21st November 2024
Share

TUMAKLURU:SHAKTHI PEETA FOUNDATION

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ, ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಶಿಕ್ಷಣ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಸೇರಿದಂತೆ ನೀರಿಗೆ ಸಂಭಂಧಿಸಿದ ಎಲ್ಲಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ.

ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದಲ್ಲಿ ಆರಂಭಿಸಿರುವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಎಂ.ಓ.ಯು,ನಲ್ಲಿಯೇ ಜಲಗ್ರಂಥ’ ದ ಪ್ರತಿಯೊಂದು ಅಂಶಗಳನ್ನು ಹೊಂದಿದೆ.

 ಈ ಬಗ್ಗೆ ಈಗಾಗಲೇ ಅಪ್ನಾಸ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಸರ್ಕಾರಗಳ ಜೊತೆಗೆ ಸಾಕಷ್ಟು ವ್ಯವಹರಿಸಿದೆ. ನೀರಿನ ಎಲ್ಲಾ ಅಂಶಗಳ ಮಾಹಿತಿಗಳನ್ನು ಒಂದೇ ರೂಪ್ ಅಡಿಯಲ್ಲಿ ಸಂಗ್ರಹ’ ಮಾಡುವುದೇ ಪ್ರಮುಖ ಉದ್ದೇಶ.

  ರಾಜ್ಯದ 224 ವಿಧಾನಸಭಾ ಕ್ಷೇತ್ರಗಳವಾರು, ಪ್ರತಿಯೊಂದು ಗ್ರಾಮದ/ಬಡಾವಣೆಯ ಹಂತದ ಇಲಾಖಾ ಇಂಜಿನಿಯರ್‍ಗಳು, ನೀರಾವರಿ ಪರಿಣಿತರು, ನೀರಾವರಿ ಹೋರಾಟಗಾರರು, ರೈತರು ಸೇರಿದಂತೆ ಎಲ್ಲಾ ವರ್ಗದವರ ಡಾಟಾ ಬೇಸ್ ಮಾಡಿ, ಎಲ್ಲ ವರ್ಗದವರ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿದೆ.

1.            ಊರಿಗೊಂದು ಕೆರೆ – ಕೆರೆಗೆ ನದಿ ನೀರು’ ಯೋಜನೆಯು ಸರ್ಕಾರದ ಹಂತದಲ್ಲಿ ಪ್ರಗತಿಯಲ್ಲಿದ್ದು, ಅದನ್ನು ಅನುಷ್ಠಾನಗೊಳಿಸಲು ಪ್ರತಿಯೊಂದು ಗ್ರಾಮದಲ್ಲಿರುವ ಎಲ್ಲಾ ವಿಧದ ಜಲಸಂಗ್ರಹಾಗಾರ/ಕರಾಬುಹಳ್ಳ/ರಾಜಕಾಲುವೆ/ತಲಪುರಿಕೆ/ನದಿ ಉಗಮ ಸ್ಥಾನ’ ಗಳನ್ನು ಗಂಗಾಮಾತಾ ದೇವಾಲಯ’ ಎಂದು ಘೋಶಿಸಿ, ಪ್ರವಾಸಿ ಕೇಂದ್ರ’ ಗಳಾಗಿ ಅಭಿವೃದ್ಧಿ ಪಡಿಸುವುದು.

2.            ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಎಂ.ಓ.ಯು ನಲ್ಲಿ ಇರುವುದರಿಂದ, ವಿಶ್ವದ 108 ಶಕ್ತಿಪೀಠಗಳು ಮತ್ತು ಗಂಗಾಮಾತೆಗೆ (ನೀರಿಗೆ) ಇರುವ ಸಂಭಂದಗಳ’ ಬಗ್ಗೆ ಜನರಿಗೆ ಮನವರಿಕೆ ಮಾಡುವುದು.

3.            ಒಂದೊಂದು ಹನಿ ನೀರಿನ ಮಹತ್ವ ಮತ್ತು ಸದ್ಭಳಕೆಗಾಗಿ ಮತ್ತು ನೀರಿನ ಕಾನೂನುಗಳ’ ಬಗ್ಗೆ ಜನ ಜಾಗೃತಿ ಮೂಡಿಸುವುದು.

4.            ವಿವಿಧ ದೇಶಗಳಲ್ಲಿ ನೀರಿನ ಮಹತ್ವದ ಬಗ್ಗೆ ನಡೆಸಿರುವ ಅಧ್ಯಯನ ವರದಿಗಳ ಡಾಟಾ ಬೇಸ್.

5.            ಪ್ರಪಂಚದಲ್ಲಿನ ನೀರಿನ ಸಂಶೋದಕ ಜ್ಞಾನಿಗಳ ಡಾಟಾ ಬೇಸ್.

6.            ಸರ್ವಧರ್ಮಗಳಲ್ಲಿ ನೀರಿಗೆ ನೀಡಿರುವ ಸ್ಥಾನಮಾನಗಳ ಡಾಟಾ ಬೇಸ್.

7.            ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಯ ನೀರಿನ ಸದ್ಭಳಕೆಯ ಜ್ಞಾನಿಗಳ ಡಾಟಾ ಬೇಸ್.

8.            ರಾಜ್ಯದ ಪ್ರತಿಯೊಂದು ಗ್ರಾಮ/ಬಡಾವಣೆಯ ಜಲಸಂಗ್ರಹಾಗಾರಗಳ  ಡಾಟಾ ಬೇಸ್.

9.            ಆಯಾ ಗ್ರಾಮಗಳ/ಬಡಾವಣೆಯ ವಿದ್ಯಾರ್ಥಿಗಳ ನೇತೃತ್ವದ ರೀಸರ್ಚ್ ಫೌಂಡೇಷನ್ ಮೂಲಕ ನಿರ್ವಹಣೆ ಮೌಲ್ಯಮಾಪನ ಮಾಡಲು ಇಂಟರ್ನಶಿಪ್ ಮತ್ತು ಭಾಗವಹಿಸುವಿಕೆ ಪತ್ರ ನೀಡುವುದು.

10.         ಆಯಾ ವ್ಯಾಪ್ತಿಯ ಬಯೋಡೈವರ್ಸಿಟಿ ಮ್ಯಾನೇಜ್ ಕಮಿಟಿಗಳ ಮೌಲ್ಯಮಾಪನ.

11.         ಆಯಾ ವ್ಯಾಪ್ತಿಯ ಕೆರೆ ಸಂಘಗಳ ಮೌಲ್ಯಮಾಪನ.

12.         ನರೇಗಾ ಬಳಸಿಕೊಂಡು ‘ಬಿಟ್ಟಿ ಆಳು ಮತ್ತು ನೀರಘಂಟಿ’ ಸ್ಥಾನದ ಮರುಸ್ಥಾಪನೆ. 

13.         ಆಯಾ ಗ್ರಾಮಗಳ/ಬಡಾವಣೆಯ ವ್ಯಾಪ್ತಿಯ ಕರಾಬುಹಳ್ಳಗಳ  ಡಾಟಾ ಬೇಸ್.

14.         ಆಯಾ ಗ್ರಾಮದ ಜಲಸಂಗ್ರಹಾಗಾರಗಳ ಸಂರಕ್ಷಣೆಯನ್ನು, ಆಯಾ ವ್ಯಾಪ್ತಿಯ ಅನಿವಾಸಿಗ¼, ವಿದ್ಯಾರ್ಥಿಗಳ, ಮಹಿಳಾ ಸಂಘಟನೆಗಳು ನಿರ್ವಹಣೆ ಮಾಡಿ, ಪ್ರತಿ ವರ್ಷ ‘ಗಂಗಾಪೂಜೆ’ ಮಾಡುವುದು.

15.         ಜಲಸಂಗ್ರಹಾಗಾರಗಳ ಅಕ್ಕ-ಪಕ್ಕದಲ್ಲಿ ಆಯಾ ವ್ಯಾಪ್ತಿಯಲ್ಲಿ ಬೆಳೆಯುವ ಎಲ್ಲಾ ಜಾತಿಯ ಮರಗಿಡಗಳನ್ನು ಬೆಳೆಸಿ ನಿರ್ವಹಣೆ ಮಾಡಲು ಹಸಿರು ಗ್ರಾಮ/ಬಡಾವಣೆ ವಿಶೇಷ ಯೋಜನೆ’ ರೂಪಿಸುವುದು ಅಗತ್ಯವಾಗಿದೆ.

 ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಹಂತದ ವಿದ್ಯಾರ್ಥಿಗಳನ್ನು ಮತ್ತು ಅನಿವಾಸಿ’ ಗಳನ್ನು ಸಕ್ರೀಯವಾಗಿ ಬಳಸಿಕೊಳ್ಳಲು, ಕಹಿ-ಸಿಹಿ ಅನುಭವಗಳ ಆಧಾರ’ದಲ್ಲಿ, ಪಾರದರ್ಶಕವಾದ ರೂಪುರೇಷೆ ಸಿದ್ಧಪಡಿಸಲು, ರಾಜ್ಯ ಮಟ್ಟದ ಸಮಾವೇಶದ ಅಗತ್ಯವಿದೆ.

 ಯೋಜನೆಯ ಕನಸುದಾರರು ಕಳೆದ 36 ವರ್ಷಗಳ ಕಾಲ ಸುಧೀರ್ಘವಾಗಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಮತ್ತು ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಒಡನಾಟದಲ್ಲಿ ನಿರಂತರವಾಗಿ ಶ್ರಮಿಸಿರುವ ದಾಖಲೆಗಳು ಮತ್ತು 2047 ರವವರೆಗೆ ಶ್ರಮಿಸಲು ಉದ್ದೇಶಿರುವ ರೂಪುರೇಷೆ ಜೊತೆಗೆ, ‘ನಾವು ಹೇಳಿದ ಹಾಗೆ ಮಾಡವುದಲ್ಲ- ನಾವು ಮಾಡಿದ ಹಾಗೆ ನೀವೂ ಮಾಡಿ’ ಎಂಬ ಘೋಷಣೆಯೊಂದಿಗೆ, ಶಕ್ತಿಪೀಠ ಕ್ಯಾಂಪಸ್’ ನಲ್ಲಿ ಸ್ಥಾಪಿಸುತ್ತಿರುವ ಗ್ರೀನ್ ಕಾರಿಡಾರ್ – ಜಲ ಭಾರತ – ನದಿಜೋಡಣೆ ಪ್ರಾತ್ಯಕ್ಷಿಕೆ- ಜಲ ಮ್ಯೂಸಿಯಂ’ ಪರಿಕಲ್ಪನೆ ಬಗ್ಗೆ ಚರ್ಚೆ ಅಗತ್ಯವಿದೆ.

ಈ ಸಮಾವೇಶದಲ್ಲಿ ಭಾಗವಹಿಸಲು ಮತ್ತು ಜಲಗ್ರಂಥ ರೂಪುರೇಗಳ ಬಗ್ಗೆ ಅಮೂಲ್ಯವಾದ ಸಲಹೆ ನೀಡಲು ಮನವಿ.