28th January 2025
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಅಭಿವೃದ್ದಿ ರೆವೂಲ್ಯೂಷನ್ ಫೋರಂ ಆಗಿನ ಕುಲಪತಿಗಳಾದ ಶ್ರೀ ಎ.ಹೆಚ್.ರಾಜಸಾಬ್‍ರವರು ಮತ್ತು ಕುಲಸಚಿವರಾದ ಶ್ರೀ ಎಂ.ವೆಂಕಟೇಶ್ವರಲುರವರ ವಿಶೇಷ ಆಸಕ್ತಿಯೊಂದಿಗೆ, ಒಡಂಬಡಿಕೆ ಮಾಡಿಕೊಂಡು ‘ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ’ ಸ್ಥಾಪಿಸಲು ದಿನಾಂಕ:16.03.2017 ರಂದು ಫೋರಂ ಪತ್ರ ನೀಡಲಾಗಿತ್ತು.

ದಿನಾಂಕ:23.03.2017 ರಂದು ವಿಶ್ವ ಜಲ ದಿನಾಚರಣೆ ದಿವಸ  ನಡೆದ ಶೈಕ್ಷಣಿಕ ಮಂಡಳಿ ಮತ್ತು  ಸಿಂಡಿಕೆಟ್’ ಸಭೆಯಲ್ಲಿ ಅನುಮೋದನೆ ಮಾಡಿದ್ದರು,  ಅಭಿವೃದ್ದಿ ರೆವೂಲ್ಯೂಷನ್ ಫೋರಂ ಪರವಾಗಿ, ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಆಗಿನ ಮುಖ್ಯಮಂತ್ರಿಯವರಾಗಿದ್ದ ಶ್ರೀ ಸಿದ್ಧರಾಮಯ್ಯನವರು ಮತ್ತು ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ಎಂ.ಬಿ.ಪಾಟೀಲ್ ರವರು,   ಉನ್ನತ ಅಧಿಕಾರಿಗಳಾದ ಶ್ರೀ ಎಲ್.ಕೆ.ಅತೀಕ್ ವರವರು, ಶ್ರೀ ರಾಕೇಶ್ ಸಿಂಗ್ ರವರು, ಶ್ರೀ ವೈ.ಎಸ್.ಪಾಟೀಲ್ ರವರು, ಶ್ರೀ ಗುರುಪಾದಸ್ವಾಮಿಯವರು, ಶ್ರೀ ಕೆ.ಜೈಪ್ರಕಾಶ್ ರವರ ವಿಶೇಷ ಆಸಕ್ತಿಯಿಂದ ದಿನಾಂಕ:25.07.2017  ರಂದು ವಿಶ್ವೇಶ್ವರಯ್ಯ ಜಲನಿಗಮದಿಂದ ರೂ 50 ಲಕ್ಷ ಅನುದಾನ’ ನೀಡಿದ್ದರು. ಅದಕ್ಕೆ ತುಮಕೂರು ವಿಶ್ವ ವಿದ್ಯಾನಿಲಯ ರೂ 50 ಲಕ್ಷ ಸೇರಿಸಿ ಒಂದು ಕೋಟಿಯನ್ನು ಠೇವಣೆ ಮಾಡಿದ್ದಾರೆ.

ನಂತರ ಕುಲಪತಿಗಳಾಗಿ ಬಂದ ಶ್ರೀ ವೈ.ಎಸ್.ಸಿದ್ದೇಗೌಡರವರು ಏಕೋ, ಏನೋ ಆಸಕ್ತಿ ವಹಿಸಲಿಲ್ಲ. ನಾನು ತಲೆ ಕೆಡಿಸಿಕೊಳ್ಳಲಿಲ್ಲ, ವಿಶ್ವದ 108 ಶಕ್ತಿಪೀಠಗಳ ಆದೇಶದಂತೆ, ಶಕ್ತಿಪೀಠ ಫೌಂಡೇಷನ್’ ಸ್ಥಾಪಿಸಿ, ನನ್ನ ಕನಸುಗಳನ್ನು ನನಸು ಮಾಡಲು ಆರಂಭಿಸಿದೆ. 

  ಈಗಿನ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರು ಮತ್ತು ಕುಲಸಚಿವರಾದ ಶ್ರೀಮತಿ ಜಂ.ಜಂ ರವರ ತಂಡ ಟೊಂಕಕಟ್ಟಿ ನಿಂತು ಕೊಂಡು, ಈ ಪೀಠದ ಮೂಲಕ ವಿಶ್ವದ ಗಮನ ಸೆಳೆಯುವ ಕೆಲಸ ಮಾಡಲೇ ಬೇಕು ಎಂಬ ಕನಸು ಕಾಣುತ್ತಿದ್ದಾರೆ.

  ದಿನಾಂಕ:02.10.2023 ರಂದು ತುಮಕೂರು ರೀಸರ್ಚ್ ಫೌಂಡೇಷನ್ @ 2047’ ರಚಿಸಿದ್ದು ಬಹಳ, ಉತ್ತಮವಾದ ಕೆಲಸ ಮಾಡುತ್ತಿದೆ. ಪ್ರಥಮ ವಾರ್ಷಿಕ ಸಭೆ ಅಂಗವಾಗಿ ವಿಶಿಷ್ಠವಾದ ಕಾರ್ಯಕ್ರಮ ರೂಪಿಸಲು ಸಜ್ಜಾಗಿದ್ದೇವೆ.

ದಿನಾಂಕ:24.07.2024 ರಂದು ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಅಭಿವೃದ್ದಿ ರೆವೂಲ್ಯೂಷನ್ ಫೋರಂ ಮಾಡಿಕೊಂಡಿರುವ ಎಂ.ಓ.ಯು ಗೆ ಸಹಿ ಮಾಡಲಾಗಿದೆ.

ದಿನಾಂಕ:04.09.2024  ರಂದು ಶೈಕ್ಷಣಿಕ ಮಂಡಳಿ ಮತ್ತು  ಸಿಂಡಿಕೇಟ್ ಸಭೆಯಲ್ಲಿ ಎಂ.ಓ.ಯು ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀoದ ಸಲಹಾ ಸಮಿತಿಗೆ ಅನುಮೋದನೆ ಮಾಡಿದ್ದಾರೆ. ಈ ಪರಿಕಲ್ಪನಾ ವರದಿಗಳಿಗೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಂಡು, ನಿಯಮ ಬದ್ಧವಾಗಿ, ಕಾರ್ಯ ನಿರ್ವಹಿಸಲು ಮುಂದಾಗಿದ್ದೇವೆ.

ದಿನಾಂಕ:01.08.2024 ರಂದು ರಚಿಸಿರುವ  ಸಲಹಾ ಸಮಿತಿಯ ಪ್ರಥಮ ಸಭೆ ಮುಂದಿನ ವಾರ ನಡೆಯಲಿದೆ. ಮುಂದಿನ 2047 ರ ವರೆಗಿನ ನಮ್ಮ ಕನಸುಗಳ/ಪರಿಕಲ್ಪನೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ.

ಜಿಲ್ಲೆಯ, ರಾಜ್ಯದ, ದೇಶದ, ವಿಶ್ವದ ಸಾವಿರಾರು ಜನರು ನಮ್ಮೊಂದಿಗೆ ಕೈಜೋಡಿಸಲು ಅವಕಾಶವಿದೆ. ಈ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು, ನಮ್ಮ ಜಿಲ್ಲೆಯ ವಿಧ್ಯಾರ್ಥಿ/ವಿದ್ಯಾರ್ಥಿನಿ’ ಯವರಿಂದ ಸಿದ್ಧಪಡಿಸಿ, ಸರ್ಕಾರಗಳಿಗೆ ಸಲ್ಲಿಸಲು ಯೋಚಿಸಿದ್ದೇವೆ. 

ಅಭಿವೃದ್ದಿ ರೆವೂಲ್ಯೂಷನ್ ಫೋರಂ ಪೋóಷಕರಾದ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತಾನು ಇರುವವರೆಗೂ ಶ್ರೀ ಸಾಯಿಬಾಬಾ ಸೇವಾ ಸಮಿತಿಯಿಂದ ಅಧ್ಯಯನ ಪೀಠದ ಎಲ್ಲಾ ಸಭೆ ಸಮಾರಂಭಗಳಿಗೆ, ಅನ್ನ ದಾಸೋಹ’ ಮಾಡಿಸುತ್ತೇನೆ ಎಂದು ಈಗಾಗಲೇ ಭರವಸೆ ನೀಡಿದ್ದಾರೆ.

ಇದೇ ರೀತಿ ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳ, ಸಂಘಸಂಸ್ಥೆಗಳ, ಕೈಗಾರಿಕೆಗಳ ಮತ್ತು ಸಾರ್ವಜನಿಕರ ಸಹಕಾರದಿಂದ ವಿಧ್ಯಾರ್ಥಿಗಳ ನೇತೃತ್ವದಲ್ಲಿ’ ಮುಂದುವರೆಸಲು ಚಿಂತನೆ ನಡೆಸಲಾಗಿದೆ. ಯಾರ ಬೇಕಾದರೂ, ಯಾವುದೇ ರೀತಿಯ ಸೇವೆ ಮಾಡಬಹುದು,