27th July 2024
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆಯ ರಾಜಕಾರಣದಲ್ಲಿ ಕಳೆದ 60 ವರ್ಷಗಳಿಂದ, ವಿವಿಧ ಹಂತದಲ್ಲಿ ಕಾರ್ಯ ನಿರ್ವಹಿಸಲು ಸಹಕರಿಸಿದ, ಎಲ್ಲಾ ಪಕ್ಷಗಳ ನಾಯಕರಿಗೂ, ಮತದಾರರಿಗೂ, ಜನತೆಗೂ, ಅಧಿಕಾರಿಗಳಿಗೂ, ಮಾಧ್ಯಮದವರಿಗೂ, ನನ್ನ ಕುಟುಂಬದವರಿಗೂ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.

 ಅಭಿವೃದ್ಧಿ ವಿಚಾರದಲ್ಲಿ ನಾನೂ ಎಂದೂ ಹಿಂದೆ ಬಿದ್ದಿಲ್ಲ, ನಾನೂ ಶ್ರಮಿಸಿದ ಆನೇಕ ಯೋಜನೆಗಳು ಮಂಜೂರಾಗಿವೆ, ಆನೇಕ ಯೋಜನೆಗಳು ಪ್ರಗತಿಯಲ್ಲಿವೆ, ಇನ್ನೂ ಆನೇಕ ಯೋಜನೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಕಚೇರಿಗಳಲ್ಲಿ ನನೆಗುದಿಗೆ ಬಿದ್ದಿವೆ. ಆರಂಭದಿಂದ ಇಲ್ಲಿಯವರೆಗೂ ಶ್ರಮಿಸಿದ ಪ್ರತಿಯೊಂದು ಯೋಜನೆಗಳ ದಾಖಲೆ ಸಹಿತ’ ಬಿಡುಗಡೆ ಮಾಡುವುದಾಗಿ ಘೋಶಿಸಿದರು.

 ನನ್ನ ಅವಧಿಯಲ್ಲಿ ಅಲ್ಲದೆ, ಎಲ್ಲಾ ಲೋಕಸಭಾ ಸದಸ್ಯರ ಅವಧಿಯ, ತುಮಕೂರು ಲೋಕಸಭಾ ಕ್ಷೇತ್ರದ, ಜಿಲ್ಲೆಯ, ರಾಜ್ಯದ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಶ್ರಮಿಸಿದ ಯೋಜನೆಗಳ ಮಾಹಿತಿಗಳ ಅಭಿವೃದ್ಧಿ ಮ್ಯೂಸಿಯಂ’ ಮಾಡಲು ಸಹ ಚಿಂತನೆ ನಡೆಸಲಾಗಿದೆ. ನನ್ನ ಕನಸಿನ ಎಲ್ಲಾ  ಯೋಜನೆಗಳ ಅನುಷ್ಠಾನಕ್ಕೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಪ್ರಕಟಿಸಿದರು.

ರಾಜ್ಯ ಸಮಗ್ರ ನೀರಾವರಿ ಹೋರಾಟ ಮುಂದುವರೆಯಲಿದೆ.

  ಕರ್ನಾಟಕ ರಾಜ್ಯದ ಸಮಗ್ರ ನೀರಾವರಿಗಾಗಿ, ನೀರಾವರಿ ತಜ್ಞರಾದ ಜಿ.ಎಸ್.ಪರಮಶಿವಯ್ಯನವರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ಮಾಡಲಾಗಿದೆ, ಆನೇಕ ಯೋಜನೆಗಳ ಅನುಷ್ಠಾನದ ತೃಪ್ತಿಯೂ ಇದೆ.

 ರಾಜ್ಯದ ಆನೇಕ ನೀರಾವರಿ ತಜ್ಞರುಗಳ ವರಧಿಯ ಆಧಾರದ ಮೇಲೆ, ಸುಮಾರು 600 ಟಿ.ಎಂ.ಸಿ ಅಡಿ ನೀರನ್ನು ಬಳಸಿಕೊಂಡು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಅನುಷ್ಠಾನಕ್ಕೆ, ವಿವರವಾದ   ಕಲ್ಪನಾ ವರದಿ ಸಿದ್ಧಪಡಿಸಲು, ನನ್ನ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯಮಾಡಲಾಗಿತ್ತು.

 ನಂತರ ನಿಯಮದ ಪ್ರಕಾರ ಜಲಸಂಪನ್ಮೂಲ ಅಪರ ಮುಖ್ಯಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ನಂತರ ಆಗಿನ ಜಲಸಂಪನ್ಮೂಲಸಚಿವರಾದ ಶ್ರೀ ರಮೇಶ್‍ಜಾರಕಿಹೊಳೆರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ನಂತರ ಆಗಿನ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕಡತದ ಅನುಮೋದನೆ ಮಾಡಿ, ವರದಿ ಸಿದ್ಧಪಡಿಸಲು ಆದೇಶ ಮಾಡಿದ್ದಾರೆ.

   ಜೊತೆಗೆ, ಮುಖ್ಯಮಂತ್ರಿರವರಿಂದ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೂ ಪತ್ರ ಬರೆದು, ರಾಜ್ಯ ಸಮಗ್ರ ನೀರಾವರಿ ಜಾರಿಗೆ ಮನವಿ ಮಾಡಿದ್ದಾರೆ. ಈ ಕಡತವೂ ಸಹ ಪ್ರಗತಿಯಲ್ಲಿದೆ. ಈ ಎಲ್ಲಾ ಕಡತಗಳ ಅನುಸರಣೆ ಮಾಡಲಾಗುವುದು.

  ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರು ಮತ್ತು ಅಧಿಕಾರಿಗಳ ಹಂತದಲ್ಲೂ ರಾಜ್ಯದ ನದಿಜೋಡಣೆ ಮತ್ತು ಕೇಂದ್ರ ಸರ್ಕಾರದ ನದಿಜೋಡಣೆಗಳ’ ಬಗ್ಗೆ ಹಲವಾರು ಸಮಾಲೋಚನೆ ಸಭೆಗಳು ನಡೆದಿವೆ. 

 ರಾಜ್ಯ, ದೇಶ ಮತ್ತು ವಿದೇಶಗಳ ನೀರಾವರಿ ಜ್ಞಾನಿಗಳ ಚಿಂತನೆಗಳ ಆಧಾರದ ಮೇಲೆ, ‘ರಾಜ್ಯ ಸಮಗ್ರ ನೀರಾವರಿ ಮ್ಯೂಸಿಯಂ’ ಮಾಡಲು ಸಿದ್ಧತೆ ಆರಂಭವಾಗಿದೆ. ಸರ್ವ ಪಕ್ಷಗಳ, ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳ, ವಿವಿಧ ತಜ್ಞರುಗಳ, ರೈತರುಗಳ, ವಿವಿಧ ಹಂತದ ಹೋರಾಟಗಾರರ ಪರಿಕಲ್ಪನೆಗಳು ಸಹ ಇಲ್ಲಿ ಇರಲಿವೆ.

ನೀರು ನೀರು ನೀರು ಎಲ್ಲೆಲ್ಲೂ ನೀರಿನ ಚಿಂತೆ; ಗ್ಯಾರಂಟಿ ಕೊಡುವವರೇ ಇಲ್ಲ!

 ಹಳ್ಳಿಯಿಂದ ಸಿಟಿವರೆಗೂ ಕುಡಿಯುವ ನೀರಿನ ಪರದಾಟ, ರೈತರಿಗೆ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ, ಕಾಡು ಪ್ರಾಣಿಗಳಿಗೂ ಕುಡಿಯುವ ನೀರಿಗೆ ಹಾಹಾಕಾರ. ಯಾವುದೇ ಸರ್ಕಾg, ರಾಜಕೀಯ ಪಕ್ಷÀ ನೀರಿನ ಗ್ಯಾರಂಟಿ ಕೊಡಲೇ ಇಲ್ಲ.

  ಕಳೆದ 2 ವರ್ಷಗಳ ಹಿಂದೆ ಬೋರ್‍ವೆಲ್‍ಗಳಲ್ಲಿ ನೀರು ಹುಕ್ಕುವುದನ್ನು, ತೆರೆದ ಬಾವಿಗಳು ತುಂಬಿರುವುದನ್ನು ನೋಡಿದಾಗ, ಅಂತರ್ಜಲ ಮರುಪೂರಣವಾಗಿದೆ, ಬಹುಷಃ ಹಲವಾರು ವರ್ಷಗಳು ನೀರಿನ ಚಿಂತೆ ನೀಗಬಹುದು ಎಂಬ ಮಾತು ಎಲ್ಲರ ಬಾಯಲ್ಲೂ ಇತ್ತು.

  ಈಗ ನೋಡಿದರೆ ಎಲ್ಲಾ ಬೋರ್‍ವೆಲ್‍ಗಳು ಖಾಲಿ, ಖಾಲಿ ಒಣಗುತ್ತಿವೆ. ಎಲ್ಲೆಲ್ಲಿ ಕೆರೆಗಳು ನದಿ ನೀರಿನಿಂದ ತುಂಬಿವೆಯೋ ಅಲ್ಲಿ ಮಾತ್ರ ನೀರು ಬರುತ್ತವೆ. ಉಳಿದ ಕಡೆ ನೀರೇ ಇಲ್ಲ.

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭಿರವಾಗಿ ಚಿಂತನೆ ಮಾಡದಿದ್ದರೆ, ಅತಿ ಶೀಘ್ರದಲ್ಲಿ ನೀರಿಗಾಗಿ ಯುದ್ಧ ನಡೆಯಲಿದೆ. ಜಲಜೀವನ್ ಮಿಷನ್ ಯೋಜನೆಯಡಿ, 24/7 ಯೋಜನೆಯಡಿ, ನೀರಿಗಾಗಿ ಹಾಕಿರುವ ಸಾವಿರಾರು ಕೋಟಿ ಪೈಪ್‍ಗಳು ನೀರಿಲ್ಲದೆ ಖಾಲಿ ಹೊಡೆಯಲಿವೆ. ಮನೆಗೆ ನಲ್ಲಿ ಇದ್ದು ನೀರು ಬರದಿದ್ದರೇ ಏನು ಪ್ರಯೋಜನ.

  ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿರವರು ನದಿ ಜೋಡಣೆ ಕನಸು ಬಿತ್ತಿದ್ದರು.  ಪ್ರಧಾನಿ ಶ್ರೀ ನರೇಂದ್ರಮೋದಿಯವರು ಹಲವು ಕಡೆ ನದಿಜೋಡಣೆ ಘೋಷಣೆ ಮಾಡಿದರೂ, ರಾಜ್ಯ ಸರ್ಕಾರಗಳು ಸ್ಪಂಧಿಸುತ್ತಿಲ್ಲ. ಕಾರಣ, ರಾಜಕೀಯ ಮತ್ತು  ಅಧಿಕಾರಿಗಳ ಒಣ ಪ್ರತಿಷ್ಟೆಗಳು ಎಂದರೆ ತಪ್ಪಾಗಲಾರದು. 

 ಎಲ್ಲರ ಮನವೊಲಿಸಿ, ಒಂದು ಅಂತಿಮ ರೂಪುರೇಷೆ ನೀಡುವುದು ಅಗತ್ಯವಾಗಿದೆ. ನೀರಾವರಿ ಬಗ್ಗೆ ನೆನೆಗುದಿಗೆ ಬಿದ್ದಿರುವ ಎಲ್ಲಾ ಕಡತಗಳ ಅನುಸರಣೆಗೆ ನನ್ನ ಅನುಭವದ ಧಾರೆ ಎರೆಯಲಾಗುವುದು.

 ತುಮಕೂರು ನಗರದ ಗಾಂಧಿ ನಗರದಲ್ಲಿ ನಡೆದ ಪತ್ರಿಕಾ  ಘೋಷ್ಠಿಯಲ್ಲಿ  ಕುಂದರನಹಳ್ಳಿ ರಮೇಶ್, ಶಿವಕುಮಾರ್, ವೆಂಕಟಾಚಲಿ, ಶಿವರುದ್ರಯ್ಯ, ವೀರಭಧ್ರಯ್ಯ ಇನ್ನೂ ಮುಂತಾದವರು ಇದ್ದರು.