20th December 2024
Share

TUMAKURU:SHAKTHIPEETA FOUNDATION

  ತುಮಕೂರು ನಗರದ 11 ನೇ ವಾರ್ಡ್ ಗಂಗಸಂದ್ರದ ಅಮಾನಿಕೆರೆ, ರಾಷ್ಟ್ರದ ಗಮನ ಸೆಳೆಯಲಿದೆ. ಕೆರೆ ಹೊಂದಿಕೊಂಡಂತೆ, ತುಮಕೂರು ವಿಶ್ವ ವಿದ್ಯಾನಿಲಯದ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಮತ್ತು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಂಶೋಧನಾ ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ತಲೆ ಎತ್ತಲಿದೆ.

ಈ ಕೆರೆಗೆ ವಿಶ್ವದ ಸುಮಾರು 65 ದೇಶಕ್ಕಿಂತ ಹೆಚ್ಚಿನ ದೇಶಗಳ ಪಕ್ಷಿಗಳು ಬರುತ್ತವೆ ಎಂದು ಪಕ್ಷಿಪ್ರೇಮಿಗಳು ಹೇಳುತ್ತಾರಂತೆ. ಕ್ಯಾಮರಾ ಹಿಡಿದು ಕೆರೆಯಲ್ಲಿ ಪೋಟೋಗ್ರಫಿಗಾಗಿ ಶಬರಿಯಂತೆ ಕಾದು ಕುಳಿತಿರುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಈ ಗ್ರಾಮ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಹುಟ್ಟೂರು. ಕಳೆದ 3-4 ವರ್ಷಗಳ ಹಿಂದೆಯೇ ಪಕ್ಷಿಧಾಮದ ಕನಸು ಮೊಳಕೆ ಒಡೆದಿತ್ತು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠಕ್ಕೆ 30 ಗುಂಟೆ ಜಮೀನನ್ನು ಜಿಲ್ಲಾಡಳಿತ ಕಾಯ್ದಿರಿಸಿತ್ತು. ಆದರೇ ವಿವಿಧ ಕಾರಣಗಳಿಂದ ವಿಳಂಭವಾಗಿತ್ತು. ಕೆರೆಯ ಕಾಮಗಾರಿಯೂ ಪ್ರಗತಿಯಲ್ಲಿದೆ.

ದಿನಾಂಕ:20.09.2024 ರಂದು ತುಮಕೂರು ರೀಸರ್ಚ್ ಫೌಂಡೇಷನ್ @ 2047 ನಿರ್ದೇಶಕರಾದ ಡಾ. ಪ್ರೊ: ಪರುಶರಾಮರವರು ಮತ್ತು ನಾನು ಕೆರೆ ಪ್ರದಕ್ಷಿಣೆ ಹಾಕಿದೆವು. ನಂತರ ಗಂಗಸಂÀದ್ರ ಪಟೇಲ್ ಶ್ರೀ ಜಿ.ಎಸ್.ಚಂದ್ರಶೇಖರ್ (ರೂಪೇಶ್) ರವರ ಮನೆಯಲ್ಲಿ ತಿಂಡಿ ತಿಂದೆವು.

ಶೇಶಾದ್ರಿ ಕಾಲೇಜು ಪ್ರಾಂಶುಪಾಲರಾದ ಡಾ.ಜಗದೀಶ್ ಜಿ.ಟಿ ರವರು ಮತ್ತು  ಎನ್.ಎಸ್.ಎಸ್ ಕೋ ಆರ್ಡಿನೇಟರ್ ಮನೋಹರ್ ರವರ ಜೊತೆ ಸಮಾಲೋಚನೆ ಸಭೆ ನಡೆಸಲಾಯಿತು.

ಸಭೆಯ ನಂತರದ ನನ್ನ ಸಲಹೆಗಳು.

1.            ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ನೇತೃತ್ವದಲ್ಲಿ ‘ಪಕ್ಷಿಧಾಮ’ ಸಮಿತಿ ರಚಿಸುವುದು. ಈಗಾಗಲೇ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

2.            ಕೆರೆಯ ಸುತ್ತಲೂ ಇರುವ ರೈತರ ಸಮಿತಿ ರಚಿಸುವುದು.

3.            ಗಂಗಸಂದ್ರ ಗ್ರಾಮದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗಂಗಸಂದ್ರ ರೀಸರ್ಚ್ ಫೌಂಡೇಷನ್ @ 2047 ರಚಿಸುವುದು.

4.            ಸಣ್ಣ ನೀರಾವರಿ, ಹೇಮಾವತಿ, ತುಮಕೂರು ಸ್ಮಾರ್ಟ್‍ಸಿಟಿ, ತುಮಕೂರು ಮಹಾನಗರ ಪಾಲಿಕೆಯ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯ  ಮತ್ತು ಅಗತ್ಯ ಇಲಾಖೆಗಳ ಜೊತೆ ಸಮಾಲೋಚನೆ ನಡೆಸುವುದು.

5.            ವಿಶ್ವದ್ಯಾಂತ ಯಾವ ದೇಶದ ಪಕ್ಷಿಗಳು ಬರುತ್ತಿವೆಯೋ, ಆ ದೇಶದ ಪ್ರತಿನಿಧಿಗಳನ್ನು ಒಳಗೊಂಡಂತೆ ಪಕ್ಷಿಪ್ರೇಮಿಗಳ ನಾಲೇಡ್ಡ್ ಬ್ಯಾಂಕ್ ರಚಿಸುವುದು.

6.            ಶೇಷಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ, ಒಬ್ಬರು ಇಂತಿಷ್ಟು ಪ್ರದೇಶದಲ್ಲಿ, ಇಂತಹ ಗಿಡ ಹಾಕಬೇಕು ಎಂಬ ಜಿಐಎಸ್ ಲೇಯರ್ ನಿಗದಿ ಗೊಳಿಸಿ ದತ್ತು ನೀಡುವುದು.

7.            ಪಕ್ಷಿಧಾಮ ಮತ್ತು ಡಿಜಿಟಲ್ ಗ್ರಂಥಾಲಯದ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವುದು.

8.            ನಾಮಫಲಕಗಳನ್ನು ಹಾಕುವುದು.

9.            ಕಟ್ಟಡ ನಿರ್ಮಾಣ ಆಗುವವರೆಗೂ ತಾತ್ಕಾಲಿಕ ಕಚೇರಿ ಆರಂಭಿಸುವುದು.

ಶೀಘ್ರದಲ್ಲಿ ಶೇಷಾದ್ರಿ ಕಾಲೇಜಿನಲ್ಲಿ ಪ್ರಥಮ ಸಭೆ ಆಯೋಜಿಸುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ. ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲು ರವರ ಜೊತೆಯು ಚರ್ಚಿಸಲಾಗಿದೆ.

ಆಸಕ್ತರು ಕೈಜೋಡಿಸಬಹುದು

ಕುಂದರನಹಳ್ಳಿ ರಮೇಶ್

ಅಧ್ಯಕ್ಷರು, ಅಭಿವೃದ್ಧಿ ರೆವೂಲ್ಯೂಷನ್ ಫೋರಂ.