12th October 2024
Share

TUMKURU:SHAKTHIPEETA FOUNDATION

ನಿಕಟ ಪೂರ್ವ ಲೊಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅವಧಿಯ ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದ ಮೇರೆಗೆ, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿವರಾಗಿದ್ದ ಶ್ರೀ ಮೃತ್ಯುಂಜಯ ಸ್ವಾಮಿರವರ ಸಲಹೆ ಮೇರೆಗೆ ಕೈಗೊಂಡ ಸಮೀಕ್ಷಾ ವರದಿ ಪ್ರಕಾರ, ತುಮಕೂರು ಜಿಲ್ಲೆಯ ಕೆರೆ-ಕಟ್ಟೆ/ ಜಲಸಂಗ್ರಹಾಗಾರಗಳ ಮಾಹಿತಿ. ಇವುಗಳ ಮಾಲೀಕರು ಯಾರು ? ಯಾರು ? ಯಾವುದು ಸತ್ಯ. ಶೋಧ ಮಾಡಲಿರುವ ತುಮಕೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು.

ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವರಾದ ಶ್ರೀ ವಿ.ಸೋಮಣ್ಣನವರ ಅಧ್ಯಕ್ಷತೆಯ ದಿಶಾ ಸಮಿತಿಯಲ್ಲಿ ಮಾಲೀಕತ್ವ ಘೋಷಣೆ ಅನುಮೋದನೆಗೆ ಚಿಂತನೆ.

  ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ನೇತೃತ್ವದಲ್ಲಿ ಒಂದೇ ದಿವಸ, ಜಿಲ್ಲಾಧ್ಯಾಂತ ಎಲ್ಲಾ ಜಲಸಂಗ್ರಹಾಗಾರಗಳ ಜಿಐಎಸ್ ಆಧಾರಿತ ಫೋಟೋಗಳನ್ನು, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಪೋರ್ಟಲ್‍ಗೆ ಅಫ್ ಲೋಡ್ ಮಾಡುವ ಮೂಲಕ, ಯಾವುದಾದರೂ ದಾಖಲೆ ಮಾಡಲು ನಿರ್ಧೇಶಕರಾದ ಶ್ರೀ ಡಾ. ರಾಜೇಶ್ ಎನ್.ಎಲ್ ರವರ ಜೊತೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿ ಶ್ರೀ ಸಲೀಂಅಹ್ಮದ್ ರವರು ಇದ್ದರು.

ಮಾಜಿ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಯವರು ಮತ್ತು ನಿಕಟ ಪೂರ್ವ ಲೊಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅವಧಿಯಲ್ಲಿ ಊರಿಗೊಂದು ಕೆರೆ ಕೆರೆಗೆ ನದಿ ನೀರು ಘೋಷಣೆಯಡಿ ನದಿ ನೀರು ಅಲೋಕೇಷನ್ ಮಾಡುವ ಮೂಲಕ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

 ಜಲಗ್ರಂಥ @ 2047 ರಚನೆ ಮತ್ತು ಕೇಂದ್ರದಲ್ಲಿ ನನೆಗುದಿಗೆ ಬಿದ್ದಿರುವÀ ಯೋಜನೆಯ ಸ್ಥಿತಿಗತಿ ಅವಲೋಕನ ಮತ್ತು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವರಾದ ಶ್ರೀ ವಿ.ಸೋಮಣ್ಣನವರ ಮತ್ತು ಸಣ್ಣ ನೀರಾವರಿ ಸಚಿವರಾದ ಶ್ರೀ ಎನ್.ಎಸ್.ಭೋಸರಾಜ್ ರವರ ನೇತೃತ್ವದಲ್ಲಿ ಮಂಜೂರು ಮಾಡಿಸಲು ಜನಜಾಗೃತಿಗಾಗಿ ರಾಜ್ಯ ಮಟ್ಟದ ‘ಜಲ ಸಮಾವೇಶ’ ನಡೆಸಲು ಚಿಂತನೆ ನಡೆದಿದೆ.

  1. ಸಣ್ಣ ನೀರಾವರಿ ಕೆರೆಗಳು : 368
  2. ಜಿಲ್ಲಾ ಪಂಚಾಯತ್ ಕೆರೆಗಳು : 999
  3. ಹೇಮಾವತಿ ವ್ಯಾಪ್ತಿಯ ಕೆರೆಗಳು : 198
  4. ಎತ್ತಿನಹೊಳೆ ವ್ಯಾಪ್ತಿಯ ಕೆರೆಗಳು : 113
  5. ಭಧ್ರಾ ಮೇಲ್ದಂಡೆ ವ್ಯಾಪ್ತಿಯ ಕೆರೆಗಳು : 115
  6. ನಗರ ಪ್ರದೇಶಗಳ ಕೆರೆಗಳು : 13
  7. ಯಾವುದೇ ಜಲಸಂಗ್ರಹಾಗಾರಗಳು ಇಲ್ಲದ ಗ್ರಾಮಗಳು : 712
  8. ಮೀಡಿಯಂ ಪ್ರಾಜೆಕ್ಟ್ಸ್ : 3
  9. ಸೆಟಿಲೈಟ್ ಇಮೇಜ್ ಪ್ರಕಾರ ಜಲಸಂಗ್ರಹಾಗಾರಗಳು : 4345
  10. ಟೋಪೋಶೀಟ್ ಪ್ರಕಾರ ಜಲಸಂಗ್ರಹಾಗಾರಗಳು : 3188