26th June 2025
Share

TUMAKURU:SHAKTHIPEETA FOUNDATION

  ಶಕ್ತಿಪೀಠ ಕ್ಯಾಂಪಸ್‌ನಲ್ಲಿ, ಒಂದು ಎಕರೆ ಭೂಮಿಯ ಮೇಲೆ ಭಾರತ ನಕ್ಷೆ ಸಿದ್ಧಪಡಿಸಿ, ಭಾರತದ ಅಕ್ಕ-ಪಕ್ಕ ಇರುವ 7 ದೇಶಗಳ ಶಕ್ತಿಪೀಠಗಳನ್ನು ಭೂಮಿಯ ಮೇಲೆ ಗುರುತು ಮಾಡುವ ಕೆಲಸ ಮುಗಿದಿದೆ. ತಪ್ಪು ಒಪ್ಪುಗಳನ್ನು ಸರಿಪಡಿಸುವ ಕಾರ್ಯ ಆರಂಭವಾಗಿದೆ. ಇದು ಸಂಶೋಧನೆಯ 2 ನೇ ಹಂತ ಎಂದರೆ ತಪ್ಪಾಗಲಾರದು.

 ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಲ್ಲಿ 108 ಶಕ್ತಿಪೀಠಗಳ ಗೆಜಿಟ್ ನೋಟಿಫೀಕೇಷನ್ ಆದ ಮೇಲೆ ಪಕ್ಕಾ ಆಗಲಿದೆ. ಇದನ್ನು ಪಕ್ಕಾ ಮಾಡಲು ಸಂಶೋಧನೆ ಮಾಡುವಾಗ ಲೈವ್ ಸಂಶೋಧನೆ ಆಗಲಿ ಎಂಬ ದೃಷ್ಠಿಯಿಂದ  ಕೆಲಸ ಆರಂಭಿಸಲಾಗಿದೆ.

ಶಕ್ತಿಪೀಠದ ವಿಳಾಸ, ಫೋಟೋ, ಸ್ಥಳದಲ್ಲಿ ಬಿದ್ದ ಸತಿಯ ಅಂಗದ ನಕ್ಷೆ ಮತ್ತು ಮಾಹಿತಿಯುಳ್ಳ ನಾಮಫಲಕ, ಸೋಲಾರ್ ಲೈಟ್ ಹಾಕಲು ಚಿಂತನೆ ನಡೆಸಲಾಗಿದೆ. ದಿನಾಂಕ:01.06.2025 ನೇ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಪೀಣ್ಯ 2 ನೇ ಹಂತದ, ತಿಗಳರಪಾಳ್ಯದಲ್ಲಿರುವ ಮಾರುತಿ ಆಟೋ ಕಾಂಪೋನೆಟ್ಸ್ ಹಾಗೂ ೫ ಎಸ್ ಕೃಷಿ ಆಶ್ರಮದ ಮಾಲೀಕರಾದ ಶ್ರೀ ಸಿದ್ಧಲಿಂಗಪ್ಪನವರ ತಂಡದ ಜೊತೆ ಸಮಾಲೋಚನೆ ಮಾಡಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಅವರು ನನ್ನ ಪರಿಕಲ್ಪನೆಯ ಶಕ್ತಿಪೀಠ ನಾಮಫಲಕ ವಿತ್ ಸೋಲಾರ್ ಲೈಟ್ ಡಿಸೈನ್ ಮಾಡಿ, ಕೊಟೇಷನ್ ನೀಡಲು ಒಪ್ಪಿರುತ್ತಾರೆ.

ಇದೇ ರೀತಿ ನಮ್ಮ ಇ – ಪೇಪರ್ ಶಕ್ತಿಪೀಠ ಓದುಗರು ಯಾರಾದರೂ, ಶಕ್ತಿಪೀಠ ನಾಮಫಲಕ ವಿತ್ ಸೋಲಾರ್ ಲೈಟ್ ಮಾಡುವವರಿದ್ದರೆ ಸಂಪರ್ಕಿಸಲು ಮನವಿ. ಸುಮಾರು 200 ಕ್ಕೂ ಹೆಚ್ಚು ನಾಮಫಲಕಗಳ ಅಗತ್ಯ ನಮ್ಮ ಶಕ್ತಿಪೀಠ ಕ್ಯಾಂಪಸ್‌ಗೆ ಇದೆ.