27th July 2024
Share

TUMAKURU:SHAKTHIPEETA FOUNDATION

  ಯಾವುದೇ ಮುಲಾಜಿಗೆ ಒಳಗಾಗದೆ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಶಕ್ತಿಪೀಠ ಫೌಂಡೇಷನ್ ಮುಂದಿನ 23 ವರ್ಷಗಳವರೆಗೆ, ಒಂದು ಘಂಟೆ ಸಮಯದ ಮತ್ತು ಒಂದು ರೂಪಾಯಿ ಮೌಲ್ಯ ಸೇರಿದಂತೆ, ಎಲ್ಲ ವ್ಯವಹಾರವೂ ಡಿಜಿಟಲ್ ಮೂಲಕ ಪಾರದರ್ಶಕವಾಗಿ ನಡೆಸುವ ವ್ಯವಸ್ಥೆ ರೂಪಿಸಲು ಮಹತ್ವದ ನಿರ್ಣಯ ಮಾಡಲಾಯಿತು. 

  ಕಳೆದ 36 ವರ್ಷಗಳ ಸಮಾಜ ಸೇವೆಯ ಕಹಿ ಅನುಭವವೂ ಸೇರಿದಂತೆ, ಕಳೆದ 58 ತಿಂಗಳ  ಶಕ್ತಿಪೀಠ ಫೌಂಡೇಷನ್‍ನ ಕಾರ್ಯ ವಿಧಾನಗಳ ಬಗ್ಗೆ ಅವಲೋಕನ ನಡೆಯಿತು. ಯಾವುದೇ ಒಬ್ಬ ಅಧಿಕಾರಿಯ ಹೆಸರನ್ನು  ಪ್ರಕಟಿಸಿದಂತೆ ರಹಸ್ಯವಾಗಿ ಶ್ರಮಿಸಲು ಚರ್ಚಿಸಲಾಯಿತು.

   ರಾಜಕೀಯ ಪಕ್ಷಗಳ, ಚುನಾಯಿತ ಜನಪ್ರತಿನಿಧಿಗಳ ಓಲೈಕೆಗೆ ತುತ್ತಾಗದೆ, ತಾಳ್ಮೆಯಿಂದ, ಆದಷ್ಟು ಮೌನವಾಗಿ ಗುರಿ ಮುಟ್ಟುವ ರೂಪುರೇಷೆ ಸಿದ್ಧಪಡಿಸಲು ಸಮಾಲೋಚನೆ ನಡೆಯಿತು. ದಿನ ನಿತ್ಯದ ವ್ಯವಹಾರಗಳಿಗೆ ತೊಂದರೆ ಆಗದಂತೆ, ಪ್ರತಿ ತಿಂಗಳು ನಿರ್ಧಿಷ್ಟ ಆರ್ಥಿಕ ವ್ಯವಸ್ಥೆಗೆ ಆಧ್ಯತೆ ನೀಡುವ ಗುರಿ ಹಾಕಿ ಕೊಳ್ಳಲಾಗಿದೆ.

ಶಕ್ತಿಪೀಠ ಫ್ಯಾಮಿಲಿಗಳ ಪಟ್ಟಿಯನ್ನು ರಹಸ್ಯವಾಗಿ ಇಡಬೇಕೋ ಅಥವಾ ಪಾರದರ್ಶಕವಾಗಿ ಪ್ರಕಟಿಸಬೇಕೋ, ಅನ್ನುವ ಬಗ್ಗೆ 15 ದಿವಸದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.

ಆಸಕ್ತರು ಮುಕ್ತವಾಗಿ ಸಲಹೆ ನೀಡಬಹುದಾಗಿದೆ.