ ಮೆಥೆಡ್ ನಿಜಕ್ಕೂ ಒಪ್ಪಲೇ ಬೇಕು. ‘ಅಕ್ಷಯ ಪಾತ್ರೆ, ಚಿಪ್ಪು’ ಮಾತುಗಳಿಗೆ ಬೆಲೆ ಬರುತ್ತದೆ. ಇದೇ ಮಾದರಿಯನ್ನು ಎಲ್ಲಾ ಅನುದಾನಗಳಿಗೂ ವಿಸ್ತರಿಸಲಿ ಎಂಬುದು ಜನತೆಯ ಆಶಯ.

 ಇದೇ ಮಾದರಿಯಲ್ಲಿ ಆಡಳಿತ ಪಕ್ಷದ ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಉಪಮುಖ್ಯ ಮಂತ್ರಿಯವರು ಸಹ 75 ವರ್ಷಗಳ ಅನುದಾನದ ಅಂಕಿ ಅಂಶಗಳನ್ನು ಇಟ್ಟು ಚೊಂಬು ಬಗ್ಗೆ ಮಾತನಾಡುವುದು ಒಳ್ಳೆಯದು. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ, ಮಲತಾಯಿ ಧೋರಣೆ ಬಗ್ಗೆ ಜಾಲಾಡಲೇ ಬೇಕು, ಆದರೇ ಅಂಕಿ ಅಂಶಗಳೇ ಮಾನದಂಡ ಆಗಬೇಕು.

ನಿಖರವಾದ ಮಾಹಿತಿಗಳು ಇದ್ದಲ್ಲಿ ಎಲ್ಲಾ ಪಕ್ಷಗಳು ಸಹ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬಹುದು ಅಲ್ಲವೇ ?

ಈ ವಿಚಾರಕ್ಕೆ ಮುಖ್ಯಮಂತ್ರಿಯವರು, ಉಪಮುಖ್ಯಮಂತ್ರಿಯವರು, ವಿರೋಧ ಪಕ್ಷಗಳ ನಾಯಕರು, ದೆಹಲಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೂ, ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಎಲ್ಲಾ ವಿಧವಾದ 75 ವರ್ಷಗಳ ಅನುದಾನದ ಮಾಹಿತಿ ಕೇಳಲಾಗಿದೆ. ಕಾದು ನೋಡೋಣ ?

ಚೊಂಬುಅಕ್ಷಯ ಪಾತ್ರೆಚಿಪ್ಪು ಮಾತುಗಳಿಗೆ ಅಂಕಿ ಅಂಶಗಳೇ ಮಾನದಂಡವಾಗಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳು ಈ ಬಗ್ಗೆ ಪಾರದರ್ಶಕವಾಗಿರಬೇಕು.

28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು, ಇಬ್ಬರೂ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು, ಇಬ್ಬರೂ ದೆಹಲಿ ವಿಶೇಷ ಪ್ರತಿನಿಧಿಗಳ ಬಳಿಯೂ ಈ ಮಾಹಿತಿಗಳು ಇರಬೇಕು.

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪುಸ್ತಕಗಳಂತೆ, ಕೇಂದ್ರ ಸರ್ಕಾರದ ಅನುದಾನಗಳ ಮಾಹಿತಿ, ಅವರ, ಅವರ ಕ್ಷೇತ್ರಗಳ ಮಟ್ಟದ್ದು ಇಡಬೇಕು. ದಿಶಾ ಸಮಿತಿಗಳಲ್ಲಿ ನಿರ್ಣಯ ಆಗಬೇಕು. ದಿಶಾ ಸಮಿತಿಯಲ್ಲಿ ಈ ಮಾಹಿತಿ ಇಡದ ಅಧಿಕಾರಿಗಳಿಗೆ ಶಿಕ್ಷೆಯಾಬೇಕು.