27th December 2024
Share

TUMAKURU:SHAKTHIPEETA FOUNDATION

ತುಮಕೂರಿನ ಶಕ್ತಿಭವನ ಕಟ್ಟಡದಲ್ಲಿ ಬಸವ ಜಯಂತಿ’ ದಿವಸ ಆರಂಭವಾಗುವ, ನಾಲೇಡ್ಜ್ ಬ್ಯಾಂಕ್ @ 2047’ ನಿರ್ವಹಣೆಗೆ ಮಾಸಿಕ ಕನಿಷ್ಠ ರೂ 3 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಯಾರು ಹೇಗೆ ನೀಡಬೇಕು ಎಂಬ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ಆರಂಭಮಾಡಲಾಗಿದೆ.

ನಾನು ನನ್ನ ವ್ಯವಹಾರದ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಮ್ಯಾನೇಜರ್ ಬಳಿ ವಿಚಾರಿಸಿದೆ. ಮಾಸಿಕ 3 ಲಕ್ಷ ಬಡ್ಡಿ ಬರಬೇಕಾದರೆ ಎಷ್ಟು ಹಣ ಡೀಪಾಸಿಟ್ ಮಾಡಬೇಕು. ಶ್ರೀಮತಿ ಹೇಮಲತಾ ಮೇಡಂ ರವರ ಪ್ರಕಾರ, ರೂ 5 ಕೋಟಿ ಡಿಪಾಸಿಟ್ ಇಟ್ಟರೆ, ಮಾಸಿಕ ಈಗಿನ ಬಡ್ಡಿ ಪ್ರಕಾರ ರೂ 3,22,000 ಬರಲಿದೆ, ಯಾವುದಕ್ಕೂ ತಾವೂ ತಮ್ಮ ಬ್ಯಾಂಕ್ ಟ್ರಸ್ಟ್‍ಗಳ ವ್ಯವಹಾರಗಳಿಗೆ  ಒಂದು ವಿಭಾಗ ಇದೆ. ಅಲ್ಲಿ ಸಮಾಲೋಚನೆ ಮಾಡಲು ಸಲಹೆ ನೀಡಿದರು.

 ವಸಂತಾನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ತಿಂಗಳಿಗೆ ರೂ 3 ಲಕ್ಷ ಬಾಡಿಗೆ ಬರಬೇಕಾದರೆ ಸುಮಾರು ರೂ 3-4 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಮಾಡಿ, ಬಾಡಿಗೆ ನೀಡಬೇಕಾಗುವುದು. ಬಾಡಿಗೆ ದಾರರು ಸರಿಯಾಗಿ ಪಾವತಿಸಿದರೆ, ಒಳ್ಳೆಯ ಆಲೋಚನೆ ಎಂದು, ಕೆ.ಐ.ಎ.ಡಿ.ಬಿ ನಿವೃತ್ತ ಅಧಿಕಾರಿಗಳು ಸಲಹೆ ನೀಡಿದರು. ಇದಕ್ಕೂ ನಿವೇಶನ ಮತ್ತು ಕಟ್ಟಡ ನಿರ್ಮಾಣ ಮಾಡಬೇಕಾದರೆ ರೂ 5 ಕೋಟಿ ಅಗತ್ಯವಿದೆ.

ಒಂದು ಅಧ್ಯಯನ ಪೀಠಕ್ಕೆ ಪ್ರಾರಂಭಿಕ ಕಟ್ಟಡ ಮತ್ತು ಮೂಲಭೂತ ಸೌಕರ್ಯಕ್ಕೆ ರೂ 5 ಕೋಟಿ ಮತ್ತು ಮಾಸಿಕ ನಿರ್ವಹಣೆ ವ್ಯವಸ್ಥೆಗೆ ರೂ 5 ಕೋಟಿ, ಒಟ್ಟು ರೂ 10 ಕೋಟಿಗಳಾದರೆ ಒಂದು ಅಧ್ಯಯನ ಪೀಠದ ಚಟುವಟಿಕೆಗಳನ್ನು 2047 ರವರೆಗೆ ನಿರಂತರವಾಗಿ, ನಿರ್ವಹಣೆ ಮಾಡಬಹುದಾಗಿದೆ.

 ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರಸ್ತಾವನೆಯಲ್ಲಿ, ಸರ್ಕಾರಗಳಿಗೆ ಸಲಹೆ ನೀಡಿರುವ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸುಮಾರು 545 ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು ಅಥವಾ ಹಾಲಿ ಇರುವ ಅಧ್ಯಯನ ಪೀಠಗಳಿಗೆ ಜೀವ ತುಂಬ ಬೇಕು.

 545 ಅಧ್ಯಯನ ಪೀಠಗಳಿಗೆ ಸುಮಾರು ರೂ 5450 ಕೋಟಿ ಅಗತ್ಯವಿದೆ. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದಮೋದಿಯವರು, ಕೇಂದ್ರ ಸರ್ಕಾರದ 2024-25 ರ ಆಯವ್ಯಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರೂ ಒಂದು ಲಕ್ಷಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಇದರಲ್ಲಿ ರೂ 5450 ಕೋಟಿ ಮಂಜೂರುÀ ಮಾಡಿಸುವ ಕನಸನ್ನು ಕಾಣುತಿದ್ದೇನೆ. ಇದರಲ್ಲಿ ರಾಜ್ಯದ ಪಾಲು ಇರಬಹುದೆನೋ ಮಾರ್ಗಸೂಚಿ ಅಧ್ಯಯನ ಮಾಡಬೇಕಿದೆ.

ಇದಕ್ಕೆ ರಾಜ್ಯ ಸರ್ಕಾರದ ಜೊತೆಗೆ 28 ಜನ ಲೋಕಸಭಾ ಸದಸ್ಯರು ಮತ್ತು 14 ಜನ ರಾಜ್ಯ ಸಭಾ ಸದಸ್ಯರ ಸಹಕಾರದ ಅಗತ್ಯವಿದೆ.

ರಾಜ್ಯದ 225 ಶಾಸಕರು, 75 ಜನ ವಿಧಾನಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು ಮತ್ತು 14 ಜನ ರಾಜ್ಯ ಸಭಾ ಸದಸ್ಯರು ಮತ್ತು2 ದೆಹಲಿ ಪ್ರತಿನಿಧಿಗಳಿಗೂ, ರಾಜ್ಯದ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೂ,  31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓಗಳಿಗೂ ಅನೂಕೂಲವಾಗುವ ಈ ಯೋಜನೆಗೆ ಎಲ್ಲರ ಸಹಕಾರವೂ ದೊರೆಯಲಿದೆ ಎಂಬ ಆಶಾಭಾವನೆ ನನ್ನದಾಗಿದೆ.

ಈ ಅಧ್ಯಯನ ಪೀಠಗಳಿಗೆ ತುಮಕೂರಿನ ಶಕ್ತಿಭವನದಲ್ಲಿ ಆರಂಭವಾಗುವ  ‘ನಾಲೇಡ್ಜ್ ಬ್ಯಾಂಕ್ @ 2047’  ಫೈಲಟ್ ಯೋಜನೆ ಆಗಲಿದೆ. ವಿಶ್ವದ 108 ಶಕ್ತಿಪೀಠಗಳ ಆಶೀರ್ವಾದವೂ ದೊರೆಯಲಿದೆ.

ಆಸಕ್ತರು ತಮ್ಮ ಜ್ಞಾನಗಳೊಂದಿಗೆ ಕೈಜೋಡಿಸಲು ಮುಕ್ತ ಆಹ್ವಾನ.