15th September 2024
Share

TUMAKURU:SHAKTHI PEETA FOUNDATION

  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ನಿವೃತ್ತರಾಗುವ ಮೊದಲಿನಿಂದಲೂ ನೇತ್ರಾವತಿ ತಿರುವ ಯೋಜನೆ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನಿರಂತರವಾಗಿ ಅವರ ಜೊತೆ ಹೋರಾಟ ಮಾಡುತ್ತಾ ಬಂದಿದ್ದರು./

  1997 ರಿಂದ  ನಾನು ಅವರಿಬ್ಬರ ಜೊತೆ ಹೋರಾಟಕ್ಕೆ ಧುಮುಕಿದಾಗ, ನೂರಾರು ಜನರು ಕೈಜೋಡಿಸಿದರು. ಮಾಜಿ ಮುಖ್ಯಮಂತ್ರಿಯವರಾದ ದಿ.ಜೆ.ಹೆಚ್.ಪಟೇಲ್ ರವರಿಂದ ಆರಂಭಿಸಿ, ಈಗಿನ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರಗಿನ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರ ಜೊತೆ ಒಂದಲ್ಲ ಒಂದು ರೀತಿ ಘರ್ಷಣೆಯ ಹೋರಾಟ ನಡೆದೇ ಇದೆ.

ಬೀದಿ ಹೋರಾಟ, ನ್ಯಾಯಾಲಯದ ಹೋರಾಟ ನಡೆಸಿದ ನಂತರ ಕಡತಗಳ ಅನುಸರಣೆ ನಿರಂತರವಾಗಿ ನಡೆಯುತ್ತಲೇ ಇದೆ. ಈಗ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಹಲವಾರು ಕೆರೆಗಳ ಒಡಲು ತುಂಬಿಸಿದೆ. ಯೋಜನೆಯ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಯುತ್ತಿದೆ. ಇನ್ನೂ ಬಹಳಷ್ಟು ಕೆಲಸ ಬಾಕಿ ಇದ್ದರೂ, ಆ ಯೋಜನೆಯಿಂದ ಒಂದು ಕೆರೆ ತುಂಬಿದರೂ, ಮೊದಲ ಹಂತದ ಲೋಕಾರ್ಪಣೆಗೆ ಅರ್ಹತೆ ಪಡೆಯಲಿದೆ.

ನಾವು ಹೋರಾಟ ಆರಂಭ ಮಾಡಿದ್ದೆ ನೇತ್ರಾವತಿ ಮತ್ತು ಭಧ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನ. ನಂತರದ ಹೋರಾಟ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ಘೋಷಣೆ. ಈ ಎರಡು ಯೋಜನೆಗಳು ಜಾರಿಗೆ ಬಂದರೂ, ನೇತ್ರಾವತಿ ತಿರುವು ಬದಲಾಗಿ ಎತ್ತಿನ ಹೊಳೆ ಯೋಜನೆ ಜಾರಿಯಾಗುತ್ತಿದೆ.  ಬಹುತೇಕ ಕೆರೆಗಳನ್ನು ತುಂಬಿಸುವ ಯೋಜನೆಯಾಗಿವೆ. ಭಧ್ರಾ ಮೇಲ್ದಂಡೆ ಯೋಜನೆಯಿಂದÀ ಕೆಲವು ಪ್ರದೇಶಗಳಿಗೆ ಮೈಕ್ರೋ ಇರ್ರಿಗೇಷನ್ ಜಾರಿಯಾಗಲಿದೆ.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀoÀ ಸ್ಥಾಪಿಸುವ  ಕನಸು ನನಸಾದರೂ ನೀರೀಕ್ಷೀತ ಮಟ್ಟದಲ್ಲಿ ಫಲಕೊಡಲಿಲ್ಲ. ಆದರೂ ಸ್ವಾಭಿಮಾನ ಮತ್ತು ಪ್ರತಿಷ್ಟೆ ಬದಿಗೊತ್ತಿ ಯಶಸ್ಸು ಕಾಣುವ ಮಾರ್ಗ ಹಿಡಿಯಲೇ ಬೇಕಲ್ಲವೇ? ಇದು ಅನುಭವದ ಮಾತು.

  1. ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಭಿವೃದ್ಧಿ
  2. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯುವುದು.
  3. ತುಮಕೂರು ಜಿಲ್ಲೆಯ ಸುಸ್ಥಿರ ಅಭಿವೃದ್ಧಿ
  4. ನೀರು (ಗಂಗಾಮಾತೆ) ಮತ್ತು ವಿಶ್ವದ 108 ಶಕ್ತಿಪೀಠಗಳ ಸಂಭಂದ.

ಇವುಗಳ ಯಶಸ್ವೀ ಅನುಷ್ಠಾನಕ್ಕೆ ತುಮಕೂರು ರೀಸರ್ಚ್ ಫೌಂಡೇಷನ್ @ 2047  ಸ್ಥಾಪಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ನರವು ಪಡೆದು ಅಂತರ ರಾಷ್ಟ್ರೀಯ ಮಟ್ಟದ ಕ್ಯಾಂಪಸ್ ಆರಂಭಿಸಲು ಸಿದ್ಧತೆ ನಡೆದಿದೆ.

ಜಲಗ್ರಂಥ @ 2047  ರಚಿಸುವ ಕಾರ್ಯ ಚಾಲನೆಯಲ್ಲಿದೆ. ಹೈಟೆಕ್ ನೀರಾವರಿ ಗ್ರಂಥಾಲಯ ಮತ್ತು ನಾಲೇಡ್ಜ್ ಬ್ಯಾಂಕ್ @ 2047 ಸ್ಥಾಪಿಸುವ ಮೂಲಕ ಅಧ್ಯಯನ ಮತ್ತು ಸಂಶೋಧನೆಗೆ ಸಿದ್ಧತೆ ನಡೆದಿದೆ.

ದಿನಾಂಕ:31.08.2024 ರಂದು ಬೆಳಿಗ್ಗೆ ವಾಕ್ ಮಾಡುವಾಗ, ತುಮಕೂರು ನಗರದ ಮುಂಜಾನೆ ಬಳಗದ ಸದಸ್ಯರೊಂದಿಗೆ ನಡೆಸಿದ ಮಾತುಕತೆಯ ಪ್ರಮುಖ ಅಂಶಗಳು.

  1. ಎತ್ತಿನಹೊಳೆ ಯೋಜನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕರ್ನಾಟಕ ರಾಜ್ಯ ಸರ್ಕಾರ ಸನ್ಮಾನ ಮಾಡಲಿದೆಯಂತೆ.
  2. ಏತನೀರಾವರಿ ಯೋಜನೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡುತ್ತಿರುವ ದರ ನಿಗದಿಯಲ್ಲಿನ, ಅವೈಜ್ಞಾನಿಕ ಅಂಶಗಳ ಬಗ್ಗೆ ಅಧ್ಯಯನ ವರದಿ ಸಿದ್ಧಪಡಿಸಿ ಸರ್ಕಾರದ ಗಮನ ಸೆಳೆಯಲು ಹಲವಾರು ಪರಿಣಿತರು ಶ್ರಮಿಸುತ್ತಿದ್ದಾರಂತೆ.
  3. ಏತನೀರಾವರಿ ಯೋಜನೆಗೆ, ಸೋಲಾರ್ ವಿದ್ಯುತ್, ಪಂಪ್ಡ್ ಸ್ಟೋರೇಜ್, ರಿವರ್ಸಿಬಲ್ ಟರ್ಬೈನ್ ಸಿಸ್ಟಂ, ವಿದ್ಯುತ್ ಸ್ಟೋರೇಜ್ ಅಧ್ಯಯನ ವರದಿ ಸಿದ್ಧಪಡಿಸಿ ಸರ್ಕಾರದ ಗಮನ ಸೆಳೆಯಲು ಹಲವಾರು ಪರಿಣಿತರು ಶ್ರಮಿಸುತ್ತಿದ್ದಾರಂತೆ.
  4. ಈ ಯೋಜನೆಗಳಿಗೆ ಅನುದಾನ ಮಂಜೂರು ಮಾಡಲು, ಕೇಂದ್ರ ಸರ್ಕಾರದ ವಿಳಂಭ ಧೋರಣೆಗೆ ಕಾರಣಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹಲವಾರು ಪರಿಣಿತರು ಶ್ರಮಿಸುತ್ತಿದ್ದಾರಂತೆ.
  5. ಲಂಚಗಳ ಹಾವಳಿಯಿಂದ, ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಆಗುತ್ತಿರುವ,  ಅನ್ಯಾಯಗಳಿಗೆ ಕಾರಣ ಹುಡುಕಿ, ಸರ್ಕಾರದ ಗಮನ ಸೆಳೆಯಲು ಹಲವಾರು ಪರಿಣಿತರು ಶ್ರಮಿಸುತ್ತಿದ್ದಾರಂತೆ.

ಈ ಐದು ಅಂಶಗಳು   ಸಹ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಮತ್ತು ನಾಲೇಡ್ಜ್ ಬ್ಯಾಂಕ್ @ 2047 ಗಳಿಗೆ ಉತ್ತಮ ವಿಚಾರಗಳಾಗಿವೆ. ಆ ಬಗ್ಗೆ ಒಂದೆರಡು ಸಭೆಯ ನಂತರ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು.