DELHI:Shakthipeeta foundation
ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಘೋಷಿಸಿದೆ.ಡಿಜಿಟಲ್ ಇಂಡಿಯಾದ ಭಾಗವಾಗಿ ದೇಶದ ಪ್ರತಿಯೊಂದು ಗ್ರಾಮಗಳಿಗೂ 1000 ದಿನಗಳಲ್ಲಿ ಭಾರತ ನೆಟ್ ಸಂಪರ್ಕವನ್ನು ಕಲ್ಪಿಸಲು ಉದ್ದೇಶಿಸಿದೆ.
ಈಗಾಗಲೇ ದೇಶಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಭಾರತ್ ನೆಟ್ ಸಂಪರ್ಕವನ್ನು ಕಲ್ಪಿಸಲಾಗಿದೆಯಂತೆ.ಎಲ್ಲ ನಗರ ಪ್ರದೇಶಗಳಲ್ಲಿ ಬಹುತೇಕ ಇಂಟರ್ನೆಟ್ ಸಂಪರ್ಕ ಇದೆ.
ಕೊರೋನಾ ಮಹಾಮಾರಿಯಿಂದ ಆನ್ ಲೈನ್ ತರಗತಿಗಳು ಆರಂಭವಾಗಿದ್ದರಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೂ ಇಂಟರ್ನೆಟ್ ಸೌಲಭ್ಯದ ಅಗತ್ಯವಿದೆ .
ಸಮೀಕ್ಷೆಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಮೂಲಕ ಇಂಟರ್ ನೆಟ್ ನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ ಎಂಬ ವರದಿ ಇದೆ
ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಡಿಜಿಟಲ್ ಇಂಡಿಯಾದಲ್ಲಿ 1ಕ್ರಾಂತಿಯೇ ಮೂಡಲಿದೆ ಎಂದರೆ ತಪ್ಪಾಗಲಾರದು
ಸ್ಕಿಲ್ ಇಂಡಿಯಾ ಮೂಲಕ ಆಸಕ್ತಿ ಇರುವವರಿಗೆ ಈ ಬಗ್ಗೆ ಡಿಜಿಟಲ್ ತರಬೇತಿ ನೀಡುವುದು ಸೂಕ್ತವಾಗಿದೆ
ಗ್ರಾಮೀಣ ಪ್ರದೇಶದಲ್ಲಿ ಯಾವ ಯಾವ ವರ್ಗದವರು ಯಾವ ರೀತಿ ಡಿಜಿಟಲ್ ಸೇವೆಯನ್ನು ಬಳಸಬಹುದಾಗಿದೆ ಎಂಬ ವಿವರವಾದ ಮಾಹಿತಿಗಳೊಂದಿಗೆ ಡಿಜಿಟಲ್ ಜನಜಾಗೃತಿ ಮೂಡಿಸುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇದೆಯಂತೆ.