18th April 2024
Share

TUMAKURU:SHAKTHIPEETA FOUNDATION

ಸ್ವಾತಂತ್ರ್ಯ ಪೂರ್ವದಿಂದದಲೂ ರಾಜ್ಯದಲ್ಲಿ , ದೇಶದಲ್ಲಿ ಅಥವಾ ಪ್ರಪಂಚದಲ್ಲಿ ಯಾವುದೇ ನೀರಾವರಿ ಯೋಜನೆಗಳನ್ನು ಕೈಗೊಂಡಾಗ ಪರ-ವಿರೋಧ ಹೇಳಿಕೆಗಳು ಬರುವುದು ಸಾಮಾನ್ಯವಾಗಿವೆ.

2016  ರಲ್ಲಿಯೇ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಮಾಡಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪೋರ್ಟಲ್ ನಲ್ಲಿ ಅಫ್ ಲೋಡ್ ಮಾಡಿದೆ. ಈ ವರದಿಯ ಪ್ರಕಾರ ಪ್ರತಿಯೊಂದು ಜಿಲ್ಲೆಗೆ ಅಗತ್ಯವಿರುವ ನೀರಿನ ಮಾಹಿತಿ ಸರಿಯಾಗಿ ಇದೆಯೇ ಅಥವಾ ತಪ್ಪಾಗಿ ಇದೆಯೇ ಎಂಬ ಬಗ್ಗೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಮಟ್ಟದಲ್ಲಿ ಪರಿಶೀಲನೆ ಮಾಡಬೇಕಿದೆ.

ಇದೂವರೆಗೂ ಸರ್ಕಾರ ಆನೇಕ ಪರಿಣಿತರ ನೇತೃತ್ವದಲ್ಲಿ ಅಧ್ಯಯನ ಸಮಿತಿಗಳನ್ನು ಮಾಡಿ ವರದಿ ಪಡೆದಿದೆ. ಅವುಗಳೆಲ್ಲವನ್ನೂ ಕ್ರೋಡೀಕರಿಸುವುದು ಅಗತ್ಯವಾಗಿದೆ. ಕೇಂದ್ರ ಸರ್ಕಾರದ ನದಿ ಜೋಡಣೆಯ ವರದಿಯಲ್ಲಿ ರಾಜ್ಯ ಪಡೆಯ ಬಹುದಾದ ನೀರಿನ ಪ್ರಮಾಣವನ್ನು ಗಮನಿಸ ಬೇಕಿದೆ.

 ಪ್ರಸ್ತುತ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದೆ ಇರುವುದು ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ದೊರಕಿಸುವುದು. ಅದ್ದರಿಂದ ಹಾಲಿ ಇರುವ ನೀರಾವರಿ ಯೋಜನೆಗಳಿಂದ ಗ್ರಾಮವಾರು ಬಳಸುತ್ತಿರುವ ನೀರಿನ ಮಾಹಿತಿ ಮತ್ತು ಗ್ರಾಮವಾರು ಅಗತ್ಯವಿರುವ ನೀರಿನ ಮಾಹಿತಿಯನ್ನು ರಾಜ್ಯದ ಜನರ ಮುಂದೆ ಮಂಡಿಸಬೇಕಿದೆ.

 ಇದೇ ಕೆಲಸಕ್ಕೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಂದಾಗಿದ್ದಾರೆ. ರಾಜ್ಯದ ನದಿ ಜೋಡಣೆಗೆ ಶ್ರಮಿಸುತ್ತಿರುವ ಶ್ರೀ ಜಿ.ಎಸ್.ಬಸವರಾಜ್ ರವರು ಸಹ ಎಲ್ಲರ ಅಭಿಪ್ರಾಯ ಪಡೆದು ಸಾಧಕ-ಬಾಧಕಗಳ ಬಗ್ಗೆ  ಪರಿಶೀಲನೆ ಮಾಡಿದ ನಂತರವೇ ಸೂಕ್ತವಾದ ಯೋಜನೆ ಮಾಡಲು ವಿಶೇಷ ಗಮನ ಹರಿಸಿದ್ದಾರೆ. ಇಲ್ಲಿ ಎಲ್ಲರಿಗೂ ತಾಳ್ಮೆ ಅಗತ್ಯ.

ಯಾವುದೇ ಯೋಜನೆಯ ಅಧ್ಯಯನ ಮಾಡಲು ಯಾರು ವಿರೋಧ ಮಾಡ ಬಾರದು. ಅಧ್ಯಯನ ಮಾಡಿದ ನಂತರ ತಮ್ಮ ಅಭಿಪ್ರಾಯ ಮಂಡಿಸುವುದು ಸೂಕ್ತವಾಗಿದೆ. ನಂತರ ಯಾವ ಯೋಜನೆಗೆ ಯಾರು ವಿರೋಧ ಮಾಡುತ್ತಾರೆ? ಏಕೆ ವಿರೋಧ ಮಾಡುತ್ತಾರೆ? ಇದಕ್ಕೆ ಪರಿಹಾರ ಏನು ಎಂಬ ಬಗ್ಗೆ ವಿರೋಧ ಮಾಡುವವರ ಅಭಿಪ್ರಾಯಗಳನ್ನು ಪಡೆದು ದಾಖಲಿಸುವ ಕಾರ್ಯ ನಡೆಯ ಬೇಕು. ಇದು ಪ್ರಜಾ ಪ್ರಭುತ್ವದ ಹಾದಿಯೂ ಹೌದು.

 ಈ ಹಿನ್ನಲೆಯಲ್ಲಿ ಶಿರಸಿಯಲ್ಲಿ ಬೇಡ್ತಿ ಹಾಗೂ ಅಘಿನಾಶಿನ ಸಂರಕ್ಷಣಾ ಸಮಿತಿ ಆಯೋಜಿಸಿದ್ಧ ಸಭೆಯಲ್ಲಿ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮತ್ತು ಇನ್ನೂ ಅನೇಕರು ಬೇಡ್ತಿ-ವರದಾ ನದಿ ಜೋಡಣೆ ಬಗ್ಗೆ ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದು ಸೂಕ್ತವಾಗಿದೆ. ವಿರೋಧ ಮಾಡುವವರ ಅಥವಾ ಪರದ ಯಾವುದೇ ಯೋಜನೆಗಳು ಒಂದು ಪಿಹೆಚ್‌ಡಿ ವರದಿ’ಯಂತೆ ಇರುತ್ತವೇ. ಎರಡನ್ನು ಪರಿಶೀಲಿಸುವುದು ಸರ್ಕಾರದ ಆಧ್ಯಕರ್ತವ್ಯವಾಗಬೇಕು.

 ತುಮಕೂರು ಜಿಲ್ಲೆಯ ಜಯಮಂಗಲಿ ನದಿಯ ಉಗಮಸ್ಥಾನದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ರಾಜ್ಯದ ನದಿ ಜೋಡಣೆ ನೋಡೆಲ್ ಆಫೀಸರ್ ಆದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಜಯಪ್ರಕಾಶ್ ರವರು ಹಾಗೂ ಅವರ ತಂಡ ಗಂಗೆಗೆ ಪೂಜೆ ಮಾಡುವ ಮೂಲಕ ರಾಜ್ಯದ ನದಿ ಜೋಡಣೆ ಮಾಹಿತಿ ಕ್ರೋಡೀಕರಿಸಲು ಆರಂಭಿಸಿದ ದಿನವೇ, ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ರಾಜ್ಯದ ನೀರಾವರಿ ಯೋಜನೆಗಳಿಗೆ ವಿರೋಧ ಮಾಡುವವರ ಮಾಹಿತಿಯನ್ನು ಸಂಗ್ರಹಮಾಡಲು ಇಂದಿನಿಂದ (25.03.2021) ಮುಂದಾಗಿದೆ.

 ಶೀಘ್ರದಲ್ಲಿಯೇ ಶಿರಸಿಗೆ ಭೇಟಿ ನೀಡಿ, ಮಾರಿಕಾಂಬ ಶಕ್ತಿಪೀಠ ತಾಯಿಯ ಆಶೀರ್ವಾದ ಪಡೆದು ಬೇಡ್ತಿ ಹಾಗೂ ಅಘಿನಾಶಿನ ಸಂರಕ್ಷಣಾ ಸಮಿತಿಯ ಅಭಿಪ್ರಾಯಗಳ ಮಾಹಿತಿ ಸಂಗ್ರಹಿಸಲಾಗುವುದು. ಇದೇ ರೀತಿ ರಾಜ್ಯದ ಯಾವುದೇ ಮೂಲೆಯಲ್ಲಿ ಯಾವುದೇ ನೀರಾವರಿ ಯೋಜನೆಗೆ ವಿರೋಧ ಮಾಡುವವರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು.