TUMKURU:SHATHIPEETA FOUNDATION
ಬಡವರು ಬಡವರಾಗಿಯೇ ಇರಲು ಅಲ್ಲ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗಿಲ್ಲ
ಅವರ ಜೀವನ ಶೈಲಿ ಬದಾಲಾಯಿಸುವುದು ಸ್ಮಾರ್ಟ್ ಸಿಟಿ ಕನಸು: ಜಿ.ಎಸ್.ಬಸವರಾಜ್
ದಿಶಾ ಸಮಿತಿ ರಚಿಸಿರುವ ತುಮಕೂರು ಜಿಐಎಸ್ ಪದಾಧಿಕಾರಿ, ಕೇಂದ್ರ ಸರ್ಕಾರದ ಎನ್.ಐ.ಸಿ, ತುಮಕೂರು ಮಹಾನಗರಪಾಲಿಕೆ ಆಯುಕ್ತ, ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ, ತುಮಕೂರು ಟೂಡಾ ಆಯುಕ್ತ ಸಭೆಗೆ ಗೈರಾಗಿರುವ ಬಗ್ಗೆ ಸಂಸದ ಶ್ರೀ ಜಿ.ಎಸ್.ಬಸವರಾಜ್ ಕಿಡಿ ಕಾರಿದರು.
ಜಿಲ್ಲಾಧಿಕಾರಿ, ಸಂಸದ ಮತ್ತು ಶಾಸಕರಿಗಿರುವ ಕಾಳಜಿ ಈ ಅಧಿಕಾರಿಗಳಿಗೇಕೆ ಇಲ್ಲ, 80 ವರ್ಷವಾಗಿರುವ ನಾನು ಡಿಜಿಟಲ್ ದಾಖಲೆ ಮಾಡುವ ಮೂಲಕ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ ಮೂಲಕ ಜಿಲ್ಲೆಯ/ನಗರದ ಬಡ ಜನತೆಗೆ ನ್ಯಾಯ ಒದಗಿಸಲು ಅವಿರತವಾಗಿ ಶ್ರಮಿಸುತ್ತಿದ್ದೇನೆ, ಖಾಟಚಾರದ ಡೇಟಾ ನಮಗೆ ಬೇಕಿಲ್ಲ ಕರಾರುವಕ್ಕಾದ ’ಡೇಟಾ ನೀಡಿ ಇಲ್ಲ ಖಾಲಿ ಮಾಡಿ’ ಎಂದು ಕಿಡಿಕಾರಿದರು.
ನಗರದಲ್ಲಿ ವಸತಿ ಇಲ್ಲದವರ ಬಡಾವಾಣೆವಾರು ಜಿಐಎಸ್ ಲೇಯರ್ ನೀಡಿ ಎಂದರೆ ಕ್ಲಿಕ್ ಮಾಡಿದ ತಕ್ಷಣ ಮಾಹಿತಿ ದೊರೆಯಬೇಕು. ವ್ಯಕ್ತಿವಾರು ಮಾಹಿತಿಯೂ ಲಭ್ಯವಾಗಬೇಕು, ಇವರಿಗೆ ನಗರದ ಯಾವ ಭಾಗದಲ್ಲಿ ಸರ್ಕಾರಿ ಜಮೀನು ಅಥವಾ ಭೂ ಸ್ವಾದೀನ ಮಾಡುವ ಮೂಲಕ ನಿವೇಶನ ನೀಡಲು ಗುರುತಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂಬ ಡಿಜಿಟಲ್ ಮಾಹಿತಿಯೂ ಬರಬೇಕು ಎಂದು ಎಚ್ಚರಿಸಿದರು.
ಬಡವರು ಬಡವರಾಗಿಯೇ ಇರಲು ಅಲ್ಲ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗಿಲ್ಲ, ಅವರ ಜೀವನ ಶೈಲಿ ಬದಾಲಾಯಿಸುವುದು ಸ್ಮಾರ್ಟ್ ಸಿಟಿ ಕನಸು. ಪ್ರತಿ ಸಭೆಯಲ್ಲಿ ಇಷ್ಟು ಜನರಿಗೆ ಸಹಾಯ ಮಾಡಲಾಗಿದೆ ಎಂಬ ಶೇಕಡವಾರು ಮಾಹಿತಿಯೂ ದೊರೆಯಬೇಕು ಇದು ಜಿಐಎಸ್ ಲೇಯರ್ ಮಾಡುವ ಗುರಿ ಎಂದು ಜಿಐಎಸ್ ಲೇಯರ್ ಬಗ್ಗೆ ಪಾಠ ಮಾಡಿದರು.
ಜಿಐಎಸ್ ಮಾಸ್ಟರ್ ಪ್ಲಾನ್ ಕಟ್ ಅಂಡ್ ಪೇಸ್ಟ್ ಆಗಿರಬಾರದು : ಜಿ.ಬಿ.ಜ್ಯೋತಿಗಣೇಶ್
ಪ್ರತಿ ಸಭೆಯಲ್ಲೂ ಹಿಂದಿನ ಸಭೆಯಲ್ಲಿ ಚರ್ಚೆಯಾದ ಲೇಯರ್‍ಸ್‌ಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗುವುದು, ನಡವಳಿಕೆಯಲ್ಲಿ ಪ್ರತಿಯೊಬ್ಬ ಸದಸ್ಯರ ಸಲಹೆ ದಾಖಲೆ ಮಾಡಿಕೊಂಡು ಮುಂದಿನ ಸಭೆಯಲ್ಲಿ ಉತ್ತರಿಸಬೇಕು. ಪ್ರತಿ ಸಭೆಯಲ್ಲೂ ಈ ಇಲಾಖೆಯ ಲೇಯರ್ ಪೂರ್ಣಗೊಂಡಿದೆ ಸಲಹೆಗಳಿದ್ದಲ್ಲಿ ಸಾರ್ವಜನಿಕರು ಸಲಹೆ ನೀಡಬಹುದು ಎಂಬ ಮನವಿಯೊಂದಿಗೆ ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತುಮಕೂರು ಮಹಾನಗರಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ಟೂಡಾ ಮೂರು ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದ ನಕಲು ಓದಿ ಇನ್ನೂ ಏನೇನು ಒಪ್ಪಂದಗಳು ಇವೆ ಎಂದು ಅರಿವಾಗುತ್ತದೆ ಎಂದರು.
2017 ರಲ್ಲಿ ಒಪ್ಪಂದ ಮಾಡಿಕೊಂಡಿರುವ ಯೋಜನೆ ಬಗ್ಗೆ ಇದೂವರೆಗೂ ಪೂರ್ಣಗೊಳಿಸಿಲ್ಲ ಎಂದರೆ ಏನರ್ಥ, ಸಮೀಕ್ಷೆ ವರದಿ ಡಸ್ಟ್ ಬಿನ್‌ಗೆ ಹಾಕಲು ಕೋಟಿ, ಕೋಟಿ ಹಣ ವ್ಯಯ ಮಾಡಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ರೂ ನಾಲ್ಕು ಕೋಟಿ ಹಣವನ್ನು ತುಮಕೂರು ನಗರದ ಜಿಐಎಸ್‌ಗೆ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ. ಐಸಿಸಿಸಿಗೆ ಸುಮಾರು ರೂ 60 ಕೋಟಿ ಹಣ ವ್ಯಯಮಾಡಲಿದ್ದೀರಿ ಸಭೆಗೆ ಬಂದು ನೀವು ತೋರಿಸುವ ಬಸ್ ಚಿತ್ರ ನೋಡಿ ಹೋಗಬೇಕೆ ಎಂದರು ಹಾಸ್ಯ ಮಾಡಿದರು.
ನಗರದ ಒಂದು ಅಂಗವಾಡಿಯಿಂದ ಆರಂಭಿಸಿ ಇಸ್ರೋ ವರೆಗಿನ ಪ್ರತಿಯೊಂದು ಇಲಾಖೆಯೂ ನಗರದಲ್ಲಿ ಯಾವ ಆಸ್ತಿ ಹೊಂದಿದೆ, ಖಾಸಗಿ ಆಸ್ತಿ ಎಷ್ಟಿದೆ, ಸರ್ಕಾರಿ ಆಸ್ತಿ ಎಷ್ಟಿದೆ ಎಂದರೆ ಕ್ಲಿಕ್ ಮಾಡಿದ ತಕ್ಷಣ ಮಾಹಿತಿ ಇರಬೇಕು. ಒಂದೊಂದು ಇಂಚಿನ ಭೂಮಿಯ ಡಿಜಿಟಲ್ ದಾಖಲೆ ಇರಬೇಕು, ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಎಂದರೆ ಕಟ್ ಅಂಡ್ ಪೇಸ್ಟ್ ಆಗಬಾರದು, ಎಲ್ಲಾ ಮಾಹಿತಿ ಕರಾರುವಕ್ಕಾಗಿ ಇರಬೇಕು ಎಂದು ಸೂಚಿಸಿದರು.
ಪ್ರತಿಸಭೆಯಲ್ಲಿ 5 ಜಿಐಎಸ್ ಲೇಯರ್ಸ್ ಜಿಲ್ಲಾಧಿಕಾರಿ: ರಾಕೇಶ್ ಕುಮಾರ್
ಪ್ರತಿ ಶುಕ್ರವಾರ ಐದು ಜಿಐಎಸ್ ಲೇಯರ್‍ಸ್ ಬಗ್ಗೆ ಪರಿಶೀಲನೆ ನಡೆಸಲಾಗುವುದು ಉದಾಹರಣೆ ರಸ್ತೆಗಳ ಜಿಐಎಸ್ ಲೇಯರ್ ಅಂದರೆ 150 ಅಡಿ ಅಗಲದ, 100 ಅಡಿ ಅಗಲದ. 80 ಅಡಿ ಅಗಲದ. 60 ಅಡಿ ಅಗಲದ. 40 ಅಡಿ ಅಗಲದ. 30 ಅಡಿ ಅಗಲದ. 20 ಅಡಿ ಅಗಲದ. 10 ಅಡಿ ಅಗಲದ ರಸ್ತೆಗಳ ಲೇಯರ್‌ನಲ್ಲಿ ಎಷ್ಟೆಷ್ಟು ಕಿಮೀ ರಸ್ತೆ ಇದೆ, ಅವುಗಳ ಮಾಲೀಕ್ತತ್ವ ಯಾರಿಗಿದೆ.
ಅಂದರೆ ಎನ್‌ಹೆಚ್, ಎನ್‌ಎಹೆಚ್, ಲೋಕೋಪಯೋಗಿ, ಟೂಡಾ, ಪಾಲಿಕೆ, ರೈಲ್ವೆ, ನೀರಾವರಿ ಅಚ್ಚುಕಟ್ಟು ರಸ್ತೆ ಹೀಗೆ ಮಾಲೀಕತ್ವದ ಲೇಯರ್ ಕೇಳಿದರೆ ಅವುಗಳ ಉದ್ದ, ಅಗಲ, ಒತ್ತುವರಿ, ರಸ್ತೆಗಳ ವಿಧಗಳಾದ ಮಣ್ಣಿನ ರಸ್ತೆ, ಜಲ್ಲಿಯ ರಸ್ತೆ, ಡಾಂಬರ್ ರಸ್ತೆ, ಸಿಮೆಂಟ್ ರಸ್ತೆ, ಅಭಿವೃದ್ಧಿಯಾಗದ ರಸ್ತೆ ಹೀಗೆ ಎಲ್ಲಾ ಮಹಿತಿಯೂ ದೊರೆಯಬೇಕು. ರಸ್ತೆಗೆ ಯಾವಾಗ ಯಾವ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂಬ ಮಾಹಿತಿಯೂ ದೊರೆಯಬೇಕು, ಅದು ಬಿಟ್ಟು ಗೂಗಲ್ ಇಮೇಜ್ ತೋರಿಸಿದರೆ ಒಪ್ಪುವುದಿಲ್ಲ ಎಂದು ಖಡಕ್ ಆಗಿ ನಿರ್ದೆಶನ ನೀಡಿದರು.
ಪ್ರತಿಯೊಂದು ಇಲಾಖೆಯವರು ಯಾವ ಲೇಯರ್ ಮಾಡಬೇಕು ಎಂಬ ಬಗ್ಗೆ ಅಧೀಕೃತ ಆದೇಶ ಹೊರಡಿಸಲು ತುಮಕೂರು ಮಹಾನಗರಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ಟೂಡಾ ಮೂರು ಸಂಸ್ಥೆಗಳು ಕುಳಿತು ಪಟ್ಟಿ ಮಾಡಿಕೊಂಡು ಬರಲು ಮತ್ತು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನೌಕರರಿಗೆ ತರಬೇತಿ ನೀಡಲು ಸೂಚಿಸಿದರು. ನಗರದಲ್ಲಿ ೧೮ ಜನ ಬಿಲ್ ಕಲೆಕ್ಟರ್ ಇದ್ದು ಅವರಿಗೆ ನೀಡಿರುವ ನಿರ್ಧಿಷ್ಟ ವ್ಯಾಪ್ತಿವಾರು ಎಷ್ಟೆಷ್ಟು ಸ್ವತ್ತಿನ ದಾಖಲೆ ಅಫ್‌ಡೇಟ್ ಆಗಿದೆ ಎಂಬ ಶೇಕಡವಾರು ನಿಖರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಸೂಚಿಸಿದರು.
ಕಾಫಿ–ಟೀ ಕುಡಿದು ಹೋಗಲು ಸಭೆಗೆ ಬರುವುದಿಲ್ಲ
ನಾಮನಿರ್ದೇಶನ ಸದಸ್ಯುರುಗಳಾದ ನಾವು ಕಾಫಿ-ಟೀ ಕುಡಿದು ಹೋಗಲು ಸಭೆಗೆ ಬರುವುದಿಲ್ಲ, ನಾವು ಕೇಳಿದ ಮಾಹಿತಿ ಇಲ್ಲ ಎಂದರೆ ಎನರ್ಥ, ಕಡೇ ಪಕ್ಷ ಇಂದು ಕೇಳಿದ ಮಾಹಿತಿಯನ್ನು ಮುಂದಿನ ಸಭೆಯಲ್ಲಾದರೂ ನೀಡಿ, ವಿಷಯವಾರು ಚರ್ಚೆ ಸಭೆಗೆ ಮಾತ್ರ ಸೀಮೀತವಾಗಬಾರದು ಎಂದು ಅಸಮಾದಾನ ವ್ಯಕ್ತಪಡಿಸಿದರು.
ಪ್ರತಿ ಶುಕ್ರವಾರ ಜಿಐಎಸ್ ಬಗ್ಗೆ ಪ್ರಗತಿ ಪರೀಶೀಲನೆ ಸಭೆ ನಡೆಸುವ ಮೂಲಕ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ದಿಟ್ಟ ಹೆಜ್ಜೆ ಇಟ್ಟಿದೆ ನಿಜಕ್ಕೂ ಇದೊಂದು ಉತ್ತಮ ಬೆಳವಣಿಗೆ ಎಂದು ಸದಸ್ಯರುಗಳಾದ ಕುಂದರನಹಳ್ಳಿ ರಮೇಶ್, ಸುಜ್ಞಾನ ಹೀರೇಮಠ್ ಚಂದ್ರಶೇಖರ್, ನರಸಿಂಹಮೂರ್ತಿ ಹರ್ಷ ವ್ಯಕ್ತಪಡಿಸಿದರು.