8th September 2024
Share

TUMAKURU:SHAKTHI PEETA FOUNDATION

 ಹೇಮಾವತಿ ತುಮಕೂರು ಬ್ರ್ಯಾಂಚ್ ಕೆನಾಲ್ ಭಾಗದಲ್ಲಿ,  ಪ್ಲಡ್ ಇರ್ರಿಗೇಷನ್ ಟು ಮೈಕ್ರೋ ಇರ್ರಿಗೇಷನ್ ಮಾಡಿದಲ್ಲಿ ಸುಮಾರು 3.75 ಟಿಎಂಸಿ ಅಡಿ ನೀರು ಉಳಿತಾಯವಾಗಲಿದೆ ಎಂದು ತಜ್ಞರು ಹೇಳುತ್ತಾರೆ.

 ತುಮಕೂರು ಮಾಜಿ ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಹಲವಾರು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದೆವು. ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆಸಿದ್ದೆವು.

ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ  ಉನ್ನತ ಮಟ್ಟದ  ಅಧಿಕಾರಿಗಳಾದ ಜೊತೆ ಶ್ರೀ ಕೆ.ಜೈಪ್ರಕಾಶ್‍ರವರು, ಶ್ರೀ ಶಂಕರೇಗೌಡರು ದೆಹಲಿಗೆ ನಿಯೋಗಿ ಹೋಗಿ, ಜಲಶಕ್ತಿ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆಯನ್ನು ನಡೆಸಿದ್ದೇವು.

ಈಗ ನೂತನ ಮಾರ್ಗದರ್ಶಿ ಸೂತ್ರವನ್ನು ಕೇಂದ್ರ ಸರ್ಕಾರ ರಚಿಸಿದೆಯಂತೆ, ಆದ್ದರಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಕಾವೇರಿ ನೀರಾವರಿ ನಿಗಮ ವಿಶೇಷ ಆಸಕ್ತಿ ವಹಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ವಿಶೇಷ ಆಸಕ್ತಿ ವಹಿಸಿದಲ್ಲಿ ಯೋಜನೆ ಅನುಷ್ಠಾನವಾಗಲಿದೆ. ಈ ಬಗ್ಗೆ ಶೀಘ್ರವಾಗಿ ಸಚಿವರ ಮತ್ತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು.