27th July 2024
Share

TUMAKURU:SHAKTHIPEETA FOUNDATION

 ರೈತನ ಮಗನಾಗಿ, ಸ್ವತಃ ಪ್ರಗತಿಪರ ರೈತನಾಗಿ ಸುಮಾರು 60 ವರ್ಷಗಳ ರಾಜಕಾರಣ ಮಾಡಿ, 40 ವರ್ಷಗಳ ಸಂಸದರ ಅವಧಿಯಲ್ಲಿ ಗೆಲುವು, ಸೋಲು, ಟಿಕೆಟ್ ವಂಚಿತರಾಗಿ, ಪಕ್ಷಗಳ ಬದಲಾವಣೆ ಹೀಗೆ ಹಲವಾರು ಏರಿಳಿತಗಳನ್ನು ಕಂಡ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತನ್ನ ಅವಧಿಯ ಅಭಿವೃದ್ದಿ ಯೋಜನೆಗಳ ಆತ್ಮಾವಲೋಕನ ಮತ್ತು ಮುಂದೆ ಕೈಗೊಳ್ಳಬೇಕಾಗಿರುವ ಯೋಜನೆಗಳ ಪಕ್ಷಿನೋಟದ ಬಗ್ಗೆ ವಿಶೇಷ ಗಮನ ಹರಿಸಲು ಆಲೋಚನೆ ಮಾಡಿದ್ದಾರೆ.

1984 gಲ್ಲಿ ಪ್ರಥಮ ಭಾರಿಗೆ À ಲೋಕಸಭಾ ಸದಸ್ಯರಾಗಿ ಆಯ್ಕೆಯಾದಾಗ ಪಾರ್ಲಿಮೆಂಟ್‍ನಲ್ಲಿ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಧ್ವನಿ ಎತ್ತಿದ್ದ ಬಸವರಾಜ್ ರವರು, 2024 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಾಂಸ್ಕøತಿಕ ನಾಯಕ ಬಸವಣ್ಣವರ ಚಿಂತನೆಗಳ ಆಧಾರದಲ್ಲಿ,  ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡುವ ಕಾರ್ಯಗಳತ್ತ ಗಮನ ಹರಿಸಲು ಯೋಚಿಸುತ್ತಿದ್ದಾರೆ.

ಸಾಯಿಬಾಬಾ ಮಂದಿರದಲ್ಲಿ ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ. ಅವರ ಕುಟುಂಬದವರ ಸಲಹೆಗಳನ್ನು ಪರಿಗಣಿಸಿ, ದಿನಾಂಕ:10.05.2024 ರಂದು ಬಸವ ಜಯಂತಿ ದಿನದಂದು ಮುಂದಿನ ಯೋಜನೆಗಳ ರೂಪುರೇಷೆ ಪ್ರಕಟಿಸಲು ಸಿದ್ಧತೆ ನಡೆಯುತ್ತಿದೆ.