22nd February 2025
Share

TUMAKURU: SHAKTHIPEETA FOUNDATION

ಯಾವುದೇ ರಾಜಕೀಯ ಪಕ್ಷವಾಗಲಿ, ಯಾರೇ ವ್ಯಕ್ತಿ ಆಗಲಿ ರಾಜಕೀಯದಲ್ಲಿ ಪ್ರಾಮಾಣಿಕತೆ ಸಾಧ್ಯವೇ ?

ಒಂದು ಗ್ರಾಮಪಂಚಾಯಿತಿ ಸದಸ್ಯರ ಚುನಾವಣೆಗೆ ಕನಿಷ್ಠ ಒಂದು ಲಕ್ಷದಿಂದ ಖರ್ಚು ಆರಂಭವಾಗಲಿದೆ.  ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಸುಮಾರು ‘ರೂ 150 ಕೋಟಿ ಖರ್ಚು’ ಮಾಡಿರುವವರು ಇದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ.

ಯಾವುದೇ ಪಕ್ಷದಿಂದ ಚುನಾವಣೆ ಬಿ ಫಾರಂ ಪಡೆಯಲು ಕೋಟಿಗಟ್ಟಲೆ ಸುರಿಯಬೇಕಿದೆ. ಬಹುಷಃ ನಮ್ಮ ದುಡಿಮೆಯಿಂದಲೇ ಚುನಾವಣೆ ಎದುರಿಸಿದ್ದೇವೆ ಎನ್ನುವವರು ಎಷ್ಟು ಜನರಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಚಾರ. ‘ಭ್ರಷ್ಠಾಚಾರ ಒಂದು ಮೂಲಭೂತ ಹಕ್ಕಿನಂತಾಗಿದೆ.

ಟಿವಿ ನೋಡಿದಾಗ, ಪತ್ರಿಕೆ ಓದಿದಾಗ ಹೇಳಿಕೆಗಳನ್ನು ನೋಡಿದರೇ ‘ಅಳುವುದೋ ನಗುವುದೋ ನೀವೇ ಹೇಳಿ ಹಾಡು ನನೆಪಿಗೆ ಬರುತ್ತದೆ.

ಇದಕ್ಕೆ ಕೊನೆ ಎಂದು ?