TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಏರ್ ಪೋರ್ಟ್-2 ಸ್ಥಾಪಿಸುವ ಸಂಬಂದ ಆಕ್ಟೋಬರ್ 2 ನೇ ವಾರ 19 ಜಿಲ್ಲೆಗಳ ಚೇಂಬರ್ಸ್ ಆಫ್ ಕಾಮರ್ಸ್ ಪ್ರತಿನಿಧಿಗಳ ಸಭೆಯನ್ನು ತುಮಕೂರಿನಲ್ಲಿ ನಡೆಸಲು ನಿರ್ಣಯ ಕೈಗೊಂಡಿದ್ದಾರೆ.
ದಿನಾಂಕ:19.09.2024 ರಂದು ತುಮಕೂರಿನ ಚೇಂಬರ್ಸ್ ಆಫ್ ಕಾಮರ್ಸ್ ಕಚೇರಿಗೆ ಭೇಟಿ ನೀಡಿ ಸಮಾಲೋಚನಾ ಸಭೆ ನಡೆಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ವಿವಿಧ ಕಾರ್ಯಕ್ರಮವನ್ನು ಏರ್ಪಡಿಸಲು ಚಿಂತನೆ ನಡೆಸಲಾಗಿದೆ.
ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಟಿ.ಜೆ. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದು ತುಮಕೂರು ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಪ್ರಸ್ತಾಪವಿದ್ದು ಆದರೆ ಪ್ರಸ್ತುತ ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ವಿಚಾರವು ಮಾಧ್ಯಮಗಳಲ್ಲಿ ಪ್ರಕಟಣೆಗೊಳ್ಳುತ್ತಿದೆ.
ಆದರೆ ತುಮಕೂರು ಪ್ರಮುಖ 20 ಜಿಲ್ಲೆಗಳಿಗೆ ಹಾದು ಹೋಗುವ ಹೆಬ್ಬಾಗಿಲಾಗಿದ್ದು ವಿಸ್ತಾರವಾದ ವಸಂತ ನರಸಾಪುರದಲ್ಲಿ ಸುಮಾರು 14 ಸಾವಿರ ಎಕ್ಕರೆ ಬೃಹತ್ ಕೈಗಾರಿಕಾ ಪ್ರದೇಶವಿದ್ದು ಈ ಕೈಗಾರಿಕಾ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಈಗಾಗಲೇ ಒಂದು ಡ್ರಾಫ್ಟ್ ಕೂಡ ಮಾಡಿದ್ದು , ಇಲ್ಲಿ ಸ್ಥಾಪಿಸಿದರೆ ವ್ಯಾಪಾರ ವ್ಯವಹಾರ, ಕೈಗಾರಿಕಾ ಅಭಿವೃದ್ಧಿ, ಅಂತರಾಷ್ಟ್ರೀಯ ವ್ಯಾಪಾರದ ಅಭಿವೃದ್ಧಿ, ಹಾಗೂ ಸರ್ಕಾರಕ್ಕೆ ಹೆಚ್ಚಿನ ರೆವೆನ್ಯೂ ಬಂದಂತಾಗುತ್ತದೆ ಎಲ್ಲಾದಕ್ಕಿಂತ ಮೊದಲು ಸುಮಾರು 20ಕ್ಕೂ ಅಧಿಕ ಜಿಲ್ಲೆಯವರೆಗೆ ಹತ್ತಿರವಾಗುತ್ತದೆ ,
ಈ ಸಭೆಯಲ್ಲಿ ಕುಂದರನಹಳ್ಳಿ ರಮೇಶ್ , ಟಿ ಟಿ ಸತ್ಯನಾರಾಯಣ ಉಪಾಧ್ಯಕ್ಷರು , ಡಿಆರ್ ಮಲ್ಲೇಶ್ ಅ*** ಕಾರ್ಯದರ್ಶಿಗಳು , ಕೊರಂದವಾಡ ಜಂಟಿ ಕಾರ್ಯದರ್ಶಿಗಳು , ಸದಾಶಿವ್ ಆರ್ ಅಮಿನ್ , ಆನಂದ್ , ಮೋಹನ್ , ಶ್ರೀನಿವಾಸ್ , ಮಾಜಿ ಅಧ್ಯಕ್ಷರುಗಳಾದ ಟಿಆರ್ ಲೋಕೇಶ್ ಹಾಗೂ ಶ್ರೀನಾಥ್ ಮತ್ತು ಇತರರು ಹಾಜರಿದ್ದರು ಸಭೆಯ ತೀರ್ಮಾನದಂತೆ ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸುವಂತೆ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಟಿ ಜೆ ಗಿರೀಶ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.