16th October 2024
Share

TUMAKURU:SHAKTHIPEETA FOUNDATION

 ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 14 ಜನ ರಾಜ್ಯಸಭಾ ಸದಸ್ಯರುಗಳು, ಅವರ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಯಾವ, ಯಾವ ಯೋಜನೆಗಳನ್ನು ಮಂಜೂರು ಮಾಡಿಸಲು ಪ್ರಯತ್ನ ಮಾಡುತ್ತಿದ್ದಾರೆ, ಎಂಬ ಮಾಹಿತಿ ಸಂಗ್ರಹಿಸುವ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಿರುವ, ತುಮಕೂರು ರೀಸರ್ಚ್ ಫೌಂಡೇಷನ್ @ 2047, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮಹತ್ವದ ಯೋಜನೆಗೆ, ದಿನಾಂಕ:21.09.2024 ರಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಗೋವಿಂದ ಎಂ. ಕಾರಜೋಳರವರನ್ನು, ಚಿತ್ರದುರ್ಗದ ಅವರ ಮನೆಯಲ್ಲಿ  ಭೇಟಿ ಮಾಡಿ ಸಮಾಲೋಚನೆ ನಡೆಸುವ ಮೂಲಕ ಚಾಲನೆ ನೀಡಲಾಯಿತು.

 ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಮಧ್ಯಂತರ ವರದಿಯನ್ನು ನೀಡಲಾಯಿತು. ಅವರು ಸಂಪೂರ್ಣವಾಗಿ ಓದಿದ ನಂತರ, ಮುಂದಿನ ಸಭೆಯ ವೇಳೆಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಿವಿಧ ಯೋಜನೆಗಳ ಸಂಪೂರ್ಣ ಟಿಪ್ಪಣೆಗಳೊಂದಿಗೆ ಚರ್ಚೆ ನಡೆಸಲು ನಿರ್ಧಾರ ಮಾಡಲಾಯಿತು. 

 ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಯೋಜನೆಗಳೇ ಅಲ್ಲ, ಕರ್ನಾಟಕ ರಾಜ್ಯದ ಯಾವುದೇ ಒಂದು ಯೋಜನೆ ಮಂಜೂರು ಮಾಡಿಸಲು ಸಹಕಾರ ನೀಡುವ ಭರವಸೆ ನೀಡಿದ್ದಾರೆ.

ಕೆಳಕಂಡ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

1.ತುಮಕೂರು- ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್-2’ ನಿರ್ಮಾಣ.

2.ತುಮಕೂರು-ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಲಿಕಾನ್ ಸಿಟಿ ಆಪ್ ಇಂಡಿಯಾ’ ನಿರ್ಮಾಣ..

3.ತುಮಕೂರು-ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲಿಂಗನಮಕ್ಕಿ ನೀರು ಸಂಗ್ರಹ ಮಾಡುವ ಮೂಲಕ  ಜಾಲಗುಣಿ ವಾಟರ್ ಬ್ಯಾಂಕ್’ ನಿರ್ಮಾಣ.

4.ತುಮಕೂರು-ಚಿತ್ರದುರ್ಗ ಜಿಲ್ಲೆಯ ಜಮೀನುಗಳಲ್ಲಿ ಕರ್ನಾಟಕ ಹೆರಿಟೇಜ್ ಹಬ್’ ನಿರ್ಮಾಣ.

5.ತುಮಕೂರು-ಚಿತ್ರದುರ್ಗ ರೈಲ್ವೇ ಮಾರ್ಗ.

6.ಭಧ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ‘ರೂ 5300 ಕೋಟಿ’ ಅನುದಾನ ಬಿಡುಗಡೆ.

7.ವಾಣಿವಿಲಾಸ ಡ್ಯಾಂ ವಾಟರ್ ಬ್ಯಾಂಕ್’ ಆಗಿ ಘೋಷಣೆ.

8.ವಾಣಿವಿಲಾಸ ಕಾಲುವೆ ಅಕ್ಕ-ಪಕ್ಕ ಇರುವ ವಿಶ್ವೇಶ್ವರಯ್ಯ ಜಲನಿಗಮದ ಜಮೀನನಲ್ಲಿ ಪಿಪಿಪಿ ಯೋಜನೆಯಡಿ ಗ್ರೀನ್ ಕಾರಿಡಾರ್ ಮತ್ತು ಅಗ್ರಿಟೂರಿಸಂ’ ನಿರ್ಮಾಣ.

9.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಧ್ಯಯನ ಪೀಠ ಸ್ಥಾಪನೆ.

                                             -ಕುಂದರನಹಳ್ಳಿ ರಮೇಶ್