3rd December 2024
Share

TUMAKURU:SHAKTHIPEETA FOUNDATION

ನಾನು 1984 ರಲ್ಲಿ ಪ್ರಥಮ ಭಾರಿಗೆ ಲೋಕಸಭಾ ಸದಸ್ಯನಾಗಿ, ಪಾರ್ಲಿಮೆಂಟ್ ಭವನದಲ್ಲಿ ವಿಶ್ವ ಗುರು ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಲೋಕಸಭೆಯಲ್ಲಿ ಧ್ವನಿಯೆತ್ತಿ ಸಫಲನಾದೆ. 2024 ರಲ್ಲಿ 5 ನೇ ಬಾರಿ ಸಂಸದರ ಅವಧಿಯ ಕೊನೆಯಲ್ಲಿ, ದಿನಾಂಕ:10.05.2024 ನೇ ಶುಕ್ರವಾರ, ಕರ್ನಾಟಕ ರಾಜ್ಯದ ಸಾಂಸ್ಕøತಿಕ ನಾಯಕ, ವಿಶ್ವ ಗುರು ಬಸವ ಜಯಂತಿ ದಿವಸ, ಕುಂದರನಹಳ್ಳಿ ರಮೇಶ್ ನೇತೃತ್ವದ  ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ ಸ್ವಾತಂತ್ರ್ಯ ಸೇನೆ @ 100 (ಬಿ.ಎಸ್.ಎಸ್.) ಸಂಯುಕ್ತಾಶ್ರಯದಲ್ಲಿ ‘ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್’ ನ ಉದ್ಘಾಟನೆ ಮಾಡಿರುವುದು   ಖುಷಿ ತಂದಿದೆ ಎಂದು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಹರ್ಷ ವ್ಯಕ್ತ ಪಡಿಸಿದರು.

 ಸರ್ವಪಕ್ಷಗಳ, ಸರ್ವ ಜನಾಂಗಗಳ ಮತ್ತು ರಾಜ್ಯದ ಸಂಸದರ ನೇತೃತ್ವದಲ್ಲಿ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರ ಪಡೆಯಲು ಹಲವಾರು ಜ್ಞಾನಿಗಳ ಸಹಭಾಗಿತ್ವದಲ್ಲಿ, ಕಾರ್ಯತಂತ್ರ ರೂಪಿಸಲು, ಶ್ರಮಿಸುವ ಕಾರ್ಯ ಮಹತ್ತರವಾಗಿದೆ. ಇದರಲ್ಲಿ ನಾನು ಸಹ ತೊಡಗಿಸಿಕೊಳ್ಳುತ್ತೇನೆ ಎಂದರು.

ಅವರ ಅವಧಿಯಲ್ಲಿ ಕೈಗೊಂಡಿರುವ ಯೋಜನೆಗಳನ್ನು, ಅಭಿವೃದ್ಧಿ ಮ್ಯೂಸಿಯಂ ನಲ್ಲಿ ಸಂಗ್ರಹಿಸಲು ಹಲವಾರು ಕಡತಗಳನ್ನು ನೀಡುವ ಮೂಲಕ, ತುಮಕೂರು ಲೋಕಸಭಾ ಕ್ಷೇತ್ರದ ಅಧ್ಯಯನ ಪೀಠಕ್ಕೆ ಚಾಲನೆ ನೀಡಿದರು.

ಮಾಜಿ ಸಂಸದ ದಿ.ಎಸ್ ಮಲ್ಲಿಕಾರ್ಜುನಯ್ಯನವರ ಧರ್ಮಪತ್ನಿ ಮತ್ತು ಪುತ್ರಿ ಶ್ರೀಮತಿ ನಾಗವೇಣಿ ರವರು ಅವರ ಅವಧಿಯಲ್ಲಿನ ಕೈಗೊಂಡಿರುವ ಯೋಜನೆಗಳ ಕಡತವನ್ನು ನೀಡುವ ಮೂಲಕ ಸಹಕರಿಸಿದರು.

ಮಾಜಿ ಸಂಸದ ದಿ.ಸಿ.ಆರ್.ಬಸಪ್ಪನವರ ಮೊಮ್ಮಗಳಾದ ಶ್ರೀಮತಿ ಸುಪ್ರಿಯಾರವರು, ನಮ್ಮ ತಾತರವರ ಅವಧಿಯಲ್ಲಿನ ಯೋಜನೆಗಳ ಮಾಹಿತಿಗಳನ್ನು ಸಂಗ್ರಹಿಸಲು ಶ್ರಮಿಸುವುದಾಗಿ ಹೇಳಿದರು.

ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಯವರಾದ ಶ್ರೀ ವೆಂಕಟೇಶ್ವರಲುರವರು ಮಾತನಾಡಿ, ತುಮಕೂರು ಜಿಲ್ಲೆಯ ಸುಮಾರು 3500 ಕ್ಕೂ ಹೆಚ್ಚು ಗ್ರಾಮಗಳು ಮತ್ತು ಬಡಾವಣೆಗಳಲ್ಲಿ ಊರಿಗೊಂದು/ಬಡಾವಣೆಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್ @ 2047’ ಕಾಲೇಜು ವಿದ್ಯಾರ್ಥಿಗಳ ಮೂಲಕ ಇಂಟರ್ನ್ ಶಿಪ್ ಅಡಿಯಲ್ಲಿ, ಸಿದ್ಧಪಡಿಸುವ ಮೂಲಕ ವಿಕಸಿತ ಭಾರತ @ 2047 ಕ್ಕೆ ಪೂರಕವಾದ, ಈ ಯೋಜನೆಗೆ ಕೈಜೋಡಿಸುವುದಾಗಿ ತಿಳಿಸಿದರು.

  ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಶ್ರೀ ಕೆ.ಜೈಪ್ರಕಾಶ್ ರವರು ಮಾತನಾಡಿ, ಜಲಪೀಠದ ಮೂಲಕ,  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಪರಿಕಲ್ಪನೆಯ ಮತ್ತು ದೇಶದ ಹಲವಾರು ನೀರಾವರಿ ತಜ್ಞರುಗಳ ಸಹಕಾರದಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯಡಿ ನದಿ ನೀರಿನ ಅಲೋಕೇಷನ್ ಮಾಡುವ, ಈ ಪುಣ್ಯ ಕೆಲಸದಲ್ಲಿ ನಮ್ಮ ಒಂದು ತಂಡವೇ ಕೈ ಜೋಡಿಸಲಿದೆ ಎಂದರು.

ಗುಬ್ಬಿ ತಾಲ್ಲೋಕು ಅದಲಗೆರೆ ಶಾಲೆಯ ನಿವೃತ್ತ ಹಿಂದಿ ಮಾಸ್ಟರ್, ಶ್ರೀ ಹನುಮಂತಪ್ಪರಾಯಪ್ಪನವರು ಮಾತನಾಡಿ ಶಕ್ತಿಪೀಠ ವತಿಯಿಂದ, ವಿಶ್ವದ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ ಮಾಡಿ, ಕೇಂದ್ರ ಸರ್ಕಾರದಿಂದ ವಿಶ್ವದ 108 ಶಕ್ತಿಪೀಠಗಳ ಸಕ್ರ್ಯೂಟ್ ಮಾಡಿಸಲು ಶ್ರಮಿಸುತ್ತಿರುವ ಕುಂದರನಹಳ್ಳಿ ರಮೇಶ್, ನಾನು ನೀಡಿದ ದೇವಿಪುಸ್ತಕವನ್ನು ಸುಮಾರು 36 ವರ್ಷಗಳಿಂದ ಪಾರಾಯಣ ಮಾಡುವ ಮೂಲಕ ಒಂದು ಇತಿಹಾಸ ಮಾಡಲು ಮುಂದಾಗಿರುವುದು ಖಷಿ ತಂದಿದೆ ಎಂದರು.

  ಅಭಿವೃದ್ಧಿ ತಜ್ಞ ಶ್ರೀ ಟಿ.ಆರ್.ರಘೋತ್ತಮರಾವ್À ಮಾತನಾಡಿ ಕುಂದರನಹಳ್ಳಿ ರಮೇಶ್ ಮತ್ತು ಕೆ.ಆರ್.ಸೋಹನ್ ಸರ್ಕಾರಕ್ಕೆ ಸಲ್ಲಿಸಿರುವ  ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರಸ್ತಾವನೆಯಲ್ಲಿ, ಸರ್ಕಾರಗಳಿಗೆ ಸಲಹೆ ನೀಡಿರುವ, ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸುಮಾರು 545 ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು ಅಥವಾ ಹಾಲಿ ಇರುವ ಅಧ್ಯಯನ ಪೀಠಗಳಿಗೆ ಜೀವ ತುಂಬ ಬೇಕು ಎಂಬ ಕನಸಿನ ಪೈಲಟ್ ಪ್ರಾಜೆಕ್ಟ್ ನಾಲೇಡ್ಜ್ ಬ್ಯಾಂಕ್ @ 2047’ ಗೆ ಚಾಲನೆ ನೀಡಿರುವುದು ಹರ್ಷ ತಂದಿದೆ, ನನ್ನ ಜೀವ ಇರುವವರೆಗೂ  ನಾನು ತೊಡಗಿಸಿ ಕೊಳ್ಳುತ್ತೇನೆ ಎಂದರು. 

 ಸಂಶೋಧಕ ಶ್ರೀ ಎಂ.ಕೆ.ನಾಗರಾಜ್ ರಾವ್ ರವರು ಮಾತನಾಡಿ, ಇನ್ನೂ ಮುಂದೆ ಶಕ್ತಿಭವನದಲ್ಲಿ ನಿರಂತರ ಚಟುವಟಿಕೆಗಳು ನಡೆಯುತ್ತಿರಬೇಕು. ನಿಯಮ ಬದ್ದವಾದ ರೂಪುರೇಷೆಗಳನ್ನು ರೂಪಿಸಲು ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.

 ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ ಸ್ವಾತಂತ್ರ್ಯ ಸೇನೆ @ 100 (ಬಿ.ಎಸ್.ಎಸ್.) ಸಂಯುಕ್ತಾಶ್ರಯದಲ್ಲಿ, ಬಸವ ಜಯಂತಿ ದಿವಸ, ತುಮಕೂರಿನ ಜಯನಗರ ಪೂರ್ವ, ಮೊದಲನೇ ಮುಖ್ಯ ರಸ್ತೆ, ಶಕ್ತಿಭವನದಲ್ಲಿ ಶಕ್ತಿಪೀಠ, ಜಲಪೀಠ ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್ ಮತ್ತು ಅಭಿವೃದ್ಧಿ ಪೀಠ ಮತ್ತು ನಾಲೇಡ್ಜ್ ಬ್ಯಾಂಕ್ @ 2047’   ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ  ಶಕ್ತಿಪೀಠ ಫೌಂಡೇಷನ್ ಸಿ.ಇ.ಓ ಕೆ.ಆರ್.ಸೋಹನ್ ಕೃತಜ್ಞತೆ ಸಲ್ಲಿಸಿದರು.