11th May 2025
Share

TUMAKURU: SHAKTHIPEETA FOUNDATION

ದಿನಾಂಕ:24.05.2024 ರಂದು ಬೆಂಗಳೂರಿನಲ್ಲಿ ಜಲಗ್ರಂಥ ದ ಬಗ್ಗೆ ಒಂದು ಉನ್ನತ ಮಟ್ಟದ ಸಭೆ ನಡೆಯಿತು. ವಿಜಯಪುರ, ಹಾವೇರಿ, ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಜ್ಞಾನಿಗಳೊಂದಿಗೆ, ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು. ಜೂನ್ ತಿಂUಳÀ ಎರಡನೇ ವಾರ ಮುಂದುವರೆದ ಸಭೆ ನಡೆಯಲಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳವಾರು ನಿಖರವಾದ, ಲೈವ್ ತಾಜಾ ಡಾಟಗಳ ವಿಶ್ಲೇಷಣೆಯೊಂದಿಗೆ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ನಕ್ಷೆ ಸಿದ್ಧಪಡಿಸುವ ಸ್ಪಷ್ಟ ಗುರಿಯೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಸಕ್ತ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ. ಒನ್ ಡಾಟಾಒಂದು ರಾಜ್ಯಒಂದು ನಕ್ಷೆ  ಯ ರೂಪುರೇಷೆಗಳು ಅಧಿಕೃತವಾಗಿ ಆರಂಭವಾಗಿದೆ ಎಂದರೆ ತಪ್ಪಾಗಲಾರದು.

ಬಾರತ ದೇಶ ಬಿಟ್ಟು ಹೋರದೇಶಗಳಲ್ಲಿ ಕಾರ್ಯನಿರ್ವಹಿಸಿ, ಮತ್ತೆ ದೇಶಕ್ಕೆ ಮರಳಿ ರಾಜ್ಯಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಸಕ್ತರೊಬ್ಬರು, ಅವರ ಕನಸುಗಳ ಪಿಪಿಟಿ ಪ್ರದರ್ಶನ ಮಾಡಿದರು.  ಒಂದು ಹಂತಕ್ಕೆ ಬರುವವರೆಗೂ ಮೌನವಾಗಿ, ರಹಸ್ಯವಾಗಿ ಕಾರ್ಯನಿರ್ವಹಿಸಲು ಚಿಂತನೆ ನಡೆಸಲಾಗಿದೆ.